ದೇವದುರ್ಗ : ಪ್ರತಿ ವರ್ಷ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿರುತ್ತದೆ. ಯಾಕೆಂದರೆ ಹಬ್ಬ ಹರಿದಿನಗಳು ಹಾಗೂ ಉಪವಾಸಗಳು ಬರುವುದ್ದರಿಂದ ತರಕಾರಿಗಳ ಬೆಲೆಯಲ್ಲಿ ಏರಿಕೆ ಆಗುತ್ತಿತ್ತು, ಆದರೆ ಕಳೆದ ತಿಂಗಳಿನಿಂದ ಟೊಮೊಟೊ (Tomato Price Down) ಬೆಲೆಯಲ್ಲಿ ಸಾಕಷ್ಟು ಕುಸಿತಗೊಂಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ದಿನದಿಂದ ದಿನಕ್ಕೆ ಟೊಮೊಟೊ ಬೆಲೆಯಲ್ಲಿ ಇಳಿಮುಖವಾಗುತ್ತಿದ್ದು, ಇದರಿಂದಾಗಿ ರೈತರು ಬೆಳೆ ಬೆಳೆಯಲು ಹಣದ ಕೊರತೆಯಿಂದ ಚಿಂತೆಗೆ ಒಳಗಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಪ್ರತಿ 25 ಕೆ.ಜಿ ಟೊಮೊಟೊ ಕ್ಯಾನ್ ಕೇವಲ ರೂ.70ಕ್ಕೆ ಮಾರಾಟವಾಗುತ್ತಿರುವುದು ರೈತರನ್ನು ದುಸ್ಥಿತಿಗೆ ತಳ್ಳಿದೆ. ಹೀಗಾಗಿ ಕಸ ತೆಗೆಯಲು ಹಾಗೂ ಸಾಗಿಸಲು ತಗಲುವ ಖರ್ಚು – ವೆಚ್ಚ ಸಹ ಸಾಕಾಗುತ್ತಿಲ್ಲ ಎಂದು ರೈತರು ಹೇಳಿದ್ದಾರೆ.
ಇದನ್ನೂ ಓದಿ : Tomato Prices Down : ಟೊಮ್ಯಾಟೊ ಕೆಜಿಗೆ 3ರೂ. : ದಿನೇ ದಿನೇ ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ
ಇದನ್ನೂ ಓದಿ : Karnataka Farmer : ಕರ್ನಾಟಕದ ರೈತ 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಿದ ರಸೀದಿ ಫೋಟೋ ವೈರಲ್
ಇದನ್ನೂ ಓದಿ : Vegetable Price Hike : ಟೊಮೆಟೊ ಬೆಲೆ 250, ಸೊಪ್ಪಿನ ಕೆಜಿಗೆ ರೂ 110 : ಭಾರೀ ಮಳೆಯಿಂದ ಗಗನಕ್ಕೇರಿದ ತರಕಾರಿ ಬೆಲೆ
ತಾಲೂಕಿನ ಅರಕೇರಾ, ಇರಬಗೇರ, ಮಾನಸಗಲ್, ಕೋಟಿಗುಡ್ಡ, ಗೌರಂಪೇಟ, ಇಂದಿರಾನಗರ ಸೇರಿದಂತೆ ತಾಂಡಾ ಮತ್ತು ದೊಡ್ಡದ ಕೆಲವು ರೈತರು ಬೆಲೆ ಕುಸಿತದಿಂದಾಗಿ ಟೊಮೊಟೊವನ್ನು ಹೊಲದಿಂದ ಮಾರುಕಟ್ಟೆಗೆ ಸಾಗಿಸಲು ಹಣದ ಕೊರತೆಯಾಗುತ್ತದೆ ಎಂದು ಕಟಾವು ಮಾಡದೇ ಹೊಲದಲ್ಲಿಯೇ ಬಿಡುತ್ತಿದ್ದಾರೆ. “12 ಸಂಗ್ರಹ ಬೆಳೆದಿದ್ದೇನೆ. ಇಳುವರಿಯೂ ಚೆನ್ನಾಗಿ ಬಂದಿದ್ದು, ಆದರೆ ಬೆಳೆಗೆ ಸರಿಯಾದ ದರ ಸಿಗುತ್ತಿಲ್ಲ. ರೂ 15 ರಿಂದ ರೂ 20 ಲಕ್ಷ ನಷ್ಟವಾಗಿದೆ.
ಇದನ್ನೂ ಓದಿ : Nandini Milk Price Hike : ನಂದಿನಿ ಹಾಲಿನ ದರ 3 ರೂಪಾಯಿ ಏರಿಕೆ ?
Tomato Price Down : Only Rs.70 for 25 kg tomato