ಪ್ರಧಾನಮಂತ್ರಿ ಕಿಸಾನ್ ಯೋಜನೆ : ಹೊಸದಾಗಿ ಯೋಜನೆಗೆ ನೋಂದಣಿ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಅಡಿಯಲ್ಲಿ ಕಳೆದ ಫೆಬ್ರವರಿ 27 ರಂದು ಎಂಟು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡುವ ಮೂಲಕ 16,000 ಕೋಟಿ ರೂ.ಗಳ 13 ನೇ ಕಂತನ್ನು ಸರಕಾರ ಬಿಡುಗಡೆ ಮಾಡಿದೆ. ಈ (PM Kisan Yojana) ಯೋಜನೆಯಲ್ಲಿ, ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ 6,000 ರೂ.ಗಳನ್ನು ತಲಾ 2,000 ರೂ.ಗಳಂತೆ ಮೂರು ಸಮಾನ ಕಂತುಗಳಲ್ಲಿ ನೀಡಲಾಗಿದೆ.

ಇನ್ನು ಬರುವ ಮೇ ತಿಂಗಳಲ್ಲಿ ಮುಂದಿನ ಕಂತು ರೈತರ ಖಾತೆಗೆ ಬಿಡುಗಡೆಯಾಗಬಹುದು. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿರುವುದಿಲ್ಲ. ಆದರೆ ಈ ಯೋಜನೆ ಪ್ರಯೋಜನ ಪಡೆಯುವುದಕ್ಕಾಗಿ ರೈತರು ಈ ಕೆಳಗಿನ ಕ್ರಮಗಳನ್ನು ಅನುಸರಿಬೇಕಾಗಿದೆ.

PM Kisan Yojana : ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳ ಅಂತರದಲ್ಲಿ ತಲಾ ಎರಡು ಸಾವಿರದಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ಕಳುಹಿಸಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಇನ್ನೂ ನೋಂದಾಯಿಸದ ರೈತರಲ್ಲಿ ನೀವೂ ಇದ್ದರೆ, ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ. ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸುವುದಕ್ಕೆ ಈ ಕೆಳಗಿನ ಸುಲಭ ವಿಧಾನವನ್ನು ಅನುಸರಿಸಿ ಬೇಕಾಗಿದೆ.

  • ಮೊದಲಿಗೆ ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್ ಆದ https://pmkisan.gov.in/ ಗೆ ಭೇಟಿ ನೀಡಬೇಕು.
  • ಫಾರ್ಮರ್ ಕಾರ್ನರ್‌ನಲ್ಲಿ ಹೊಸ ರೈತ ನೋಂದಣಿಯ ಆಯ್ಕೆಯನ್ನು ಆರಿಸಿಕೊಳ್ಳಬೇಕು.
  • ಇದರ ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ನಿಮ್ಮ ಪರದೆಯ ಮೇಲೆ ಹೊಸ ಪುಟ ತೆರೆಯುತ್ತದೆ.
  • ಅಗತ್ಯವಿರುವ ವಿವರಗಳನ್ನು ಇಲ್ಲಿ ಭರ್ತಿ ಮಾಡಬೇಕು.
  • OTP ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕು.
  • ನೀವು OTP ಅನ್ನು ನಮೂದಿಸಿದ ತಕ್ಷಣ, ಪರದೆಯ ಮೇಲೆ ಹೊಸ ಪುಟ ತೆರೆಯುತ್ತದೆ.
  • ನಿಮ್ಮ ಅಗತ್ಯ ವಿವರಗಳೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಇಲ್ಲಿ ಅಪ್ಲೋಡ್ ಮಾಡಬೇಕು.
  • ಅಂತಿಮವಾಗಿ ಸೇವ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವಾಗ ಇ-ಕೆವೈಸಿ ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ : Kissan GPT : ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಚಾಟ್‌ಜಿಪಿಟಿ; ಕಿಸಾನ್‌ ಜಿಪಿಟಿಯಲ್ಲಿ ನಿಮ್ಮ ಸಮಸ್ಯೆ ಹೇಳಿ, ಥಟ್‌ ಅಂತ ಉತ್ತರ ಪಡೆದುಕೊಳ್ಳಿ

ಇದನ್ನೂ ಓದಿ : ಪ್ರಧಾನಮಂತ್ರಿ ಕಿಸಾನ್ ಯೋಜನೆ : ರೈತರ ಖಾತೆಗೆ 14ನೇ ಕಂತು ಯಾವಾಗ ಬರುತ್ತೆ ಗೊತ್ತಾ ?

PM Kisan Samman Nidhi Yojana : Pradhanmantri Kisan Yojana : Click here to register for the new scheme

Comments are closed.