ಸೋಮವಾರ, ಏಪ್ರಿಲ್ 28, 2025
HomeagricultureSolution for disease Of Coconut Tree : ತೆಂಗಿಗೆ ಅಣಬೆ ರೋಗ ಬಂದರೆ ಏನು...

Solution for disease Of Coconut Tree : ತೆಂಗಿಗೆ ಅಣಬೆ ರೋಗ ಬಂದರೆ ಏನು ಮಾಡಬೇಕು? ಇಲ್ಲಿದೆ ಪರಿಹಾರೋಪಾಯ

- Advertisement -

ತೆಂಗು(Coconut) ರೈತರ ಪಾಲಿನ ಆರ್ಥಿಕ ಮೂಲ. ಮಲೆನಾಡಿನಲ್ಲಿ ಅಡಿಕೆ(Areca nut) ಕರಾವಳಿಯಗುಂಟ ತೆಂಗು ಸಹ ಪ್ರಮುಖ ಬೆಳೆ. ಇಂತಹ ತೆಂಗನ್ನು (disease Of Coconut Tree) ಕಾಡುವ ರೋಗಗಳ ಪಟ್ಟಿ ನೋಡಿ – ಸುಳಿರೋಗ, ಕಾಂಡ ರೋಗ, ಸೊರಗುರೋಗ, ಕಾಯಿರೋಗ, ಎಲೆ ಚುಕ್ಕೆರೋಗ ಒಂದೇ ಎರಡೇ. ಪ್ರದೇಶ, ಸಂದರ್ಭಾನುಸಾರವಾಗಿ ಈ ರೋಗಗಳನ್ನು ಕಾಡುತ್ತವೆ. ಇವನ್ನು ಮೆಟ್ಟುನಿಂತು ತೆಂಗಿನ ಬೆಳೆ ಉಳಿಯಬೇಕು. ರೈತರಿಗೆ ಆದಾಯ ತಂದು ಕೊಡಬೇಕು.

ತೆಂಗನ್ನು ಕಾಡುವ ರೋಗಗಳಲ್ಲಿ ಪ್ರಮುಖವಾಗಿ ಅಣಬೆ ರೋಗವೂ ಇದೆ. ಗ್ಯಾನೋಡರ್ಮ ಶಿಲೀಂದ್ರ (ganoderma lucidum)ದಿಂದ ಈ ರೋಗ ಬರುತ್ತದೆ. ರೋಗ ಚಿಕಿತ್ಸೆಗೂ ಮೊದಲು ಅದರ ಲಕ್ಷಣಗಳು ಏನು ಅನ್ನೋದನ್ನು ತಿಳಿಯುವುದು ಸೂಕ್ತ.

ರೋಗದ ಲಕ್ಷಣಗಳು:
1) ತೆಂಗಿನ ಮರದ ಕೆಳಗಿನ ಭಾಗದ ಗರಿಗಳು ಹಳದಿ ಬಣ್ಣಕ್ಕೆ ತಿರುಗುವುದೇ ಮೊದಲ ಲಕ್ಷಣ. ಆನಂತರ, ಗರಿಗಳು ಜೋತು ಬೀಳುತ್ತವೆ. ಮರದ ಬೇರುಗಳು ಕೊಳೆತು ಹೋಗುತ್ತವೆ.
2) ಮರದ ಬುಡದಲ್ಲಿ ರಕ್ತದ ರೀತಿಯ ಪಟ್ಟೆಗಳು ಕಂಡರೆ, ಸುಖಾ ಸುಮ್ಮನೆ ಕಾಯಿಗಳು ಉದುರಿದರೆ, ತೆಂಗಿನ ಮರದ ಬುಡದಲ್ಲಿ ಅಣಬೆಗಳು ಬೆಳೆದರೆ ಇದು ಅಣಬೆರೋಗ ಅಂತಲೇ ಅರ್ಥ.
ಅಣಬೆ ರೋಗ ಮರಳು ಮಿಶ್ರಿತ ಮಣ್ಣಿನಲ್ಲಿ ಮತ್ತು ನಿರ್ಲಕ್ಷ್ಯಮಾಡಿದ ತೆಂಗಿನ ತೋಟಗಳಲ್ಲಿ ಕಂಡುಬರುವುದೇ ಹೆಚ್ಚು.

ನಿವಾರಣೆ ಹೇಗೆ:
1) ಅಣಬೆ ರೋಗ ಬಂದು ಸತ್ತಿರುವ ಮರಗಳು ಮತ್ತು ಅದರ ಬೇರಿನ ಸಮೂಹವನ್ನು ತೆಗೆದುಹಾಕಬೇಕು. ರೋಗ ಬಂದಿರುವ ಮರಗಳನ್ನು ಆರೋಗ್ಯಯುತ ಮರಗಳಿಂದ ಬೇರ್ಪಡಿಸಿದರೆ ರೋಗವನ್ನು ತಡೆಗಟ್ಟಬಹುದು. ಇದಕ್ಕಾಗಿ, ಗಿಡದಿಂದ ಗಿಡಕ್ಕೆ ಸಣ್ಣ ಕಂದಕಗಳನ್ನು ತೋಡಬಹುದು.
2) ವರ್ಷಕ್ಕೆ 5 ಕಿ.ಗ್ರಾಂ ಬೇವಿನ ಹಿಂಡಿ, 100 ಗ್ರಾಂ.ಟ್ರೈಕೋಡರ್ಮ, 100 ಗ್ರಾಂ. ಸ್ಯುಡೋಮಾನಸ್ ಜೈವಿಕ ಪೀಡೆನಾಶಕವನ್ನು 10 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಮರದ ಸುತ್ತಲೂ ಅಗೆದು ಮಣ್ಣಿಗೆ ಹಾಕಬೇಕು.
3) ಪ್ರತಿ ಮರಕ್ಕೆ 3 ಮಿ.ಲೀ ಹೆಕ್ಸಾಕೋನಜೋಲ್ ಶಿಲೀಂದ್ರನಾಶಕವನ್ನು 100 ಮಿ.ಲೀ ನೀರಿನಲ್ಲಿ ಬೆರೆಸಿ ಬೇರಿನ ಮುಖಾಂತರ ಮೂರು ತಿಂಗಳಿಗೊಮ್ಮೆ ಕೊಡಬೇಕು.
ಈ ರೀತಿ ಮಾಡಿದರೆ, ಅಣಬೆ ರೋಗವನ್ನು ತಡೆಯಬಹುದು.

ಇದನ್ನೂ ಓದಿ: Relief From Joint Pain: ಚಳಿಗಾಲದಲ್ಲಿ ಗಂಟುನೋವೇ? ಇಲ್ಲಿದೆ ಪರಿಹಾರೋಪಾಯ

(Solution for Ganoderma Lucidum disease of Coconut Tree)

RELATED ARTICLES

Most Popular