ಬೇಸಿಗೆಯ ಬಿಸಿನಲ್ಲಿ ತಂಪೆರೆಯುವ ಸವಿಯಾದ ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ದೊಡ್ಡ ಸ್ಥಾನವಿದೆ. ಆದರೆ ಈ ಭಾರಿ ಮಾವಿನ ಹಣ್ಣನ್ನು (Delicious Mango ) ಸವಿಯೋಕೆ ನೀವೊಂದಿಷ್ಟು ಕಾಯಲೇ ಬೇಕು. ಹೌದು ಹವಾಮಾನ ವೈಪರೀತ್ಯದಿಂದ ಮಾವು ಹಣ್ಣಿನ ಮಾರುಕಟ್ಟೆಗೆ ಕಾಲಿಡೋಕೆ ವಿಳಂಬವಾಗ್ತಿದ್ದು ಇದರೊಂದಿಗೆ ದರ ಕೂಡ ನಿಮ್ಮ ಜೇಬು ಸುಡೋದು ಗ್ಯಾರಂಟಿ. ಪ್ರತಿ ವರ್ಷ ಮಾರ್ಚ್ ಕೊನೆಯ ವಾರದ ಹೊತ್ತಿಗೆ ಅಂದ್ರೆ ಹತ್ತಿರ ಹತ್ತಿರ ಯುಗಾದಿ ಮಾವಿನ ಹೊಸ ಫಸಲು, ಮಾವಿನ ಹಣ್ಣು ಮಾರುಕಟ್ಟೆಗೆ ಬರೋದು ವಾಡಿಕೆ. ಆದರೆ ಈ ಭಾರಿ ನವೆಂಬರ್ ನಲ್ಲಿ ಸುರಿದ ಭಾರಿ ಮಳೆ ಮಾವಿನ ಫಸಲಿಗೆ ( Delicious Mango )ಅಡ್ಡಿ ಉಂಟುಮಾಡಿದೆ.

ಹೀಗಾಗಿ ಈ ಭಾರಿ ಎಪ್ರಿಲ್ ಮೊದಲ ವಾರ ಸಮೀಪಿಸಿದ್ದರೂ ಇನ್ನೂ ಸಮರ್ಪಕ ಪ್ರಮಾಣದಲ್ಲಿ ಮಾವಿನ ಫಸಲು ಮಾರುಕಟ್ಟೆಗೆ ಬಂದಿಲ್ಲ. ಅಲ್ಲಲ್ಲಿ ಕೊಂಚ ಕೊಂಚ ಮಾವಿನ ಹಣ್ಣು ಮಾರಾಟ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬಂದಿಲ್ಲ. ಮಾತ್ರವಲ್ಲ ಈ ಭಾರಿ ಮಾವಿನ ಫಸಲು ಕೂಡ ಕಡಿಮೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಈ ವರ್ಷ ಕೇವಲ 40 ರಿಂದ 50 ರಷ್ಟು ಮಾತ್ರ ಮಾವು ಇಳುವರಿ ಬರಬಹುದು ಎಂದು ಮಾವು ನಿಗಮದ ತಾಂತ್ರಿಕ ಸಮಿತಿ ಅಂದಾಜಿಸಿದೆ.
ಇನ್ನೂ ಒಂದು ತಿಂಗಳು ವಿಳಂಬವಾಗಿ ಅಂದ್ರೇ ಮೇ ವೇಳೆಗೆ ಮಾವಿನ ಹಣ್ಣು ಮಾರುಕಟ್ಟೆಗೆ ಬರಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಇನ್ನೊಂದೆಡೆ ಈ ಭಾರಿ ಮಾವಿನ ಫಸಲು ಕಡಿಮೆ ಆಗಿರೋದರಿಂದ ಸಹಜವಾಗಿ ಬೆಲೆ ಕೂಡ ಏರಿಕೆಯಾಗಲಿದೆ.

ರಾಜಧಾನಿಗೆ ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಅಕ್ಕ ಪಕ್ಕದ ಜಿಲ್ಲೆಗಳಿಂದ ಮಾವು ರಫ್ತಾಗುತ್ತದೆ. ಆದರೆ ಈ ಭಾರಿ ಅಕಾಲಿಕ ಮಳೆ ಮಾವಿನ ಫಸಲಿನ ಮೇಲೆ ದುಷ್ಪರಿಣಾಮ ಬೀರಿದೆ. ಒಟ್ಟಿನಲ್ಲಿ ಈ ಭಾರಿ ಯುಗಾದಿ ಹಬ್ಬಕ್ಕೂ ಮಾವು ಸವಿಯುವ ಭಾಗ್ಯ ಜನರಿಗೆ ಸಿಗದಂತಾಗಿದ್ದು, ಹಣ್ಣಿನ ರಾಜ ಮಾವು ಸವಿಯಲು ನೀವು ಇನ್ನಷ್ಟು ಕಾಲ ಕಾಯಲೇಬೇಕಿದೆ.
ಇದನ್ನೂ ಓದಿ : ಭಾರೀ ಬೇಡಿಕೆ ಪಡೆದುಕೊಂಡ ಈ ಅಡಿಕೆ ಗಿಡ! ಕುಬ್ಜ ತಳಿ ಅಡಿಕೆ ಗಿಡದ ಬಗ್ಗೆ ನಿಮಗೆ ತಿಳಿದಿದೆಯೇ?
ಇದನ್ನೂ ಓದಿ : PM Kisan : ರೈತರಿಗೆ ಸಿಹಿಸುದ್ದಿ, PM ಕಿಸಾನ್ KYC ಕೊನೆಯ ದಿನಾಂಕ ವಿಸ್ತರಣೆ
Delicious Mango is not coming to market, you know what the reason is