ಮುಂಬೈ: ಭಾರತ ಕ್ರಿಕೆಟ್ ತಂಡದ ಕೆಲ ಸ್ಟಾರ್ ಆಟಗಾರರು ಫಿಟ್’ನೆಸ್ ಸಾಬೀತು ಪಡಿಸಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂಬ ಶಾಕಿಂಗ್ ಸತ್ಯವನ್ನು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ (BCCI selection committee chairman Chetan Sharma) ಬಿಚ್ಚಿಟ್ಟಿದ್ದಾರೆ. ಖಾಸಗಿ ಸುದ್ದಿವಾಹಿನಿ ನಡೆದ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ (Chetan Sharma sting operation) ಈ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಡೋಪಿಂಗ್ ಟೆಸ್ಟ್’ನಲ್ಲಿ ಸಿಕ್ಕಿಬೀಳದಂತಹ ಡ್ರಗ್ಸ್ ಅನ್ನು ಇಂಜೆಕ್ಷನ್ ಮೂಲಕ ಆಟಗಾರರು ಫಿಟ್’ನೆಸ್ ಪರೀಕ್ಷೆಗೂ ಮುನ್ನ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅವರು ಫಿಟ್’ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. 80ರಿಂದ 85% ಅಷ್ಟೇ ಫಿಟ್ ಆಗಿರುವ ಆಟಗಾರ ಕೂಡ ಈ ಇಂಜೆಕ್ಷನ್ ಪರಿಣಾಮ ಫಿಟ್’ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ ಎಂದು ಸ್ಟಿಂಗ್ ಆಪರೇಷನ್’ನಲ್ಲಿ ಚೇತನ್ ಶರ್ಮಾ ಹೇಳಿದ್ದಾರೆ.
“ಭಾರತ ತಂಡದ ಆಟಗಾರರು 80% ಫಿಟ್ ಇದ್ದರೂ ಇಂಜೆಕ್ಷನ್ ತೆಗೆದುಕೊಂಡು 100% ಫಿಟ್ ಆಗುತ್ತಾರೆ. ಆ ಇಂಜೆಕ್ಷನ್’ಗಳು ನೋವು ನಿವಾರಕಗಳಲ್ಲ. ಆ ಇಂಜೆಕ್ಷನ್’ಗಳಲ್ಲಿ ಅಡಕವಾಗಿರುವ ಡ್ರಗ್ಸ್ ಡೋಪ್ ಟೆಸ್ಟ್’ನಲ್ಲೂ ಗಮನಕ್ಕೆ ಬರುವುದಿಲ್ಲ” ಎಂದು ಚೇತನ್ ಶರ್ಮಾ ಬಾಯ್ಬಿಟ್ಟಿದ್ದಾರೆ. ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೆಸರನ್ನು ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಉಲ್ಲೇಖಿಸಿದ್ದಾರೆ.
“ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿರಲಿಲ್ಲ. ಗಂಭೀರ ಗಾಯದ ಸಮಸ್ಯೆಗೊಳಗಾದರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪೂರ್ಣ ಪ್ರಮಾಣದ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರಲಿಲ್ಲ. ಆಡಲು ಅನ್’ಫಿಟ್ ಆಗಿದ್ದರೂ ಟೀಮ್ ಇಂಡಿಯಾ ಜೊತೆ ಬುಮ್ರಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು” ಕುತೂಹಲಕಾರಿ ಮಾಹಿತಿಯನ್ನು ಚೇತನ್ ಶರ್ಮಾ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : Sania Mirza : RCB ಮೆಂಟರ್ ಆಗಿ ಸಾನಿಯಾ ಮಿರ್ಜಾ ನೇಮಕ
ಇದನ್ನೂ ಓದಿ : CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಫೆ. 18ರಿಂದ ಆರಂಭ : ಹೊಸ ಮಾದರಿಯಲ್ಲಿ ಪಂದ್ಯಾವಳಿ
57 ವರ್ಷದ ಚೇತನ್ ಶರ್ಮಾ ಅವರನ್ನು ಇತ್ತೀಚೆಗಷ್ಟೇ ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮುಂದುವರಿಸಿತ್ತು. ಐಸಿಸಿ ಟಿ20 ವಿಶ್ವಕಪ್ ವೈಫಲ್ಯದ ನಂತರ ಈ ಹಿಂದಿನ ಆಯ್ಕೆ ಸಮಿತಿಯನ್ನು ವಜಾ ಮಾಡಿದ್ದ ಬಿಸಿಸಿಐ, ಚೇತನ್ ಶರ್ಮಾ ಅವರನ್ನು ಮಾತ್ರ ಸೆಲೆಕ್ಷನ್ ಕಮಿಟಿ ಚೀಫ್ ಆಗಿ ಮುಂದುವರಿಸಿತ್ತು. ಆದರೆ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಬಾಯ್ಬಿಟ್ಟಿರುವ ರಹಸ್ಯಗಳು ಟೀಮ್ ಇಂಡಿಯಾ ಆಟಗಾರರು ಮತ್ತು ಬಿಸಿಸಿಐಗೆ ಭಾರೀ ಮುಜುಗರ ತಂದಿಟ್ಟಿವೆ.
Chetan Sharma sting operation: Team India players taking injection for fitness; Selection committee chief reveals shocking secret