Tomato price in Karnataka : ಬಾರೀ ಇಳಿಕೆ ಕಂಡ ಟೊಮ್ಯಾಟೋ ಬೆಲೆ : ಕೆಜಿಗೆ 23 ರೂ.ಗೆ ಮಾರಾಟ

ಕೋಲಾರ : ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ತರಕಾರಿ ಬೆಲೆ ಏರಿಕೆ ಕಂಡಿದ್ದು, ಅದ್ರಲ್ಲೂ ಟೊಮ್ಯಾಟೋಗೆ ಚಿನ್ನದ ಬೆಲೆ (Tomato price in Karnataka) ಬಂದಿತ್ತು. ಆದ್ರೀಗ ಟೊಮ್ಯಾಟೊ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ. ಕೆಲ ತಿಂಗಳು ಹಿಂದೆ ಟೊಮ್ಯಾಟೊ ಬೆಲೆ 200 ರೂ.ವರೆಗೂ ಏರಿಕೆ ಕಂಡಿದೆ. ಸದ್ಯ ಟೊಮ್ಯಾಟೊ ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದ್ದು ಗ್ರಾಹಕರಿಗೆ ಸಂತಸ ನೀಡಿದೆ.

ಟೊಮ್ಯಾಟೊ ಇಳುವರಿ ಪ್ರಮಾಣ ಹೆಚ್ಚಾಗಿದ್ದರಿಂದ ಬೆಲೆಯಲ್ಲಿ ಇಳಿಕೆ ಕಂಡಿದೆ. ರಾಜ್ಯದ ಬೆಂಗಳೂರು, ಮೈಸೂರು, ಕೋಲಾರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಏರಿಕೆ ತಿಳಿದ ಬೆಳೆಗಾರರು ಇಳುವರಿ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಬೆಲೆ ಇಳಿಕೆಯಾಗುವುದರಿಂದ ರೈತರಿಗೆ ಆತಂಕವನ್ನುಂಟು ಮಾಡಿದೆ.

ಭಾರೀ ಇಳುವರಿ ಕಂಡ ಕೋಲಾರ ಜಿಲ್ಲೆ
ರಾಜ್ಯದಲ್ಲಿ ಅತೀ ಹೆಚ್ಚು ಟೊಮ್ಯಾಟೊ ಬೆಳೆಯುವ ಜಿಲ್ಲೆ ಕೋಲಾರ ಆಗಿದ್ದು, ಅದರಲ್ಲೂ ಮುಳುಬಾಗಿಲು ಮಾರುಕಟ್ಟೆ ಟೊಮ್ಯಾಟೊ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ. ವರ್ಷವಿಡೀ ಬೆಳೆದ ಟೊಮ್ಯಾಟೊವನ್ನು ರಾಜ್ಯದಲ್ಲಿ ಮಾತ್ರವಲ್ಲದೇ ಇತರ ರಾಜ್ಯಗಳಿಗೂ ಸರಬರಾಜಾಗುತ್ತದೆ. ಕಳೆದ ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ಟೊಮ್ಯಾಟೋ ಇಳುವರಿ ಕಡಿಮೆಯಾಗಿದ್ದು, ರೈತರು ಕೆಜಿಗೆ 200 ರೂ.ಗೂ ಅಧಿಕ ಬೆಲೆಯನ್ನು ಗಳಿಸಿದ್ದಾರೆ. ಇದನ್ನೂ ಓದಿ : Vegetable Price : ಭಾರತದಲ್ಲಿ ಇಳಿಕೆಯಾಗಲಿದೆ ತರಕಾರಿ ಬೆಲೆ : ಗುಡ್‌ನ್ಯೂಸ್‌ ಕೊಟ್ಟ?ಆರ್‌ಬಿಐ ಗವರ್ನರ್‌

ಆದರೆ ಕೋಲಾರ ರೈತರು ಟೊಮ್ಯಾಟೊ ಬೆಳೆ ಹೇರಳವಾಗಿ ಬೆಳೆಸಿದ್ದು, ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಟೊಮ್ಯಾಟೊ ಬಂದಿದ್ದರಿಂದ ದರ ಇಳಿಕೆ ಕಂಡಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ ನಾಟಿ ಟೊಮ್ಯಾಟೊದ 15 ಕೆಜಿ ಬಾಕ್ಸ್‌ಗೆ 350 ರೂ. ದೊರೆತಿದೆ.

ರಾಜ್ಯದಲ್ಲೇ ಕೋಲಾರದ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೆಜಿಗೆ 23 ರೂ.ಗೆ ಖರೀದಿ ಮಾಡಲಾಗಿದೆ. ಇದೇ ಪ್ರಮಾಣದಲ್ಲಿಯೇ ಚಿಲ್ಲರೆ ವಹುವಾಟು ನಡೆಯುತ್ತಿದೆ. ಮಾರುಕಟ್ಟೆಗೆ ಹೆಚ್ಚಿನ ಟೊಮ್ಯಾಟೊ ಬರುವ ಸಾಧ್ಯತೆ ಇರುವುದರಿಂದ ಮತ್ತಷ್ಟು ದರ ಇಳಿಕೆ ಕಾಣಬಹುದು ಎಂದು ವ್ಯಾಪಾರಿಯೊಬ್ಬರು ಬಂದಿದ್ದಾರೆ.

Tomato price in Karnataka: Tomato price which has seen a decrease once: Selling at Rs. 23 per kg

Comments are closed.