ICC world test championship : ಮತ್ತೆ ಮೂರೇ ದಿನಗಳಲ್ಲಿ ಕಾಂಗರೂ ಮರ್ಧನ, ದೆಹಲಿಯಲ್ಲೂ ಸ್ಪಿನ್ ಬಲೆಗೆ ಬಿದ್ದ ಆಸೀಸ್

ದೆಹಲಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border – Gavaskar test series) 2ನೇ ಪಂದ್ಯವನ್ನೂ ಟೀಮ್ ಇಂಡಿಯಾ ಕೇವಲ ಮೂರೇ ದಿನಗಳಲ್ಲಿ ಗೆದ್ದುಕೊಂಡಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ಭಾರತ 6 ವಿಕೆಟ್’ಗಳಿಂದ (ICC world test championship) ಗೆದ್ದುಕೊಂಡಿತು. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು. ನಾಗ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಅಂತರದಲ್ಲಿ ಗೆದ್ದುಕೊಂಡಿತ್ತು.

ಪ್ರಥಮ ಇನ್ನಿಂಗ್ಸ್’ನಲ್ಲಿ ಒಂದು ರನ್ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್’ನಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 113 ರನ್ನಿಗೆ ಆಲೌಟಾಯಿತು. ಒಂದು ವಿಕೆಟ್ ನಷ್ಟಕ್ಕೆ 61 ರನ್’ಗಳಿಂದ 3ನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 2 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇದಕ್ಕಿದ್ದಂತೆ ರವೀಂದ್ರ ಜಡೇಜ ಅವರ ಮಾರಕ ದಾಳಿಗೆ ತತ್ತರಿಸಿ ನಾಟಕೀಯ ಕುಸಿತ ಕಂಡ ಆಸೀಸ್ ಕೇವಲ 28 ರನ್’ಗಳ ಅಂತರದಲ್ಲಿ ಕೊನೆಯ 8 ವಿಕೆಟ್’ಗಳನ್ನು ಕಳೆದುಕೊಂಡಿತು. ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜ 42 ರನ್ನಿತ್ತು 7 ವಿಕೆಟ್ ಕಬಳಿಸಿದ್ರೆ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು.

ಇದನ್ನೂ ಓದಿ : Saurashtra Ranji Champions : ಬಂಗಾಳವನ್ನು ಬಗ್ಗು ಬಡಿದು 2ನೇ ಬಾರಿ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ

ಇದನ್ನೂ ಓದಿ : Axar Patel : ಟೀಮ್ ಇಂಡಿಯಾಗೆ ಆಪದ್ಬಾಂಧವನಾದ ಅಕ್ಷರ್, ರೋಚಕ ಘಟ್ಟದಲ್ಲಿ ದೆಹಲಿ ಟೆಸ್ಟ್; 2ನೇ ದಿನ ಆಸೀಸ್ ಮೇಲುಗೈ

ಇದನ್ನೂ ಓದಿ : KL Rahul – Mayank Agarwal : ಆಸೀಸ್ ವಿರುದ್ಧ ಕೆ.ಎಲ್ ರಾಹುಲ್ ಮತ್ತೆ ಫೇಲ್, ಗೆಳೆಯನ ಸ್ಥಾನವನ್ನು ಆಕ್ರಮಿಸಿಕೊಳ್ತಾರಾ ಮತ್ತೊಬ್ಬ ಕನ್ನಡಿಗ?

ನಂತರ 115 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ 4 ವಿಕೆಟ್ ನಷ್ಟದಲ್ಲಿ ಗುರಿ ತಲುಪಿ 6 ವಿಕೆಟ್’ಗಳ ಸುಲಭ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ (ICC world test championship) ಮತ್ತಷ್ಟು ಹತ್ತಿರವಾಯಿತು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಇಂದೋರ್’ನಲ್ಲಿ ಆರಂಭವಾಗಲಿದೆ.

ICC world test championship : Kangaroo Mardhan again in three days, Aussies fell into spin trap in Delhi too

Comments are closed.