Milk Price Rise : ಗ್ರಾಹಕರಿಗೆ ಬರೆ, ಹಾಲಿನ ದರ 5 ರೂ. ಹೆಚ್ಚಳ

ಬೆಂಗಳೂರು : Milk Price Rise : ಕಳೆದ ಎರಡು ವಾರದಿಂದ ಟೊಮ್ಯಾಟೊ ಸೇರಿದಂತೆ ಇತರ ತರಕಾರಿ ಬೆಲೆ ಏರಿಕೆಯಿಂದ ರಾಜ್ಯದ ಜನರು ಆತಂಕಗೊಂಡ ಹೊತ್ತಲ್ಲೇ, ಹಾಲಿನ ದರ ಏರಿಕೆಯಿಂದ ಮತ್ತೊಂದು ಶಾಕ್‌ ನೀಡಿದಂತೆ ಆಗಿದೆ. ಹೌದು ರಾಜ್ಯದಲ್ಲಿ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಜನಸಾಮಾನ್ಯರಿಗೆ ಪ್ರತಿನಿತ್ಯ ಜೀವನ ನಡೆಸಲು ಕಷ್ಟಕರವಾಗಿದೆ.

ಈ ವಾರದಿಂದಲೇ ಹಾಲಿನ ದರದಲ್ಲಿ ಏರಿಕೆಯಾಗಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಗುಲಿದೆ ಎನ್ನಲಾಗಿದೆ. ಹಾಲಿನ ದರ ಹೆಚ್ಚಳ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಅವರು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ : Tomato White Virus Problem : ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ ದರ ಇದ್ರೂ, ರೈತರಿಗಿಲ್ಲ ಅದೃಷ್ಟ

ಇದನ್ನೂ ಓದಿ : Subsidy for milk : ಹೈನುಗಾರರಿಗೆ ಸಿಹಿ ಸುದ್ದಿ : ಹಾಲಿಗೆ ಮತ್ತೆ 5 ರೂ. ಪ್ರೋತ್ಸಾಹಧನ

ವಿವಿಧ ಕಾರಣಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರಕಾಋ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಕೆಎಂಎಫ್‌ ಹಾಗೂ ಅಧಿಕಾರಿಗಳ ಮನವಿಯಂತೆ ಹಾಲಿನ ಮೊತ್ತವನ್ನು 5 ರೂ. ಗೆ ಹೆಚ್ಚಳ ಮಾಡಲು ಮನವಿ ಸಲ್ಲಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಹಾಲಿನ ದರ ಹೆಚ್ಚಳ ಮಾಡಬೇಕು ಎನ್ನುವುದರ ಕುರಿತು ನಿರಂತರವಾಗಿ ಬೇಡಿಕೆ ಕೇಳಿ ಬರುತ್ತಲೇ ಇದೆ. ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಕೆಎಂಎಫ್‌ನ ಅಧ್ಯಕ್ಷರು ಸಹ ಈ ಹಿಂದೆ ಹಾಲಿನ ದರ ಹೆಚ್ಚಳ ಮಾಡುವ ಕುರಿತು ಪ್ರಸ್ತಾವ ಸಲ್ಲಿಸಿದ್ದರು.

Milk Price Rise : Write to the customers, the price of milk is Rs.5. increase

Comments are closed.