ನವದೆಹಲಿ : ಈ ವರ್ಷ ಎರಡನೇ ಬಾರಿ ಚಂದ್ರಗ್ರಹಣ ನಡೆಯಲಿದೆ. ಆದರೆ ಬಾನಿನಲ್ಲಿ ಈ ಬಾರಿ ನಡೆಯುವ ಚಂದ್ರಗ್ರಹಣ ಈ ಮೊದಲಿಗಿಂತಲೂ ಭಿನ್ನವಾಗಿರಲಿದೆ.

ಜೂನ್ 5 ರಂದು ರಾತ್ರಿ 11.15 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದ್ದು, ಮಧ್ಯರಾತ್ರಿ 12.45ಕ್ಕೆ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ಚಂದ್ರಗ್ರಹಣ ಬೆಳಗಿನ ಜಾವ 2.34ಕ್ಕೆ ಕೊನೆಗೊಳ್ಳಲಿದೆ. ಧರ್ಮಗ್ರಂಥಗಳಲ್ಲಿನ ನಿಜವಾದ ಚಂದ್ರ ಗ್ರಹಣಕ್ಕಿಂತ ಭಿನ್ನವೆಂದು ಪರಿಗಣಿಸಲಾಗಿದೆ. ಈ ಗ್ರಹಣದಲ್ಲಿ ನಿಯಮಗಳು ವಿಭಿನ್ನವಾಗಿವೆ ಮತ್ತು ಯಾವುದೇ ಸೂತಕವನ್ನು ಪರಿಗಣಿಸಲಾಗುವುದಿಲ್ಲ. ಪೂಜಾ ಪಠಣ ಮತ್ತು ಗ್ರಹಣ ಸಮಯದಲ್ಲಿ ಎಚ್ಚರಗೊಳ್ಳಲು ಯಾವುದೇ ನಿರ್ಬಂಧವಿಲ್ಲ.

ಜೂನ್ ತಿಂಗಳಿನಲ್ಲಿಯೇ ಈ ಬಾರಿ ಎರಡೆರಡು ಗ್ರಹಣಗಳು ಸಂಭವಿಸಲಿದೆ. ಜೂನ್ 5ರಂದು ಚಂದ್ರಗ್ರಹಣ ನಡೆಯಲಿದ್ದು, ಜೂನ್ 21ರಂದು ಸೂರ್ಯಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ದಕ್ಷಿಣ ಅಮೇರಿಕಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಏಷ್ಯಾ ಖಂಡದ ಹಲವು ಕಡೆಗಳಲ್ಲಿ ಗ್ರಹಣಗೋಚರವಾಗಲಿದೆ.