ಸೋಮವಾರ, ಏಪ್ರಿಲ್ 28, 2025
HomeautomobileAuto Expo 2023 : ಆಟೋ ಎಕ್ಸ್‌ಪೋದಲ್ಲಿ ಬೆಳಕು ಚೆಲ್ಲಿದ ಎಲೆಕ್ಟ್ರಿಕ್‌ ಕಾರುಗಳು

Auto Expo 2023 : ಆಟೋ ಎಕ್ಸ್‌ಪೋದಲ್ಲಿ ಬೆಳಕು ಚೆಲ್ಲಿದ ಎಲೆಕ್ಟ್ರಿಕ್‌ ಕಾರುಗಳು

- Advertisement -

ಆಟೋ ಎಕ್ಸ್‌ಪೋ (Auto Expo 2023), ಭಾರತದ ವಾಹನ ತಯಾರಿಕಾ ಕಂಪನಿಗಳಿಗೆ (Auto Makers) ತಮ್ಮ ಸಿದ್ಧ ಉತ್ಪನ್ನಗಳನ್ನು ಪ್ರದರ್ಶಿಸುವ ಉತ್ತಮ ಸ್ಥಳವಾಗಿದೆ. ಈ ಮೇಳದಲ್ಲಿ ವಾಹನ ತಯಾರಕರು ತಮ್ಮ ಹೊಸ ಪರಿಕಲ್ಷನೆಗಳನ್ನು ಮತ್ತು ಉತ್ಪಾದನೆಗೆ ಸಿದ್ಧವಿರುವ ವಾಹನಗಳನ್ನು ಪ್ರದರ್ಶಿಸುತ್ತಾರೆ. ಜೊತೆಗೆ ಇದರಲ್ಲಿ ಕಾರು ತಯಾರಕರು ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಎರಡೂ ಅತ್ಯುತ್ತಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಾರೆ. ಆದರೆ ಈಗ ವಾಹನ ತಯಾರಿಕಾ ಉದ್ಯಮವು ವಿದ್ಯುದೀಕರಣದತ್ತ ಧಾವಿಸುತ್ತಿದೆ. ಸ್ವಾಭಾವಿಕವಾಗಿ 2023ರ ಆಟೋ ಎಕ್ಸ್‌ಪೋವು ಪ್ರಯಾಣಿಕ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಜೊತೆಗೆ ದ್ವಿಚಕ್ರ ವಾಹನ ಮತ್ತು ವಾಣಿಜ್ಯ ವಾಹನಗಳಲ್ಲಿಯೂ ಇಲೆಕ್ಟ್ರಿಕ್‌ ಪರಿಕಲ್ಪನೆ ವಿಸ್ತರಿಸಿದೆ.

ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಟಾಪ್‌ ಎಲೆಕ್ಟ್ರಿಕ್‌ ಕಾರುಗಳು :

ಹುಂಡೈ ಐಯೊನಿಕ್‌ 5:
ಹುಂಡೈ ಆಟೋ ಎಕ್ಸ್‌ಪೋ ದಲ್ಲಿ ತನ್ನ ಅತ್ಯಾಕರ್ಷಕ ಎಲೆಕ್ಟ್ರಿಕ್‌ ಕಾರು ಐಯೊನಿಕ್‌ 5 ಅನ್ನು ಭಾರತೀಯ ಮಾರುಕಟ್ಟೆಗೆ 44.95 ಲಕ್ಷಕ್ಕೆ (ಎಕ್ಸ್‌ ಶೋ ರೂಂ ಬೆಲೆ) ಪರಿಚಯಿಸಿದೆ. ಸ್ಪೋರ್ಟಿ ಲುಕ್‌ನಲ್ಲಿರುವ ಈ ಕಾರು ರಾಮೆಟ್ರಿಕ್ ಪಿಕ್ಸೆಲ್ LED ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳು, ಕ್ಲಾಮ್‌ಶೆಲ್ ಬಾನೆಟ್, ಆಟೋ-ಫ್ಲಶ್ ಡೋರ್ ಹ್ಯಾಂಡಲ್‌ಗಳು, ಸಕ್ರಿಯ ಏರೋ ಮಿಶ್ರಲೋಹದ ಚಕ್ರಗಳು ಮುಂತಾದ ವಿನ್ಯಾಸ ಅಂಶಗಳಿಂದ ಆಕರ್ಷಕವಾಗಿದೆ.

ಟೊಯೊಟಾ bZ4X:
ಟೊಯೊಟಾ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ bZ4X ಅನ್ನು ಆಟೋ ಎಕ್ಸ್‌ಪೋ 2023 ನಲ್ಲಿ ಪ್ರದರ್ಶಿಸಿದೆ. ಟೊಯೊಟಾ ಇ-ಟಿಎನ್‌ಜಿಎ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಟೊಯೊಟಾ bZ4X ತೀಕ್ಷ್ಣ ಮತ್ತು ಸ್ಪೋರ್ಟಿಯಾಗಿದೆ. ಈ ಕಾರು ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳಂತಹ ವಿನ್ಯಾಸ ಅಂಶಗಳನ್ನು ಪಡೆದುಕೊಡಿದೆ. ಶಕ್ತಿಶಾಲಿ 71.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಕಾರು ಸಿಂಗಲ್ ಮತ್ತು ಡ್ಯುಯಲ್-ಮೋಟಾರ್ ಕಾನ್ಫಿಗರೇಶನ್‌ಗಳನ್ನು ಪಡೆದುಕೊಂಡಿದೆ. ಇದು ಉತ್ತಮ ಮತ್ತು ಆಧುನಿಕ ವೈಬ್ ಅನ್ನು ನೀಡುತ್ತದೆ.

ಟಾಟಾ ಹ್ಯಾರಿಯರ್‌ EV:
ಟಾಟಾ ಮೋಟಾರ್ಸ್ ಆಟೋ ಎಕ್ಸ್‌ಫೋದಲ್ಲಿ ಮೂರು ಪರಿಕಲ್ಪನೆಯ ಕಾರುಗಳನ್ನು ಪ್ರದರ್ಶಿಸಿದೆ. ಅವುಗಳಲ್ಲಿ ಎರಡು ಎಲೆಕ್ಟ್ರಿಕ್ ಯುಟಿಲಿಟಿ ವಾಹನಗಳಾಗಿವೆ. ಟಾಟಾ ಹ್ಯಾರಿಯರ್ EV SUV ಯ ಸಂಪೂರ್ಣ-ವಿದ್ಯುತ್ ಪುನರಾವರ್ತನೆಯಾಗಿದೆ. ಟಾಟಾ ಹ್ಯಾರಿಯರ್ EV ಗಮನಾರ್ಹವಾಗಿ ವಿಭಿನ್ನ ವಿನ್ಯಾಸವನ್ನು ಅಳವಡಿಸಿಕೊಂಡಿದೆ. ಇದು ಆಂತರಿಕ ದಹನಕಾರಿ ಎಂಜಿನ್-ಚಾಲಿತ SUV ಗೆ ಹೋಲಿಸಿದರೆ ಇದು ಹೆಚ್ಚು ವಿಶಿಷ್ಟವಾಗಿದೆ. ಹ್ಯಾರಿಯರ್ EV ಭಾರತದಲ್ಲಿ 2024 ರಲ್ಲಿ ಬಿಡುಗಡೆಯಾಗಲಿದೆ.

ಮಾರುತಿ ಸುಜುಕಿ eVX ಕಾನ್ಸೆಪ್ಟ್‌:
ಮಾರುತಿ ಸುಜುಕಿ ಇವಿಎಕ್ಸ್ ಕಾನ್ಸೆಪ್ಟ್‌ ಎಲ್ಲಾ-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ SUVಗಳ ಪ್ರೀವ್ಯೂ ಮಾಡುತ್ತದೆ. ಅದು ಟಾಟಾ ಪಂಚ್ ಇವಿಗೆ ನೇರ ಪ್ರತಿಸ್ಪರ್ಧೆ ನೀಡಲಿದೆ. ಜೊತೆಗೆ ಮಹಿಂದ್ರಾ eKUV100 ವಿರುದ್ಧ ಸಂಭಾವ್ಯ ಸ್ಪರ್ಧೆ ನೀಡುವಂತೆ ತೋರುತ್ತಿದೆ. ಇವಿಎಕ್ಸ್ ಅನ್ನು ಆಟೋಮೇಕರ್ ಇಮ್ಯಾಜಿನೆಕ್ಸ್ಟ್ ಫಿಲಾಸಫಿ ಅಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಶಾರ್ಪ್‌ ಕ್ಯಾರೆಕ್ಟರ್‌ ಲೈನ್‌, ಫ್ಲಾಟ್ ಫಾಸಿಯಾ, ಎಲ್ಇಡಿ ಲೈಟ್‌ಗಳು ಇತ್ಯಾದಿಗಳೊಂದಿಗೆ ಸುಂದರವಾಗಿ ಕಾಣುತ್ತದೆ. ಸ್ಕಿಡ್ ಪ್ಲೇಟ್‌ಗಳು, ಸ್ಪೋರ್ಟಿ ವೀಲ್‌ಗಳು, ಫ್ಲೇರ್ಡ್ ಫೆಂಡರ್‌ಗಳು ಮತ್ತು ಸೈಡ್ ಸಿಲ್‌ಗಳು ಇವಿ ಕಾನ್ಸೆಪ್ಟ್‌ನಲ್ಲಿ ಸೇರಿವೆ.

ಕಿಯಾ EV9 ಕಾನ್ಸೆಪ್ಟ್‌:
ಕಿಯಾ ಮೋಟಾರ್‌ ಈ ಮೇಳದಲ್ಲಿ ಬಹುನಿರೀಕ್ಷಿತ EV9 ಕಾನ್ಸೆಪ್ಟ್‌ ಅನ್ನು ಪ್ರದರ್ಶಿಸಿದೆ. ಎಲೆಕ್ಟ್ರಿಕ್‌ ಪರಿಕಲ್ಪನೆಯ SUV ಇದಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ LED ಲೈಟಿಂಗ್‌ನೊಂದಿಗೆ ಕಾಣಿಸಿಕೊಳ್ಳುತ್ತದೆ. ಇದು ಮೂರು-ಸಾಲು ಆಸನಗಳು, ಬ್ಯಾಟರಿಗಳನ್ನು ಮರುಚಾರ್ಜ್ ಮಾಡದೆಯೇ ಹೆಚ್ಚುವರಿ ಶ್ರೇಣಿಗಾಗಿ ಛಾವಣಿಯ ಮೇಲೆ ಸೌರ ಫಲಕಗಳು, ಪಾಪ್-ಅಪ್ ಸ್ಟೀರಿಂಗ್ ಚಕ್ರ, ಪೆನಾರಾಮಿಕ್‌ ಸನ್‌ರೂಫ್‌ ಮತ್ತು ಅಲ್ಟ್ರಾ-ಲಾರ್ಜ್‌ 27-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ : Auto Expo 2023: ಇಂದು ಪ್ರಾರಂಭವಾದ ಆಟೋ ಎಕ್ಸ್ಪೋ 2023; ಭರ್ಜರಿಯಾಗಿ ಅನಾವರಣವಾಗಲಿರುವ ಹೊಸ ಕಾರುಗಳು

ಇದನ್ನೂ ಓದಿ : Ganga vilas in varanasi: ಗಂಗಾ ವಿಲಾಸ್‌ ನೌಕಾಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ: ಏನಿದರ ವೈಶಿಷ್ಟ್ಯ?

(Auto Expo 2023 electric cars that light up in the motor show)

RELATED ARTICLES

Most Popular