Fertilizer subsidy : ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರಕಾರ : ರಸಗೊಬ್ಬರ ಸಬ್ಸಿಡಿ ಕಂತು ಬಿಡುಗಡೆ

ನವದೆಹಲಿ : ದೇಶದ ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಲೆಂದು ಸರಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಂತೆ ವ್ಯವಸಾಯದಿಂದ ಉತ್ತಮ ಫಸಲನ್ನು ತೆಗೆಲು ರೈತರು ಸಾವಯವ ಗೊಬ್ಬರದ ಜೊತೆಯಲಿ ರಸಗೊಬ್ಬರ (Fertilizer subsidy) ವನ್ನು ಬಳಸುತ್ತಾರೆ. ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳ ಬೆಲೆಯಿಂದ ಒತ್ತಡದಲ್ಲಿರುವ ರಸಗೊಬ್ಬರ ವಲಯಕ್ಕೆ ಸರಕಾರ ಈ ಆರ್ಥಿಕ ವರ್ಷದ ಸಬ್ಸಿಡಿಯ ಮತ್ತೊಂದು ಕಂತನ್ನು ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿಯನ್ನು ನೀಡಿದೆ.

ಸರಕಾರವು ರಸಗೊಬ್ಬರ ವಲಯದ ಮುಂದಿನ ಸಬ್ಸಿಡಿ ಕಂತನ್ನು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಬಿಡುಗಡೆ ಮಾಡಬಹುದು ಎಂದು ತಿಳಿಸಿದ್ದಾರೆ. ರಸಗೊಬ್ಬರ ವಲಯಕ್ಕೆ ರೂ. 2.5 ಲಕ್ಷ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದಾಗಿ ಕೇಂದ್ರ ಸರಕಾರ ಭರವಸೆಯನ್ನು ನೀಡಿದೆ. ಈ ಕುರಿತು ಸರಕಾರ ರಸಗೊಬ್ಬರ ವಲಯಕ್ಕೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂದು ಆರ್ಥಿಕ ನೀತಿ ಸಂಪಾದಕ ಲಕ್ಷ್ಮಣ್ ರಾಯ್‌ ಹೇಳಿದ್ದಾರೆ. ರಸಗೊಬ್ಬರ ವಲಯ ಅನುಭವಿಸುತ್ತಿರುವ ನಷ್ಟದಿಂದ ಪಾರು ಮಾಡಲು ಸರಕಾರ ಮತ್ತೊಂದು ಹಂತದ ಸಹಾಯಧನ ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ. ರಸಗೊಬ್ಬರ ಸಬ್ಸಿಡಿಯನ್ನು ಹೆಚ್ಚಿಸುವುದರಿಂದ ರೈತರಿಗೆ ಹೆಚ್ಚಿದ ಬೆಲೆಯಿಂದ ಪರಿಹಾರ ಸಿಗುತ್ತದೆ.

ಇದನ್ನೂ ಓದಿ : PM Kisan Update : ಪಿಎಂ ಕಿಸಾನ್ ಯೋಜನೆಯಿಂದ 6000 ರೂ. ಜಮೆ ಆಗಬೇಕಾ : ಹಾಗಾದ್ರೆ ತಕ್ಷಣವೇ ಈ ಕೆಲಸ ಮಾಡಿ

ಇದನ್ನೂ ಓದಿ : PM Kisan Yojana 13th Installment : ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಬಿಗ್‌ ಶಾಕ್‌ : 2 ಕೋಟಿ ರೈತರಿಗೆ ಹಣ ಸಿಗಲ್ಲ

ಇದನ್ನೂ ಓದಿ : PM Kisan Samman Nidhi : ಪಿಎಂ ಕಿಸಾನ್ ಕಂತು ಪಡೆಯಲು ಯಾರು ಅರ್ಹರು ? ಹಣ ಪಡೆದವರಿಗೆ ಕಾದಿದೆ ಶಾಕ್

ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚಿದ ರಸಗೊಬ್ಬರ ಮತ್ತು ಕಚ್ಚಾವಸ್ತುಗಳ ಬೆಲೆ ಒತ್ತಡದಿಂದ ರೈತರಿಗೆ ಪರಿಹಾರ ಸಿಗುತ್ತದೆ.‌ ಬಜೆಟ್‌ ಅಧಿವೇಶನ ನಡೆಯುವಾಗ ರಸಗೊಬ್ಬರಕ್ಕಾಗಿ ಮತ್ತೊಂದು ದೊಡ್ಡ ಸಬ್ಸಿಡಿಯನ್ನು ನೀಡಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಲಕ್ಷ್ಮಣ್‌ ರಾಯ್‌ ಹೇಳಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಸರಕಾರ ಈ ಕಂತನ್ನು ಬಿಡುಗಡೆ ಮಾಡಬಹುದು. ರಸಗೊಬ್ಬರ ಕ್ಷೇತ್ರದ ಕಾಳಜಿ ಕುರಿತು ಇತ್ತೀಚೆಗೆ ರಸಗೊಬ್ಬರ ಸಚಿವರನ್ನು ನಿಯೋಗ ಭೇಟಿ ಮಾಡಿತ್ತು. ರಸಗೊಬ್ಬರ ಕ್ಷೇತ್ರದ ಸವಾಲುಗಳು ಮತ್ತು ತೊಂದರೆಗಳ ಬಗ್ಗೆ ನಿಯೋಗ ಸಚಿವರಿಗೆ ಮಾಹಿತಿ ನೀಡಿದ್ದರು. 2023-24ರ ಆರ್ಥಿಕ ವರ್ಷದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ಸಬ್ಸಿಡಿಯನ್ನು ಕಡಿಮೆ ಮಾಡಬಹುದು ಎಂದು ಫರ್ಟಿಲೈಸರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಡಿಸೆಂಬರ್‌ 6ರಂದು ಹೇಳಿದೆ.

Central government gave good news to farmers: release of fertilizer subsidy installment

Comments are closed.