Milk price : ಹಾಲು ಉತ್ಪಾದಕರಿಗೆ ಬಿಗ್‌ ಶಾಕ್‌ : ಹಾಲು ಖರೀದಿ ದರದಲ್ಲಿ ಲೀಟರ್‌ಗೆ 1.75 ರೂ. ಕಡಿತ

ಬೆಂಗಳೂರು : Milk price : ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ಮತ್ತೊಮ್ಮೆ ಶಾಕಿಂಗ್‌ ಸುದ್ದಿ ನೀಡಿದೆ. ಹಾಲಿನ ಖರೀದಿ ದರದಲ್ಲಿ ಲೀಟರ್‌ಗೆ 1.75 ರೂ. ಮತ್ತೆ (Milk purchase price down) ಕಡಿತಗೊಳಿಸಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆ ನಡೆಸಿ ರೈತರಿಂದ ಖರೀಸಿ ಮಾಡುವ ಹಾಲಿನ ದರದಲ್ಲಿ ಲೀಟರ್‌ಗೆ 1.75 ರೂ. ಕಡಿತ ಮಾಡಲು ನಿರ್ಧರಿಸಿದೆ. ಹಾಲಿನ ದರದಲ್ಲಿ ಕಡಿತವನ್ನು ಇಂದಿನಿಂದ ಜಾರಿಯಾಗುವಂತೆ ಆದೇಶ ಹೊರಡಿಸಿದೆ.

ಈ ಪರಿಷ್ಕೃತ ದರವು ಮುಂದಿನ ಆದೇಶದವರೆಗೂ ಮುಂದುವರೆಯಲಿದ್ದು, ಮುಂಗಾರು ಮಳೆ ಆರಂಭ ಹಿನ್ನಲೆಯಿಂದ ದರ ಕಡಿತ ಎಂದು ಮುನ್ಮುಲ್‌ ಸಮರ್ಥನೆ ನೀಡಿದ್ದಾರೆ. ಈ ಹಿಂದೆ ಪ್ರತಿ ಲೀಟರ್‌ ಹಾಲಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಆದರೆ ಇದೀಗ ಹಾಲಿನ ದರದಲ್ಲಿ ಕಡಿತ ಮಾಡಿದ್ದರಿಂದ ಹಾಲು ಉತ್ಪಾದಕರಿಗೆ 32.25 ರೂ. ಬದಲಿಗೆ ೩೦.೫೦ ರೂ. ದೊರೆಯಲಿದೆ.

ಇದನ್ನೂ ಓದಿ : Tomato price : ಈ ರಾಜ್ಯಗಳಲ್ಲಿ ಟೊಮ್ಯಾಟೊ ಕೇವಲ 90 ರೂ.ಗೆ ಮಾರಾಟ

ಇದನ್ನೂ ಓದಿ : Ginger price hike : ಟೊಮ್ಯಾಟೊ, ಬೆಳ್ಳುಳ್ಳಿ ನಂತರ, ಶುಂಠಿಗೂ ಬಂತು ಬಂಗಾರದ ಬೆಲೆ

ಕಳೆದ ತಿಂಗಳಿನಲ್ಲಿ ಕೂಡ ಮನ್ಮೂಲ್‌ 1 ರೂ. ಕಡಿತಗೊಳಿಸುವಂತೆ ಆದೇಶ ಹೊರಡಿಸಿತ್ತು. ಈ ನಿರ್ಣಯವನ್ನು ಮೇ 26 ರಂದು ನಡೆದಿದ್ದು, ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಕಳೆದ ವರ್ಷ ಕಾಣಿಸಿಕೊಂಡ ಸಾಂಕ್ರಮಿಕ ರೋಗದಿಂದ ಹಾಲು ಪೂರೈಕೆಯಲ್ಲಿ ಕಡಿಮೆಯಾಗಿದ್ದು, ಸದ್ಯ ಹೈನುಗಾರಿಕೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಹೊತ್ತಲ್ಲೇ ಹಾಲಿನ ದರ ಕಡಿತ ಮಾಡಲಾಗಿದ್ದು, ಪಶುಗೊಂಪನೆಯಲ್ಲಿ ತೊಡಗಿರುವವರಿಗೆ ಮತ್ತಷ್ಟು ಸಂಕಷ್ಟ ತಂದಂತೆ ಆಗಿದೆ.

Milk price: Big shock for milk producers: Milk purchase price is Rs 1.75 per litre. deduction

Comments are closed.