Derailed train: ಹಳಿ ತಪ್ಪಿದ ವೈಜಾಗ್-ಸಿಕಂದರಾಬಾದ್ ಗೋದಾವರಿ ಎಕ್ಸ್‌ಪ್ರೆಸ್ ರೈಲು : ತಪ್ಪಿತು ಬಾರೀ ದುರಂತ

ಹೈದರಾಬಾದ್: (Derailed train) ವಿಶಾಖಪಟ್ಟಣಂ-ಸಿಕಂದರಾಬಾದ್ ಗೋದಾವರಿ ಎಕ್ಸ್‌ಪ್ರೆಸ್‌ನ ಆರು ಬೋಗಿಗಳಿರುವ ರೈಲು ಹೈದರಾಬಾದ್ ಬಳಿಯ ಬೀಬಿನಗರ ಮತ್ತು ಘಟ್‌ಕೇಸರ್ ನಡುವೆ ಹಳಿ ತಪ್ಪಿದ ಘಟನೆ ನಡೆದಿದೆ. ಸದ್ಯ ಹಳಿತಪ್ಪಿದ್ದರಿಂದ ಆಗಬೇಕಾದ ದೊಡ್ಡ ದುರಂತ ತಪ್ಪಿಹೋಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಘಟ್‌ಕೇಸರ್‌ ರೈಲ್ವೆ ನಿಲ್ದಾಣದ ವ್ಯಾಪ್ತಿಯ ಎನ್‌ಎಫ್‌ಸಿ ನಗರ ಬಳಿ ವಿಶಾಖಪಟ್ಟಣಂ-ಸಿಕಂದರಾಬಾದ್ ಗೋದಾವರಿ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ 12727 ರ ಎಸ್‌1 ರಿಂದ ಎಸ್‌4, ಜಿಎಸ್ ಮತ್ತು ಎಸ್‌ಎಲ್‌ಆರ್ ಕೋಚ್‌ಗಳು ಹಳಿತಪ್ಪಿದವು (Derailed train) ಎಂದು ವರದಿಯಾಗಿದೆ. ಹಳಿ ತಪ್ಪಿದ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದೂ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ರೈಲು ಕಡಿಮೆ ವೇಗದಲ್ಲಿ ಚಲಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ವರದಿಯಾಗಿದೆ.

ಇದೀಗ ಹಳಿ ತಪ್ಪಿದ ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಿ ಅದೇ ರೈಲಿನಲ್ಲಿ ಪ್ರಯಾಣಿಕರನ್ನು ಬಿಡಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ 17.20 ಗಂಟೆಗೆ ವಿಶಾಖಪಟ್ಟಣದಿಂದ ಹೊರಟಿದ್ದ ರೈಲು 05.10 ಗಂಟೆಗೆ ಸಿಕಂದರಾಬಾದ್ ತಲುಪಬೇಕಿತ್ತು. ಹಳಿ ತಪ್ಪಿದ ಪರಿಣಾಮ ಕಾಜಿಪೇಟ್ ಮತ್ತು ಸಿಕಂದರಾಬಾದ್ ನಡುವಿನ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದ್ದು, ರೈಲ್ವೆ ಅಧಿಕಾರಿಗಳು ಹಳಿಯನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ : Mumbai crime news: ಪ್ರೇಯಸಿಯನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವವನ್ನು ಬಚ್ಚಿಟ್ಟು ಪರಾರಿ

ಐಸಿಸ್‌ ಭಯೋತ್ಪಾದಕರ ಜೊತೆ ನಂಟು ಹೊಂದಿರುವವರ ವಿರುದ್ಧ 60 ಸ್ಥಳಗಳಲ್ಲಿ ಎನ್‌ಐಎ ಶೋಧ

ಐಸಿಸ್ ಭಯೋತ್ಪಾದಕರ ಜೊತೆ ನಂಟು ಹೊಂದಿರುವವರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಸುಮಾರು 60 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಕಳೆದ ವರ್ಷ ಅಕ್ಟೋಬರ್ 23, 2022 ಮತ್ತು ನವೆಂಬರ್ 19, 2022 ರಂದು ನಡೆದ ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟಗಳಿಗೆ ಸಂಬಂಧಿಸಿದಂತೆ ಶೋಧ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : PM Kisan Yojana 13th installment : 4 ವರ್ಷ ಪೂರ್ಣಗೊಳಿಸಿದ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ : 13 ನೇ ಕಂತು ಬಿಡುಗಡೆ ಸಾಧ್ಯತೆ

ಕಳೆದ ವರ್ಷ ಅಕ್ಟೋಬರ್ 23, 2022 ಮತ್ತು ನವೆಂಬರ್ 19, 2022 ರಂದು ನಡೆದ ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟಗಳಿಗೆ ಸಂಬಂಧಿಸಿದಂತೆ ಶೋಧ ನಡೆಸಲಾಗುತ್ತಿದ್ದು, ತಮಿಳುನಾಡಿನ ಕೊಡುಂಗಯ್ಯೂರು ಮತ್ತು ಕೇರಳದ ಮನ್ನಾಡಿ ಸೇರಿದಂತೆ ಮೂರು ರಾಜ್ಯಗಳ ಸುಮಾರು ಅರವತ್ತು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : SBI Credit Card Charge Hike : ಕ್ರೆಡಿಟ್‌ ಕಾರ್ಡ್‌ ಬಳಕೆದಾರರ ಗಮನಕ್ಕೆ : ಮಾರ್ಚ್ 17 ರಿಂದ ಶುಲ್ಕದಲ್ಲಿ ಬದಲಾವಣೆ

Derailed train: Vizag-Secunderabad Godavari Express train derailed: another tragedy

Comments are closed.