Tomato White Virus Problem : ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ ದರ ಇದ್ರೂ, ರೈತರಿಗಿಲ್ಲ ಅದೃಷ್ಟ

ಕೋಲಾರ/ ಚಿಕ್ಕಬಳ್ಳಾಪುರ : ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ ಭರ್ಜರಿ (Tomato price hike) ದರವಿದೆ. ಕೆಲವೊಂದು ರಾಜ್ಯಗಳಲ್ಲಿ ಟೊಮ್ಯಾಟೋ ಬೆಲೆ 250 ರೂಪಾಯಿ ದಾಟಿದೆ. ಆದರೆ ರಾಜ್ಯದ ಕೋಲಾ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಮಾತ್ರ ಅದೃಷ್ಟವಿಲ್ಲ. ಈ ಜಿಲ್ಲೆಗಳ ಟೊಮ್ಯಾಟೋ (Tomato White Virus Problem) ಬೆಳೆಗೆ ವೈಟ್‌ ವೈರಸ್‌, ಬಿಳಿಚುಕ್ಕೆ ರೋಗ ಹಾಗೂ ಬೆಂಕಿ ರೋಗ ಕಾಡುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಇದೇ ಮೊದಲ ಬಾರಿಗೆ ಟೊಮ್ಯಾಟೋ ಇಷ್ಟೊಂದು ದುಬಾರಿಯಾಗಿದೆ. ಇಷ್ಟು ವರ್ಷ ಈ ಸಮಯದಲ್ಲಿ ಬೆಳೆಯಿದ್ದರೂ ಬೆಲೆ ಇಲ್ಲಾ ಎಂದು ಕೊರಗುತ್ತಿದ್ದ ಟೊಮ್ಯಾಟೋ ಬೆಳೆಗಾರರು, ಟೊಮ್ಯಾಟೋ ಫಸಲನ್ನು ಎಸೆದು ಪ್ರತಿಭಟಿಸುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಚಿನ್ನದ ಬೆಲೆ ಬಂದಿದೆ. 15 ಕೆಜಿ ಟೊಮ್ಯಾಟೋ 1600 ರೂಪಾಯಿಗೆ ಮಾರಾಟವಾಗುತ್ತಿದೆ. ದುಬಾರಿ ಬೆಲೆಗೆ ಟೊಮ್ಯಾಟೋ ಮಾರಾಟವಾಗುತ್ತಿದ್ದರೂ ಕೂಡ ರೈತರ ಮೊಗದಲ್ಲಿ ಮಾತ್ರವಲ್ಲ ಸಂತಸವಿಲ್ಲ.

ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಟೊಮ್ಯಾಟೋಗೆ ರಾಜ್ಯದಾದ್ಯಂತ ಬೇಡಿಕೆಯಿದೆ. ಈ ಬಾರಿಯೂ ಕೂಡ ಅತೀ ಹೆಚ್ಚು ಪ್ರದೇಶದಲ್ಲಿ ಟೊಮ್ಯಾಟೋ ಬೆಳೆಯಲಾಗಿತ್ತು. ಆದರೆ ಟೊಮ್ಯಾಟೋ ಬೆಳೆಗೆ ಇದೀಗ ಬಿಳಿ ವೈರಸ್‌ ಕಾಟ ಶುರುವಾಗಿದೆ. ಜೊತೆಗೆ ಬಿಳಿ ಚುಕ್ಕೆ ರೋಗ, ಬೆಂಕಿ ರೋಗದಿಂದಾಗಿ ಟೊಮ್ಯಾಟೋ ಪೈರು ನೆಲಕಚ್ಚುವ ಸ್ಥಿತಿಗೆ ಬಂದು ತಲುಪಿದೆ.

ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಟೊಮ್ಯಾಟೋ ಬೆಳೆದ್ರೆ, ಕನಿಷ್ಟ ಅಂದ್ರೂ 60 ಟನ್‌ ಇಳುವರಿ ದೊರೆಯುತ್ತಿತ್ತು. ಆದ್ರೆ ಈ ಬಾರಿ ವೈಟ್‌ ವೈರಸ್‌ ಕಾಟದಿಂದಾಗಿ ಕೇವಲ 10 ಟನ್‌ ಇಳುವರಿ ಲಭಿಸುತ್ತಿದೆ. ಒಂದು ಎಕರೆಯಲ್ಲಿ ಟೊಮ್ಯಾಟೋ ಬೆಳೆಯಲು ಏನಿಲ್ಲ ಅಂದ್ರೂ ಒಂದೂವರೆ ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಈಗಿರುವ ಬೆಲೆಯ ಪ್ರಕಾರ ಒಂದು ಎಕರೆಗೆ ರೈತರು 10 ಲಕ್ಷಕ್ಕೂ ಅಧಿಕ ಆದಾಯವನ್ನು ಪಡೆಯಬೇಕಾಗಿತ್ತು. ಆದ್ರೆ ರೋಗಗಳಿಂದಾಗಿ ರೈತರು ಒಂದು ಎಕರೆ ಬೆಳೆ ಬೆಳೆದ ತಪ್ಪಿಗೆ 50 ಸಾವಿರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಅಂತಾ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Subsidy for milk : ಹೈನುಗಾರರಿಗೆ ಸಿಹಿ ಸುದ್ದಿ : ಹಾಲಿಗೆ ಮತ್ತೆ 5 ರೂ. ಪ್ರೋತ್ಸಾಹಧನ

ಇದನ್ನೂ ಓದಿ : Tomato Price : ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ : ಈ ರಾಜ್ಯದಲ್ಲಿ ಒಂದು ಕೆಜಿ ಟೊಮೆಟೊಗೆ 250 ರೂ.

ಈ ಬಾರಿ ಟೊಮ್ಯಾಟೋ ಬೆಳೆಗೆ ಆರಂಭದಿಂದಲೇ ರೋಗ ಬಾಧೆ ಕಾಡುತ್ತಿತ್ತು. ಗಿಡಗಳು ಸಾಮಾನ್ಯವಾಗಿ 112 ರಿಂದ 160 ಸೆಂ.ಮೀ.ನಷ್ಟು ಎತ್ತರ ಬೆಳೆಯಬೇಕಾಗಿತ್ತು. ಆದರೆ ತೀರಾ ಗಿಡ್ಡದಾಗಿವೆ. ಜೊತೆಗೆ ಹೂವುಗಳು ಕೂಡ ಸರಿಯಾಗಿ ಕಟ್ಟಿಲ್ಲ. ಎಷ್ಟೇ ಔಷಧಿ ಸಿಂಪಡಿಸಿದ್ದರೂ ಕೂಡ ರೋಗಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದಾಗಿ ಟೊಮ್ಯಾಟೋ ಬೆಳೆ ನೆಲಕಚ್ಚಿದೆ ಎಂದು ಅನ್ನದಾತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷ ಬೆಳೆ ಇದ್ರೂ ಬೆಲೆ ಇಲ್ಲಾ ಅಂತಾ ಕೊರಗುತ್ತಿದ್ದ ಅನ್ನದಾತರು ಇದೀಗ, ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಬಂಗಾರದ ಬೆಲೆ ಇದ್ದರೂ ಕೂಡ ಅದನ್ನು ಪಡೆಯುವ ಅದೃಷ್ಟ ಮಾತ್ರ ಟೊಮ್ಯಾಟೋ ಬೆಳೆಗಾರರಿಗೆ ಇಲ್ಲವಾಗಿದೆ.

Tomato White Virus Problem : Tomato price hike: Although there is a price for tomatoes in the market, farmers are not lucky

Comments are closed.