Salman Rushdie : ವಿವಾದಿತ ಲೇಖಕ ಸಲ್ಮಾನ್​ ರಶ್ದಿಗೆ ಬಹಿರಂಗ ವೇದಿಕೆಯಲ್ಲಿ ಚಾಕು ಇರಿತ : ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ

ನ್ಯೂಯಾರ್ಕ್ : Salman Rushdie : ಅಮೆರಿಕದ ನ್ಯೂಯಾರ್ಕ್​ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ವಿವಾದಿತ ಲೇಖಕ ಸಲ್ಮಾನ್​ ರಶ್ದಿ ಎಂಬವರ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ. 75 ವರ್ಷ ಪ್ರಾಯದ ಲೇಖಕ ಸಲ್ಮಾನ್​ ರಶ್ದಿಗೆ ಈ ಹಿಂದೆಯೂ ಅನೇಕ ಬಾರಿ ಈ ರೀತಿಯ ಕೊಲೆ ಬೆದರಿಕೆಗಳು ಬಂದಿದ್ದವು. ಆದರೆ ಇದೇ ಮೊದಲ ಬಾರಿಗೆ ಅವರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ.


ನ್ಯೂಯಾರ್ಕ್​ ಸ್ಟೇಟ್​ ಪೊಲೀಸರು ಲೇಖಕ ಸಲ್ಮಾನ್​ ರಶ್ದಿ ಮೇಲೆ ನಡೆದ ಚಾಕು ಇರಿತ ನಡೆದಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಹೆಲಿಕಾಪ್ಟರ್​ ಮೂಲಕ ಸಲ್ಮಾನ್​ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗವರ್ನರ್​ ಕ್ಯಾಥಿ ಹೋಚುಲ್​ ಸಲ್ಮಾನ್​ ರಶ್ದಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಸಲ್ಮಾನ್​ ಇನ್ನೂ ಜೀವಂತವಾಗಿದ್ದಾರೆ. ಅವರಿಗೆ ಅಗತ್ಯವಾದ ಎಲ್ಲಾ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ ಎಂದು ಹೇಳಿದರು. ದಾಳಿಕೋರನನ್ನು ಈಗಾಗಲೇ ಬಂಧಿಸಲಾಗಿದ್ದು ಶೀಘ್ರದಲ್ಲಿಯೇ ಆತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.


ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದ್ದು ಕಪ್ಪು ಬಣ್ಣದ ಮುಸುಕುಧಾರಿಯಾಗಿ ಬಂದಿದ್ದ ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಹಾರಿ ಬಂದು ರಶ್ದಿಯ ಮೆಲೆ ದಾಳಿ ನಡೆಸಿದ್ದಾರೆ. ರಶ್ದಿ ಮೇಲೆ ದಾಳಿ ನಡೆದಿರುವುದು ಕಣ್ಣಿಗೆ ಬರುತ್ತಿದ್ದಂತೆಯೇ ಅವರ ಸಹಾಯಕ್ಕೆ ಭದ್ರತಾ ಸಿಬ್ಬಂದಿ ಧಾವಿಸಿದ್ದಾರೆ. ನ್ಯೂಯಾರ್ಕ್​ ನಗರದಿಂದ ಸುಮಾರು 100 ಕಿಲೋ ಮೀಟರ್​ ದೂರದಲ್ಲಿರುವ ಚೌಟಕ್ವಾ ಸಂಸ್ಥೆಯಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಭಾಷಣದ ಸಂಚಾಲಕನ ತಲೆಗೂ ಚಿಕ್ಕ ಪುಟ್ಟ ಗಾಯಗಳಾಗಿವೆ. ದಾಳಿ ನಡೆಯುತ್ತಿದ್ದಂತೆಯೇ ರಶ್ದಿ ಕುಸಿದು ಬಿದ್ದಿದ್ದಾರೆ. ದಾಳಿಕೋರನನ್ನು ಅಲ್ಲಿದ್ದ ಜನರು ತಡೆದಿದ್ದಾರೆ.

ನಿನ್ನೆ ಬೆಳಗ್ಗೆ 11 ಗಂಟೆ ವೇಳೆಗೆ ಕಾರ್ಯಕ್ರಮ ಆರಂಭವಾಗಿತ್ತು.ಇದೇ ವೇಳೆಗೆ ಕಪ್ಪು ಬಟ್ಟೆ ಧರಿಸಿ ಬಂದ ಆರೋಪಿ ಹದಿ ಮತರ್​​ ಕಪ್ಪು ಬಟ್ಟೆಯನ್ನು ಧರಿಸಿ ವೇದಿಕೆಯತ್ತ ಧಾವಿಸಿದ್ದಾನೆ . ಸಲ್ಮಾನ್​ ರಶ್ದಿ ಬಳಿಗೆ ಬಂದ ಆರೋಪಿಯು ಅನೇಕ ಬಾರಿ ಚಾಕುವಿನಿಂದ ಇರಿದ್ದಾನೆ. ಮಾರಣಾಂತಿಕವಾಗಿ ದಾಳಿಗೊಳಗಾದ ರಶ್ದಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕುತ್ತಿಗೆಯ ಭಾಗದಲ್ಲಿ ರಶ್ದಿಗೆ ಬಲವಾಗಿ ಪೆಟ್ಟಾಗಿದೆ. ಕೂಡಲೇ ಹೆಲಿಕಾಪ್ಟರ್​​ನಲ್ಲಿ ರಶ್ದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ವೆಂಟಿಲೇಟರ್​ನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲದೇ ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಇದನ್ನು ಓದಿ : Ganguly and Morgan : ಭಾರತದ 75ನೇ ಸ್ವಾತಂತ್ರ್ಯೋತ್ಸವ: ಸೆಪ್ಟೆಂಬರ್ 16ರಂದು ಕೋಲ್ಕತಾದಲ್ಲಿ ಭಾರತ Vs ವಿಶ್ವ ಇಲೆವೆನ್ ಕ್ರಿಕೆಟ್ ಮ್ಯಾಚ್

ಇದನ್ನೂ ಓದಿ : Mayank Agarwal Cooking : ಕ್ರಿಕೆಟ್ ಬಿಟ್ಟು ಅಡುಗೆ ಭಟ್ಟನಾದ ಮಯಾಂಕ್… ಅಗರ್ವಾಲ್ ಕೈಯಿಂದ ರೆಡಿಯಾಯ್ತು ಘಮ ಘಮ ಬಿರಿಯಾನಿ

Salman Rushdie Stabbed In Neck At New York Event, Taken To Hospital

Comments are closed.