ಕೆ.ಆರ್.ಬಾಬು (ಹಿರಿಯ ಪತ್ರಕರ್ತರು)
ಬರಡು ಭೂಮಿಯಲ್ಲಿ ಶ್ರೀಗಂಧ ಬೆಳೆಯೋದು ಅಂದ್ರೆ ಅದೇನೂ ಸಾಮಾನ್ಯದ ಕೆಲಸವಲ್ಲ. ಶ್ರೀಗಂಧ ಕಾಡಿನ ಬೆಳೆಯಾದ್ರು ಗಿಡ ಒಂದಿಷ್ಟು ಚೇತರಿಸಿಕೊಳ್ಳೋ ತನಕ ನೀರು ಅತ್ಯವಶ್ಯಕ. ರೈತ ತನ್ನ ಬುದ್ದಿಶಕ್ತಿಯನ್ನ ಬಳಸಿಕೊಂಡು ಬರಡು ಭೂಮಿಯಲ್ಲಿ ಬಂಗಾರದಂತ ಬೆಳೆ ಬೆಳೆಯಬಹುದು. ನೀವು ಕೂಡ ಶ್ರೀಗಂಧ ಬೆಳೆದು ಶ್ರೀಮಂತರಾಗಬೇಕಾ..? ಈ ಸ್ಟೋರಿ ಓದಿ..

ಶ್ರಿಗಂಧ…ಕಾಡಿನ ಸಸ್ಯವಾದ್ರು ಆ ಗಿಡಗಳನ್ನ ಸುಮಾರು ಐದಾರು ವರ್ಷ ಮಗುವಿನಂತೆ ಪಾಲಾನೆ ಪೋಷಣೆ ಮಾಡ್ಬೇಕು. ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಕೊಡಲೇಬೇಕು.. ಕೆಲವರಿಗೆ ನೀರಿನ ಅನುಕೂಲ ಇರೋದಿಲ್ಲ. ಮಳೆ ನೀರನ್ನ ಬಳಸಿಕೊಂಡು ಈ ಬೆಳೆ ಬೆಳೆಯಲುಬಹುದು. ಎಕರೆಗೆ 300 ಗಿಡದಂತೆ ಶ್ರೀಗಂಧದ ಸಸಿ ಹಾಕಿ ಅವುಗಳನ್ನ ನಾಲ್ಕೈದು ವರ್ಷ ಪೋಷಣೆ ಮಾಡಿದ್ರೆ ಸಾಕು..ನಂತ್ರ ಕಾಡಿನ ಸಸ್ಯಗಳಂತೆ ಅವುಗಳ ಪಾಡಿಗೆ ಅವು ಬೆಳೆದುಕೊಳ್ತವೆ..

ಶ್ರೀಗಂಧ ಬೆಳೆಯಲೆಂದು ಸರ್ಕಾರಿ ಸೌಲಭ್ಯಗಳು ಕೂಡ ದೊರೆಯುತ್ತವೆ. ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಿಮಗೆ ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ನೀರು ಶೇಖರಣೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಂಡ್ರೆ ಉತ್ತಮ. ಸುಮಾರು ನಾಲ್ಕು ವರ್ಷ ನಾಟಿ ಗೊಬ್ಬರ ಅತ್ಯವಶ್ಯಕ. ಶ್ರೀಗಂಧದ ಸಸಿ ಮತ್ತು ಬೀಜಗಳು ತೋಟಗಾರಿಕೆ ಇಲ್ಲವೆ ಅರಣ್ಯ ಇಲಾಖೆಯಲ್ಲಿ ಲಭ್ಯ. ಗಂಧದ ಎಣ್ಣೆ ದೇಶ ವಿದೇಶಗಳಲ್ಲಿ ಭಾರಿ ಬೇಡಿಕೆ ಇರೋದ್ರಿಂದ ಶ್ರಿಗಂಧದ ಕೃಷಿ ನಷ್ಟ ತರಲಾರದು. ಗಿಡವೊಂದರಿಂದ 3 ರಿಂದ 4 ಲಕ್ಷ ರೂಪಾಯಿ ಅದಾಯ ಗ್ಯಾರಂಟಿ. ಆದ್ರೆ ಇದಕ್ಕೆ ಏನಿಲ್ಲ ಅಂದ್ರು ನೀವು ಸರಿ ಸುಮಾರು 20 ವರ್ಷಗಳ ಕಾಲ ರಕ್ಷಣೆ ನೀಡಿದ್ರೆ ನೀವು ಕೋಟ್ಯಾಧಿಪತಿಯಾಗಬಹುದು. ಆದರೆ ನಿಮ್ಮ ಬುದ್ದಿವಂತಿಕೆ ಮತ್ತು ಶ್ರದ್ದೆ ಅತೀ ಅವಶ್ಯಕ.

ಇನ್ನು ಶ್ರೀಗಂಧ ಬೆಳೆಯಲು ಸಾಕಷ್ಟು ಕಾನೂನು ಕಟ್ಟುಪಾಡುಗಳು ಇವೆ. ಶ್ರೀಗಂಧ ಒಂದು ಪರವಾಲಂಭಿ ಮರ. ಈ ಬೆಳೆಯನ್ನ ನಾಟಿ ಮಾಡಿ ಲಾಭ ಪಡೆಯಲು 20 ವರ್ಷ ಕಾಯಲೇಬೇಕಾಗುತ್ತದೆ. ಹೀಗಾಗಿ ಒಂದೇ ಬೆಳೆಗೆ ಅವಲಂಭಿತವಾದ್ರೆ ಕಷ್ಟ. ವಾರ್ಷಿಕ ಬೆಳೆಗಳಾದ ಸಪೋಟ, ಮಾವು ಹಲಸು ಜೊತೆ ಮಿಶ್ರ ಬೆಳೆಯಾಗಿ ಶ್ರಿಗಂಧ ಬೆಳೆಯಬಹುದು. ಇದರಿಂದ ಸಸ್ಯ ವೈವಿಧ್ಯತೆ ಕಾಪಾಡಿದಂತಾಗುತ್ತದೆ. ಜೊತೆಗೆ ಗಿಡಗಳು ಬೆಳೆದಂತೆ ತೋಟದ ಮೌಲ್ಯವೂ ಅಧಿಕವಾಗುತ್ತದೆ.

ಈ ಹಿಂದೆ ಶ್ರೀಗಂಧ ಎಲ್ಲೆ ಬೆಳೆದರು ಅದು ಸರ್ಕಾರದ ಸ್ವತ್ತು ಎಂಬಂತಿತ್ತು. ಆದ್ರೆ ಕರ್ನಾಟಕ ಅರಣ್ಯ ಕಾಯ್ದೆ 2001 ಸೆಕ್ಷನ್ 83ರ ಪ್ರಕಾರ ಮರ ಯಾರ ಜಮೀನಿನಲ್ಲಿ ಬೆಳೆಯುತ್ತೋ ಅದು ಜಮೀನಿನ ಮಾಲೀಕನ ಸ್ವತ್ತು ಎಂಬಂತೆ ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ರೈತರು ಯಾವುದೇ ಆತಂಕ ಪಡುವಂತಿಲ್ಲ. ಇನ್ನು ಶ್ರೀಗಂಧ ಬೆಳೆಯಲು ಸರ್ಕಾರ ಕೂಡ ಪ್ರೋತ್ಸಾಹ ನೀಡುತ್ತದೆ. ಅರಣ್ಯ ಇಲಾಖೆಯಿಂದ ಸಹಕಾರ ಸಿಗುತ್ತದೆ. ತೋಟಗಾರಿಕೆ ಇಲಾಖೆ ಔಷಧಿ ಮತ್ತು ಸುಗಂಧ ಬೆಳೆಗಳ ಅಭಿವೃದ್ದಿ ಯೋಜನೆ ಅಡಿ ಗಂಧದ ಸಸಿಗಳನ್ನ ನೀಡುತ್ತದೆ. ಈಗಾಗಲೇ ಅನೇಕ ರೈತರು ಶ್ರೀಗಂಧ ಬೆಳೆಯುತ್ತಿದ್ದಾರೆ. ಮಣ್ಣಿನ ಫಲವತ್ತತೆ ಹಾಳು ಮಾಡುವ ನೀಲಗಿರಿ ಬೆಳೆಯೋದರ ಬದಲು ಶ್ರೀಗಂಧ ಬೆಳೆಸಿ ಶ್ರೀಮಂತರಾಗಿ.