Milk – Bus fare increase : ಗ್ರಾಹಕರಿಗೆ ಬರೆ : ನಾಳೆಯಿಂದ ಹಾಲು, ಬಸ್ ದರ ಏರಿಕೆ

ಬೆಂಗಳೂರು : ಪ್ರತಿ ತಿಂಗಳು ಆರಂಭದಲ್ಲಿ ಹಣಕಾಸು ವ್ಯವಹಾರದಲ್ಲಿ (Milk – Bus fare increase) ಹಲವಾರು ಬದಲಾವಣೆ ಆಗುತ್ತದೆ. ಇನ್ನು ನಾಳೆಯಿಂದ ಹಾಲು ಹಾಗೂ ಬಸ್‌ ದರ ಏರಿಕೆಯಾಗಲಿದೆ. ಮೊದಲೇ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ ಜನ ಸಾಮಾನ್ಯ ದೈನಂದಿನ ಜೀವನ ಸಾಗಿಸುವುದು ಕಷ್ಟಕರವಾಗಿದೆ.

ನಾಳೆಯಿಂದ ನಂದಿನಿ ಹಾಲಿನ ದರ ಏರಿಕೆ
ನಾಳೆ ಆಗಸ್ಟ್‌ 1 ರಿಂದ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ದುಬಾರಿಯಾಗಲಿದೆ. ಈ ನಿಟ್ಟಿನಲ್ಲಿ ಒಂದು ಲೀಟರ್‌ ಹಾಲಿನ ದರ 3 ರೂಪಾಯಿಯಷ್ಟು ಹೆಚ್ಚಳವಾಗಲಿದೆ. ಅಷ್ಟೇ ಅಲ್ಲದೇ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೊಳ್ಳಲಿದೆ. ಹೆಚ್ಚುವರಿ ದರವನ್ನು ರೈತರಿಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ರೀತಿ ದರ ಹೆಚ್ಚಳದಿಂದ ಇನ್ಮುಂದೆ ಸಂಘಗಳಿಗೆ 36.83 ರೂ. ಸಿಗಲಿದೆ. ಹಾಲು ಉತ್ಪಾದಕರಿಗೆ 34.97 ರೂ. ನೀಡಲಾಗುತ್ತದೆ ಎಂದು ವರಿಗಳು ತಿಳಿಸಿವೆ. ಎಂಎಫ್‌ನ ವಿವಿಧ ಹಾಲು ಒಕ್ಕೂಟಗಳು ಒಂದು ಲೀಟರ್‌ ಹಾಲಿಗೆ 5 ರೂಪಾಯಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದವು.

ಇದನ್ನೂ ಓದಿ : KMF President Bheema Naik : ತಿರುಪತಿ ಲಡ್ಡಿಗಿಲ್ಲ ನಂದಿನಿ ತುಪ್ಪ : ಬಿಜೆಪಿ ಅವಧಿಯಲ್ಲೇ ಸ್ಥಗಿತ : ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌

ಕೆಎಸ್‌ಆರ್‌ಟಿಸಿ ದರ ಹೆಚ್ಚಳ :
ಆಗಸ್ಟ್‌ 1 ರಿಂದ ಆಗುವ ಇನ್ನೊಂದು ಮಹತ್ವದ ಬದಲಾವಣೆಯೆಂದರೆ ಕೆಎಸ್‌ಆರ್‌ಟಿಸಿ ಬಸ್‌ ದರ ಹೆಚ್ಚಳವಾಗಲಿದೆ. ಶಕ್ತಿ ಯೋಜನೆಯ ಸಮಯದಲ್ಲಿ ಮಹಿಳೆಯರು ಉಚಿತ ಪ್ರಯಾಣ ಮುಂದುವರೆಸಬಹುದು. ಆದರೆ, ಒಪ್ಪಂದದ ಮೇರೆಗೆ ಪ್ರಯಾಣ ಮಾಡುವ ಬಸ್‌ಗಳ ದರವನ್ನು ಏರಿಸಲು ನಿರ್ಧಸಿಸಲಾಗಿದೆ. ಕರ್ನಾಟಕ ಸಾರಿಗೆ ಬಸ್‌ಗಳು ಮಾತ್ರವಲ್ಲದೇ ರಾಜಹಂಸ ಎಕ್ಸಿಕ್ಯೂಟಿವ್‌ ಮತ್ತು ರಾಜಹಂಸ ಸೇರಿದಂತೆ ಏಳು ವಿವಿಧ ರೀತಿಯ ಗುತ್ತಿಗೆ ಬಸ್‌ಗಳ ಪರಿಷ್ಕೃತ ಪ್ರಯಾಣ ದರವು ನಾಳೆಯಿಂದ ಏರಿಕೆ ಕಾಣಲಿದೆ.

Milk – Bus fare increase: Write to customers: milk, bus fare increase from tomorrow

Comments are closed.