(Human urine charges smartphone) ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ಫೋನ್ ಇದ್ದೇ ಇದೆ. ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರೂ ಕೂಡ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಆದರೆ ಎಲ್ಲರಿಗೂ ಮೊಬೈಲ್ ಬಳಸುವಾಗ ಬರುವ ಒಂದೇ ಒಂದು ಸಮಸ್ಯೆಯೆಂದರೆ ಅದು ಬ್ಯಾಟರಿ . ಕೆಲವು ಮೊಬೈಲ್ ಗಳಲ್ಲಿ ಫುಲ್ ಚಾರ್ಜ್ ಮಾಡಿದರೂ ಕೂಡ ಕೆಲವೇ ನಿಮಿಷಗಳಲ್ಲಿ ಅದು ಖಾಲಿಯಾಗಿರುತ್ತೆ. ಹೀಗಿರುವಾಗ ದೂರದ ಊರಿಗೆ ಹೋದಾಗ ಈ ಸಮಸ್ಯೆ ಎದುರಾದರೆ ಫೋನ್ ಸ್ವಿಚ್ ಆಫ್ ಮಾಡಬೇಕಾಗುತ್ತದೆ ಹೀಗಾಗಿ ಕೆಲವರು ಮೊಬೈಲ್ ಜೊತೆಗೆ ಪವರ್ ಬ್ಯಾಂಕ್ ಹೊತ್ತೊಯ್ಯುತ್ತಾರೆ.
ಆದರೆ ಇನ್ನು ಮುಂದೆ ಇದರ ಅಗತ್ಯವಿಲ್ಲ. ಎಲ್ಲಾದರೂ ಹೋದಾಗ ಮೊಬೈಲ್ ಚಾರ್ಜ್ ಮುಗಿದರೆ ಪವರ್ ಬ್ಯಾಂಕ್ ಚಾರ್ಜರ್ ನ ಅಗತ್ಯವಿಲ್ಲ. ಬದಲಾಗಿ ಮಾನವರ ಮೂತ್ರದ ಮೂಲಕ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು. ದೇಹದಿಂದ ಹೊರಬರುವ ಮೂತ್ರದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಹೌದು ದೇಹದಿಂದ ಹೊರಬರುವ ಮೂತ್ರದಿಂದ ವಿದ್ಯುತ್ ಉತ್ಪತ್ತಿಯಾಗುತ್ತದೆ. ಈ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್ ನಿಂದ ಮೊಬೈಲ್ ಅಥವಾ ಲ್ಯಾಪ್ ಟಾಪ್ ಅನ್ನು ಚಾರ್ಜ್ ಮಾಡಬಹುದು.
ಈ ಪ್ರಯೋಗವನ್ನು ಸಾಧ್ಯವಾಗಿಸಲು ಬ್ರಿಟನ್ ನ ವಿಜ್ಞಾನಿಗಳ ತಂಡ ನಿರಂತರವಾಗಿ ಪ್ರಯೋಗಗಳನ್ನು ನಡೆಸುತ್ತಿದೆ. ವರದಿಗಳ ಪ್ರಕಾರ, ಈ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿದ್ದು, ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸಿದರೆ ಅದು ಭವಿಷ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಮಾನವ ಮಲವಿಸರ್ಜನೆಯು ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಮೂತ್ರದಿಂದ ಉತ್ಪತ್ತಿಯಾಗುವ ವಿದ್ಯುತ್ ಮೂಲಕ ಚಿಕ್ಕ ಮೊಬೈಲ್ ಅನ್ನು ಚಾರ್ಜ್ ಮಾಡಬಹುದು ಎಂದು ಪ್ರಯೋಗಗಳು ಸಾಬೀತುಪಡಿಸಿದೆ.
ಈ ರೀತಿಯ ವಿದ್ಯುತ್ ಉತ್ಪಾದನಾ ಪ್ರಕ್ರಿಯೆಯನ್ನು ಕೈಗೊಳ್ಳಲು ಮೈಕ್ರೊಬಿಯಲ್ ಫ್ಯೂಯಲ್ ಸೇಲ್ ಅನ್ನು ಬಳಸಲಾಗುತ್ತದೆ. ಇದು ಶಕ್ತಿಯನ್ನು ಪರಿವರ್ತನೆ ಮಾಡುತ್ತದೆ. ಇದಕ್ಕಾಗಿ ಮೂತ್ರದಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಬೆರೆತಿರುತ್ತವೆ. ಬ್ರಿಸ್ಟಲ್ ರೋಬೋಟಿಕ್ಸ್ ಪ್ರಯೋಗಾಲಯದಲ್ಲಿ ಮೂತ್ರದಿಂದ ತಯಾರಿಸಿದ ಮೂತ್ರದಿಂದ ತಯಾರಿಸಿದ ಈ ವಿದ್ಯುತ್ ಉಚಿತವಾಗಿರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ತಂತ್ರಜ್ಞಾನ ಯಶಸ್ವಿಯಾದರೆ, ಇದನ್ನು ಸ್ನಾನಗೃಹಗಳಲ್ಲಿ ಬಳಸಬಹುದು. ಈ ವಿದ್ಯುತ್ ಶವರ್, ಲೈಟಿಂಗ್, ರೇಜರ್‌ಗಳು ಮತ್ತು ಸ್ಮಾರ್ಟ್‌ಹೋಮ್ ಡಿವೈಸ್ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಗೋವಿನ ಸಗಣಿ ಮತ್ತು ಮೂತ್ರದಿಂದ ಇಂಧನವನ್ನು ಪಡೆಯುವುದು ನಮಗೆಲ್ಲರಿಗೂ ತಿಳಿದಿದೆ. ಮಾನವನ ಮಲಮೂತ್ರ ಸಹ ಈಗ ಈ ಸಾಲಿಗೆ ಸೇರ್ಪಡೆಯಾಗಲಿದೆ. ಮಾನವ ಮೂತ್ರದಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದಿಸುವುದರಿಂದ ವಿದ್ಯುತ್ ಬೇಡಿಕೆಯನ್ನು ಪೂರೈಸಲುಇದು ಸಹಾಯ ಮಾಡುತ್ತದೆ. ಏಕೆಂದರೆ, ಪ್ರಸ್ತುತ ವಿದ್ಯುತ್ ಅಗತ್ಯವನ್ನು ನೋಡಿದರೆ, ವಿದ್ಯುತ್ ಉತ್ಪಾದನಾ ವಲಯದ ಮೇಲೆ ಭಾರೀ ಒತ್ತಡವಿದೆ. ಈ ಕಾರಣಕ್ಕೆ ವಿಜ್ಞಾನಿಗಳು ವಿದ್ಯುತ್ ಉತ್ಪಾದನೆಯ ಹೊಸ ಮೂಲಗಳನ್ನು ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ : Twitter Shuts 2 Office : ದೆಹಲಿ ಮತ್ತು ಮುಂಬೈನಲ್ಲಿರುವ ಟ್ವಿಟರ್ ಕಛೇರಿಗೆ ಬೀಗ ಹಾಕಿದ ಎಲಾನ್ ಮಸ್ಕ್; ಕಾರಣ ಏನು ಗೊತ್ತಾ…
Human urine charges smartphone: Did you know: Human urine can also charge a smartphone