KMF President Bheema Naik : ತಿರುಪತಿ ಲಡ್ಡಿಗಿಲ್ಲ ನಂದಿನಿ ತುಪ್ಪ : ಬಿಜೆಪಿ ಅವಧಿಯಲ್ಲೇ ಸ್ಥಗಿತ : ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌

ಬೆಂಗಳೂರು : ತಿರುಪತಿ ಲಡ್ಡಿಗೆ ನಂದಿನಿ ತುಪ್ಪ ಹಲವು ವರ್ಷಗಳಿಂದಲೂ ಸರಬರಾಜು (KMF President Bheema Naik) ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದಲೂ ನಂದಿನಿ ತುಪ್ಪವನ್ನು ಕೆಎಂಎಫ್‌ ತಿರುಪತಿಗೆ ಸರಬರಾಜು ಮಾಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿಯೇ ನಂದಿನಿ ತುಪ್ಪ ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ನಮ್ಮ ದರಕ್ಕೆ ಖರೀದಿ ಮಾಡಿದ್ರೆ, ತುಪ್ಪ ನೀಡಲು ನಾವು ರೆಡಿಯಾಗಿದ್ದೇವೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯ ಸರಕಾರ ಕೆಎಂಎಫ್‌ಗೆ ತುಪ್ಪ ಸರಬರಾಜು ಮಾಡುವುದನ್ನು ನಿಲ್ಲಿಸಿದೆ ಎಂದು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಅವರು, 2005 ರಿಂದಲೂ ಕೆಎಂಎಫ್‌ ತಿರುಪತಿ ಲಡ್ಡಿಗಾಗಿ ನಂದಿನಿ ತುಪ್ಪವನ್ನು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕಡಿಮೆ ದರಕ್ಕೆ ತುಪ್ಪವನ್ನು ಟಿಟಿಡಿ ಕೇಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ತುಪ್ಪ ಸರಬರಾಜನ್ನು ನಿಲ್ಲಿಸಲಾಗಿತ್ತು. ಆದರೆ ಹೆಚ್ಚುವರಿ ಹಣವನ್ನು ನೀಡುವ ಭರವಸೆಯ ಹಿನ್ನೆಲೆಯಲ್ಲಿ 2022ರಲ್ಲಿ 345 ಮೆಟ್ರಿಕ್‌ ಟನ್‌ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗಿತ್ತು ಎಂದಿದ್ದಾರೆ.

ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಬಾರೀ ಬೇಡಿಕೆಯಿದೆ. ರೈತರು ಕಷ್ಟಪಟ್ಟು ಕಟ್ಟಿದ ಸಂಸ್ಥೆಯನ್ನು ಲಾಭದತ್ತ ಮುನ್ನೆಡೆಸುವುದು ನಮ್ಮ ಜವಾಬ್ದಾರಿ. ಕಳೆದ ಎರಡು ವರ್ಷಗಳ ಹಿಂದೆಯೇ ಟಿಟಿಡಿ ಕರೆದಿದ್ದ ಟೆಂಡರ್‌ನಲ್ಲಿ ಕೆಎಂಎಫ್‌ ಬಾಗಿಯಾಗಿರಲಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿಯೇ ನಂದಿನಿ ತುಪ್ಪವನ್ನು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿತ್ತು. ಒಂದೊಮ್ಮೆ ಅವರು ನಮ್ಮ ದರಕ್ಕೆ ತುಪ್ಪ ಸರಬರಾಜು ಮಾಡುವಂತೆ ಹೇಳಿದ್ರೆ, ಈಗಲೂ ತುಪ್ಪ ನೀಡುವುದಕ್ಕೆ ರೆಡಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : Suicide case : ಚಲಿಸುತ್ತಿದ್ದ ಮೆಟ್ರೋ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಅಮೂಲ್‌ ಗೆ ನಂದಿನಿಯನ್ನು ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ರೈತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಕಾಂಪಿಟೇಷನ್‌ ದರದಲ್ಲಿ ನಂದಿನಿ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡಲು ಸಾಧ್ಯವಿಲ್ಲ. 2005 ರಿಂದಲೂ ತಿರುಪತಿಗೆ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಇದುವರೆಗೆ ಸುಮಾರು 1700 ಮೆಟ್ರಿಕ್‌ ಟನ್‌ ತುಪ್ಪವನ್ನು ಸರಬರಾಜು ಮಾಡಲಾಗಿದೆ. ಆದರೆ ಕಳೆದ ಎರಡು ವರ್ಷಗಳ ಹಿಂದೆಯೇ ತುಪ್ಪ ಸರಬರಾಜು ನಿಲ್ಲಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Tirupati Laddu is not being supplied Nandini Gee: There is a shutdown during the BJP period: KMF President Bheema Naik

Comments are closed.