ಪುಣೆ : ವಿಶಿಷ್ಟ ಮೈಕಟ್ಟು ಹಾಗೂ ಗುಣಮಟ್ಟದ ಮಾಂಸಕ್ಕೆ ಪ್ರಖ್ಯಾತಿಯನ್ನು ಪಡೆದಿರುವ ಮಹಾರಾಷ್ಟ್ರ ಮೂಲದ ಮದ್ ಗ್ಯಾಲ್ ತಳಿಯ ಕುರಿ ಬರೋಬ್ಬರಿ 70 ಲಕ್ಷ ರೂಪಾಯಿ ಮಾರಾಟವಾಗಿದೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಹರಾಜು ಕೇಂದ್ರಕ್ಕೆ ದೇಶದ ನಾನಾ ಭಾಗಗಳಿಂದ ಕುರಿತಳನ್ನು ತರಲಾಗುತ್ತದೆ. ಅದ್ರಲ್ಲೂ ಮದ್‌ಗ್ಯಾಲ್’ ತಳಿಯ ಕುರಿಗಳು ಬಾರೀ ಬೇಡಿಕೆಯನ್ನು ಪಡೆದುಕೊಂಡಿವೆ. ಇದೀಗ ಮಾರಾಷ್ಟ್ರದ ಸಾಂಗ್ಲಿಯ ಟ್ ತಾಲೂಕಿನ ಮದ್‌ಗ್ಯಾಲ್’ ತಳಿಯ ಕುರಿಯ ಮಾಲೀಕ ತನ್ನ ಕುರಿಗೆ ಬರೋಬ್ಬರಿ 1.50 ಕೋಟಿ ರೂಪಾಯಿ ದರ ನಿಗದಿ ಮಾಡಿದ್ದಾನೆ. ಆದರೀಗ ಕುರಿ ಬರೋಬ್ಬರಿ 70 ಲಕ್ಷ ರೂಪಾಯಿಗೆ ಮಾರಾಟವಾಗಿದೆ ಎಂದು ಪಶು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕುರಿಯ ಮಾಲೀನಕಾಗಿರುವ ಬಾಬು ಮೆಟ್ ಕಾರಿಯ ಬಳಿಯಲ್ಲಿ 200ಕ್ಕೂ ಅಧಿಕ ಮದ್‌ಗ್ಯಾಲ್’ ತಳಿಯ ಕುರಿಗಳಿದ್ದು, ಮಾರಾಟವಾಗಿರುವ ಸರ್ಜಾ ಹೆಸರಿನ ಕುರಿ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿತ್ತು. ಸರ್ಜಾ ಕುರಿಯನ್ನು ಮೋದಿ ಅಂತಾನೂ ಜನರು ಕರೆಯುತ್ತಿದ್ದರು. ಇದೀಗ ಮದ್‌ಗ್ಯಾಲ್’ ತಳಿಯ ಸರ್ಜಾ ಕುರಿ ಮಾಲೀಕನಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿದೆ. ಮಾಲೀಕ ತನಗೆ ಮನಸ್ಸಿಲದಿದ್ದರೂ ಕೂಡ ಕುರಿಯನ್ನು ಮಾರಾಟ ಮಾಡಿ ಲಾಭ ಪಡೆದುಕೊಂಡಿದ್ದಾನೆ.
ಇನ್ನು ಸರ್ಜಾನ ಕುರಿ ಮರಿಗಳು ಕೂಡ 5 ರಿಂದ 10 ಲಕ್ಷ ರೂ.ವರೆಗೆ ಮಾರಾಟವಾಗಿವೆ. ಮಹಾರಾಷ್ಟ್ರ ಸರಕಾರ ವಿಶಿಷ್ಟ ತಳಿಯ ವೃದ್ಧಿಗೆ ಒತ್ತು ನೀಡಲಾಗಿದ್ದು, ಸದ್ಯ ಸಾಂಗ್ಲಿ ಜಿಲ್ಲೆಯೊಂದರಲ್ಲೇ 1.50 ಲಕ್ಷಕ್ಕೂ ಅಧಿಕ ಮದ್‌ಗ್ಯಾಲ್ ಕುರಿಗಳಿವೆ. ವಿಶಿಷ್ಟ ತಳಿಯ ಈ ಕುರಿ ಮಾರಾಟವಾಗಿರುವ ಕುರಿತು ರಾಜ್ಯದ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕೂಡ ಸಂತಸಗೊಂಡಿದ್ದಾರೆ.
ಒಂದು ಕುರಿಗೆ ಇಷ್ಟೊಂದು ಹಣವನ್ನು ಯಾರು ಕೊಡುತ್ತಾರೆ. ಮುಕ್ತ ಮಾರುಕಟ್ಟೆಯಿಂದಾಗಿ ನನಗೆ ಈ ಲಾಭ ಸಿಕ್ಕಿದೆ ಎಂದು ಸರ್ಕಾರದ ಯೋಜನೆಯನ್ನು ಕೊಂಡಾಡಿದ್ದಾರೆ.