ಭಾರತದ ಅತಿದೊಡ್ಡ ಯುಟಿಲಿಟಿ ವೆಹಿಕಲ್ (UV) ತಯಾರಕರಾದ ಮಹೀಂದ್ರಾ ಮತ್ತು ಮಹೀಂದ್ರಾ ಹೊಸದಾದ ಸ್ಕಾರ್ಪಿಯೋ ಕ್ಲಾಸಿಕ್ (Mehindra Scorpio Classic)ಅನ್ನು ಆಗಸ್ಟ್ 12 ರಂದು ಅನಾವರಣಗೊಳಿಸಿತು. ಹೊಸ 2022 ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಮೂಲಭೂತವಾಗಿ ಈ ಹಿಂದನ ಸ್ಕಾರ್ಪಿಯೊದ ಫೇಸ್‌ಲಿಫ್ಟ್ ಆವೃತ್ತಿಯಾಗಿದೆ. ಮಹೀಂದ್ರಾ ಮತ್ತು ಮಹೀಂದ್ರಾ ಇತ್ತೀಚೆಗೆ 2022 ಮಹೀಂದ್ರ ಸ್ಕಾರ್ಪಿಯೊ-ಎನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿತ್ತು ಮತ್ತು ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಹೊಸ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮತ್ತು 2022 ಮಹೀಂದ್ರಾ ಸ್ಕಾರ್ಪಿಯೊ-ಎನ್ ಎರಡನ್ನೂ ಒಟ್ಟಿಗೆ ಮಾರಾಟ ಮಾಡಲು ಕಂಪನಿ ಮುಂದಾಗಿದೆ.
2022 ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ನ ವಿನ್ಯಾಸ :
ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಆರು ಲಂಬ ಕ್ರೋಮ್ ಸ್ಲ್ಯಾಟ್‌ಗಳು ಮತ್ತು ಮಹೀಂದ್ರಾದ ಹೊಸ ‘ಟ್ವಿನ್ ಪೀಕ್ಸ್’ ಲೋಗೋದೊಂದಿಗೆ ಕಪ್ಪು ಬಣ್ಣದ ಹೊರಗಿನ ಗ್ರಿಲ್ ಅನ್ನು ಪಡೆದುಕೊಂಡಿದೆ. SUV ಹೊಸ ಡ್ಯುಯಲ್-ಟೋನ್ ಅಲಾಯ್ ಚಕ್ರಗಳೊಂದಿಗೆ ರಿ–ಸ್ಟೈಲ್ ಆದ ಬಂಪರ್‌ಗಳು ಮತ್ತು ಫಾಗ್ ಲ್ಯಾಂಪ್ ಅಳವಡಿಸಿಕೊಂಡಿದೆ. ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಕೆಲವು ಹೊಸ ಬಣ್ಣದ ಆಯ್ಕೆಗಳನ್ನು ಸಹ ನೀಡಬಹುದು ಎನ್ನಲಾಗಿದೆ.
2022 ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ ನ ಇಂಟೀರಿಯರ್ :
ಪರಿಷ್ಕೃತ ರೇಡಿಯೇಟರ್ ಗ್ರಿಲ್ ಸೇರಿದಂತೆ ಸ್ಕಾರ್ಪಿಯೊ ಕ್ಲಾಸಿಕ್ ಸಣ್ಣ ಬಾಹ್ಯ ಬದಲಾವಣೆಗಳನ್ನು ಪಡೆದುಕೊಂಡಿದೆ. ಒಳಗೆ, SUV ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಡ್ಯುಯಲ್-ಟೋನ್ ಕ್ಯಾಬಿನ್ ಅನ್ನು ಹೊಂದಿದೆ. ಇದು ಸ್ಟೀರಿಂಗ್ ಚಕ್ರದಲ್ಲಿ ಹೊಸ ‘ಟ್ವಿನ್ ಪೀಕ್’ ಲೋಗೋವನ್ನು ಹೊಂದಿದೆ, ಆದರೆ ಟ್ವಿನ್-ಡಯಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಬದಲಾಯಿಸದೇ ಹಾಗೆ ಮುಂದುವರಿಸಿದೆ.
2022 ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ ನ ಎಂಜಿನ್:
2.2-ಲೀಟರ್ ಡೀಸೆಲ್ ಎಂಜಿನ್‌ನಿಂದ 130 BHP @ 3,750 rpm ಅನ್ನು ಉತ್ಪಾದಿಸುವುದು. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸರಬಹುದ. ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಹೆಚ್ಚಾಗಿ mHawk ಡೀಸೆಲ್ ಎಂಜಿನ್‌ನಿಂದ 137bhp ಮತ್ತು 319Nm ಟಾರ್ಕ್‌ನ ಪವರ್ ಔಟ್‌ಪುಟ್ ಅನ್ನು ಹೊಂದಿದೆ. ಮೋಟಾರ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಮತ್ತು ಯಾವುದೇ ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಹೊಂದಿಲ್ಲ.
2022 ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ನ ಬೆಲೆ :
2022 ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಹೊಸದಾಗಿ ಬಿಡುಗಡೆಯಾದ 2022 ಮಹೀಂದ್ರ ಸ್ಕಾರ್ಪಿಯೊ-ಎನ್‌ಗಿಂತ ಕಡಿಮೆ ಬೆಲೆಯನ್ನು ನಿರೀಕ್ಷಿಸಲಾಗಿದೆ. ಇದನ್ನು ರೂ 11.99 ಲಕ್ಷಕ್ಕೆ ಪರಿಚಯಿಸಲಾಗಿದೆ. ಇದು ಅದರ ಎಕ್ಸ್ ಶೋ ರೂಂ ಬೆಲೆಯಾಗಿದೆ. ಆದರೂ ಅಧಿಕೃತವಾಗಿ ಹೊಸ ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ನ ಬೆಲೆಗಳು ಈ ತಿಂಗಳ ಅಂತ್ಯದ ವೇಳೆಗೆ ಪ್ರಕಟವಾಗುವ ನಿರೀಕ್ಷೆಯಿದೆ.
ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ‘S’ ಮತ್ತು ‘S11’ ಟ್ರಿಮ್‌ಗಳಲ್ಲಿ ಏಳು ಅಥವಾ ಒಂಬತ್ತು ಆಸನಗಳ ಆಯ್ಕೆಗಳನ್ನು ನಿರೀಕ್ಷಿಸಲಾಗಿದೆ.
ಒಳಾಂಗಣವು ಟಚ್-ಸೆನ್ಸಿಟಿವ್ ಕಂಟ್ರೋಲ್‌ದೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನಿಂದ ಸಂಯೋಜಿಸಲ್ಪಟ್ಟಿದೆ.
2022 ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ನ ಪ್ರತಿಸ್ಪರ್ಧಿಗಳು:
ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಎರಡು ರೂಪಾಂತರಗಳಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ ಮತ್ತು ಇದು ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್, ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗಳಿಗೆ ಪ್ರಬಲ ಪೈಪೋಟಿ ನೀಡಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ : Yamaha Neo Electric Scooter: ರಿಮೂವೇಬಲ್ ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇದು!
ಇದನ್ನೂ ಓದಿ : Hyundai Alcazar : ಅತಿ ಕಡಿಮೆ ಬೆಲೆಯ ಪ್ರೆಸ್ಟೀಜ್ ಎಕ್ಸಿಕ್ಯುಟಿವ್ ಬಿಡುಗಡೆ ಮಾಡಿದ ಹುಂಡೈ! ಇದರ ವಿಶೇಷತೆ ಮತ್ತು ಬೆಲೆ ಹೀಗಿದೆ…
(2022 Mahindra Scorpio Classic unveiled on august 12)