Telangana Kidnap case: ತಂದೆಯ ಎದುರೇ ಯುವತಿಯ ಅಪಹರಣ: ವಿಡಿಯೋ ವೈರಲ್‌

ತೆಲಂಗಾಣ: (Telangana Kidnap case) 18 ವರ್ಷದ ಯುವತಿಯನ್ನು ತಂದೆಯ ಎದುರೇ ಅಪರಿಚಿತ ವ್ಯಕ್ತಿಗಳು ಅಪಹರಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ದೇವಸ್ಥಾನಕ್ಕೆ ತೆರಳಿ ತಂದೆಯೊಡನೆ ಮನೆಗೆ ವಾಪಾಸ್ಸಾಗುವ ವೇಳೆ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಸಿಸಿಟಿವಿ ದೃಶ್ಯದಲ್ಲಿ ಬಾಲಕಿಯನ್ನು ಎಳೆದುಕೊಂಡು (Telangana Kidnap case) ವಾಹನದ ಹಿಂಬದಿ ಸೀಟಿಗೆ ತಳ್ಳುತ್ತಿರುವುದನ್ನು ಕಾಣಬಹುದು. ತಂದೆ ಆಕೆಯ ರಕ್ಷಣೆಗೆ ತೆರಳಿದ್ದು, ದುಷ್ಕರ್ಮಿಗಳು ತಂದೆಯನ್ನು ಪಕ್ಕಕ್ಕೆ ತಳ್ಳಿ ಅಲ್ಲಿಂದ ಪರಾರಿಯಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಂತೆ ಯುವತಿಯ ತಂದೆ ತನ್ನ ಬೈಕನ್ನು ಹಿಡಿದು ಅವರನ್ನು ಹಿಂಬಾಸಿಲು ಪ್ರಯತ್ನ ಪಟ್ಟರೂ ಕೂಡ ಸಾಧ್ಯವಾಗಿಲ್ಲ.

ಕೂಡಲೇ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಯುವತಿಯ ರಕ್ಷಣೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಯುವತಿಯ ಅಪಹರಣದ ಹಿಂದೆ ಅದೇ ಗ್ರಾಮದ ಯುವಕ ಕೆ.ಜಾನ್ ಎಂಬಾತನ ಕೈವಾಡವಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ, ಆರೋಪಿ ಒಂದು ವರ್ಷದ ಹಿಂದೆ ಬಾಲಕಿಯೊಂದಿಗೆ ಓಡಿ ಹೋಗಿದ್ದ. ಆಕೆ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಬಾಲಕಿಯ ಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪೊಲೀಸರು ಆರೋಪಿ ಮತ್ತು ಯುವತಿಯನ್ನು ಗ್ರಾಮಕ್ಕೆ ಕರೆತಂದಿದ್ದರು. ಅಂದಿನಿಂದ ಅವರು ಪರಸ್ಪರ ಭೇಟಿಯಾಗಿರಲಿಲ್ಲ. ಹುಡುಗಿಯ ಮನೆಯವರು ಇತ್ತೀಚೆಗಷ್ಟೇ ಆಕೆಯ ಮದುವೆಯನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ನಿಶ್ಚಯಿಸಿದ್ದರು ಎಂಬ ಮಾಹಿತಿಗಳು ತಿಳಿದು ಬಂದಿದೆ.

ಇದನ್ನೂ ಓದಿ : SriLanka Drug Mafia: ಶಸ್ತ್ರಾಸ್ತ್ರ, ಡ್ರಗ್ಸ್‌ ಕಳ್ಳ ಸಾಗಾಣಿಕೆ : ಪಾಕ್‌ ನಂಟು ಹೊಂದಿದ 9 ಮಂದಿಯ ಬಂಧನ

ಇದನ್ನೂ ಓದಿ : Bangalore Suicide case: ಮಕ್ಕಳಿಗೆ ಮದುವೆ ಆಗಿಲ್ಲ ಎಂಬ ಚಿಂತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಇದೀಗ ದುಷ್ಕರ್ಮಿಗಳ ವಿರುದ್ದ ದೂರು ದಾಖಲಾಗಿದ್ದು, ಯುವತಿಯ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.

(Telangana Kidnap case) An 18-year-old girl was kidnapped by unknown persons in front of her father on Tuesday in Rajanna Sircilla district of Telangana. The incident took place when he was returning home with his father after going to the temple. This scene captured on CCTV is now going viral on social media.

Comments are closed.