Subsidy for milk : ಹೈನುಗಾರರಿಗೆ ಸಿಹಿ ಸುದ್ದಿ : ಹಾಲಿಗೆ ಮತ್ತೆ 5 ರೂ. ಪ್ರೋತ್ಸಾಹಧನ

ಬೆಂಗಳೂರು : Subsidy for milk : ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಳೆದ ವಾರದಿಂದ ತರಕಾರಿ ಬೆಲೆ ಏರಿಕೆಯಿಂದ ಆತಂಕಕ್ಕೆ ಒಳಗಾಗಿರುವ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದರಲ್ಲೂ ಹೈನುಗಾರರಿಕೆಯಲ್ಲಿ ಜೀವನ ಸಾಗಿಸುತ್ತಿರುವವರಿಗೆ ಸಂತಸದ ಸುದ್ಧಿ ಎನ್ನಬಹುದು. ಸದ್ಯ ಪ್ರತಿ ಲೀಟರ್‌ ಹಾಲಿಗೆ 5 ರೂ. ವರೆಗೂ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರಕಾರ ಚರ್ಚೆ ನಡೆಸಿದೆ.

ಇದುವರೆಗೂ ಸರಕಾರದಿಂದ ಪ್ರತಿ ಲೀಟರ್‌ ಹಾಲಿಗೆ 5 ರೂ. ಪ್ರೋತ್ಸಾಹಧನ ಸಿಗುತ್ತಿದೆ. ಬೆಲೆ ಏರಿಕೆ ನಡುವೆ ಹೈನುಗಾರಿಕೆ ವೆಚ್ಚ ಹೆಚ್ಚಾದ ಹಿನ್ನಲೆಯಲ್ಲಿ ಮತ್ತೆ ಲೀಟರ್‌ ನೀಡುವ 5 ರೂ ಹೆಚ್ಚಿಸುವ ಚಿಂತನೆ ನಡೆಸಲಾಗಿದೆ. ಇದೇ ಬರುವ ಮಂಗಳವಾರ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಹೈನುಗಾರುರು ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ ಎನ್‌ ರಾಜಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ : Tomato Price : ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ : ಈ ರಾಜ್ಯದಲ್ಲಿ ಒಂದು ಕೆಜಿ ಟೊಮೆಟೊಗೆ 250 ರೂ.

ಇದನ್ನೂ ಓದಿ : ಕರಾವಳಿಯಲ್ಲಿ ಭಾರೀ ಮಳೆಯಿಂದ ಅಡಿಕೆಗೆ ಕೊಳೆ ರೋಗ, ಚುಕ್ಕೆ ರೋಗ : ಅಧಿಕಾರಿಗಳಿಂದ ರೋಗ ನಿರ್ವಹಣೆಯ ಟಿಪ್ಸ್‌

ಈ ನಿಟ್ಟಿನಲ್ಲಿ ಹೈನುಗಾರಿಕೆ ನಡೆಸುತ್ತಿರುವ ಜನರಿಗೆ ಆರ್ಥಿಕ ನೆರವು ನೀಡಿದ್ದಂತೆ ಆಗುತ್ತದೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಿದ್ದಂತೆ ಆಗುತ್ತದೆ. ನಿರುದ್ಯೋಗಿಗಳಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಬೆಳೆಸಿದ್ದಂತೆ ಆಗುತ್ತದೆ.

Subsidy for milk: Sweet news for dairy farmers: Rs 5 Incentives again for milk

Comments are closed, but trackbacks and pingbacks are open.