LPG cylinder : ಯುಗಾದಿಗೆ ಎಲ್‌ಪಿಜಿ ಶಾಕ್‌ : ಸಿಲಿಂಡರ್ ಬೆಲೆಯಲ್ಲಿ 250 ರೂ. ಹೆಚ್ಚಳ

ನವದೆಹಲಿ : ಯುಗಾದಿಯ ಹೊತ್ತಲ್ಲೇ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಗ್ರಾಹಕರಿಗೆ ಶಾಕ್‌ ಕೊಟ್ಟಿದೆ. 19 ಕೆಜಿ ವಾಣಿಜ್ಯ ಅಡುಗೆ ಅನಿಲದ ಬೆಲೆ ಇಂದು ಪ್ರತಿ ಸಿಲಿಂಡರ್ ಗೆ 250 ರೂ. ಇಂದಿನಿಂದ ಎಲ್‌ಪಿಜಿ (LPG cylinder ) ಬೆಲೆ ಪ್ರತೀ ಸಿಲಿಂಡರ್‌ಗೆ 250 ರೂ.ಗಳಷ್ಟು ಹೆಚ್ಚಳವಾಗಲಿದೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2253 ರೂ. ಆಗಲಿದೆ.

ಕೇವಲ ವಾಣಿಜ್ಯ ಸಿಲಿಂಡರ್‌ (LPG cylinder ) ಬೆಲೆಯಲ್ಲಿ ಮಾತ್ರವೇ ಏರಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ. ಕಳೆದ ಎರಡು ತಿಂಗಳಲ್ಲಿ, 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತೀ ಸಿಲಿಂಡರ್‌ಗೆ 346ರೂ. ನಂತೆ ಹೆಚ್ಚಿಸಲಾಗಿದೆ. ಇದಕ್ಕೂ ಮುನ್ನ ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ನಂತರದಲ್ಲಿ ಮಾರ್ಚ್ 22 ರಂದು ಸಿಲಿಂಡರ್‌ ಬೆಲೆಯಲ್ಲಿ 9 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು.

ಇನ್ನು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮಾರ್ಚ್ 22 ರಂದು 50 ರೂ. ನಷ್ವು ಹೆಚ್ಚಿಸಲಾಗಿದೆ. ದರ ಹೆಚ್ಚಳದ ನಂತರದಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಈಗ ದೆಹಲಿಯಲ್ಲಿ 949.50 ರೂ. ಏತನ್ಮಧ್ಯೆ, ಕಳೆದ 11 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಂಬತ್ತು ಬಾರಿ ಹೆಚ್ಚಿಸಲಾಗಿದೆ. ಪ್ರತಿ ಲೀಟರ್‌ಗೆ ಒಟ್ಟು ರೂ 6.4 ಮತ್ತು ಅಡುಗೆ ಅನಿಲ ಎಲ್‌ಪಿಜಿ ದರಗಳು ಸಿಲಿಂಡರ್‌ಗೆ ರೂ 50 ರಷ್ಟು ಏರಿಕೆಯಾಗಿದೆ.

ಇತ್ತೀಚಿನ ಗ್ಯಾಸ್ ಬೆಲೆ ಏರಿಕೆಯು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸಲಿದೆ. ಇಂದು ಇಂಧನ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ. ಅಲ್ಲದೆ, ಜಾಗತಿಕ ಇಂಧನ ಬೆಲೆಗಳ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರವು ಗುರುವಾರ ವಿದ್ಯುತ್ ಉತ್ಪಾದಿಸಲು, ರಸಗೊಬ್ಬರಗಳನ್ನು ತಯಾರಿಸಲು, ಸಿಎನ್‌ಜಿಗೆ ಪರಿವರ್ತಿಸಲು ಮತ್ತು ಅಡುಗೆಗಾಗಿ ಮನೆಯ ಅಡುಗೆಮನೆಗಳಿಗೆ ಪೈಪ್‌ಲೈನ್‌ಗೆ ಬಳಸುವ ನೈಸರ್ಗಿಕ ಅನಿಲದ ಬೆಲೆಯನ್ನು ದ್ವಿಗುಣ ಗೊಳಿಸಿದೆ.

ಹಳೆಯ ನಿಯಂತ್ರಿತ ಕ್ಷೇತ್ರಗಳಿಂದ ಉತ್ಪಾದಿಸಲ್ಪಟ್ಟ ಅನಿಲದ ಬೆಲೆ, ಉದಾಹರಣೆಗೆ ONGC ಯ ರಾಷ್ಟ್ರದ ಅತಿ ದೊಡ್ಡ ಅನಿಲ ಕ್ಷೇತ್ರವಾದ Bassein, ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ (mmBtu) ಗೆ USD 6.10 ಗೆ ಹೆಚ್ಚಳವಾಗುತ್ತದೆ. ಪ್ರಸ್ತುತ USD 2.90 ಪ್ರತಿ mmBtu ಎನ್ನುತ್ತಿದೆ ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ (PPAC)ದ ಮಾಹಿತಿ.

ಇದನ್ನೂ ಓದಿ : PM Kisan : ರೈತರಿಗೆ ಸಿಹಿಸುದ್ದಿ, PM ಕಿಸಾನ್ KYC ಕೊನೆಯ ದಿನಾಂಕ ವಿಸ್ತರಣೆ

ಇದನ್ನು ಓದಿ : ಆಧಾರ್‌ಗೆ ಪಾನ್‌ ಕಾರ್ಡ್‌ ಲಿಂಕ್‌ ಮಾಡಿ : ಮಾರ್ಚ್ 31 ರ ನಂತರ ನಿಷ್ಕ್ರಿಯವಾಗಲಿದೆ PAN CARD

LPG cylinder Price Increased by Rs 250 from today, check latest rate

Comments are closed.