Ganga vilas in varanasi: ಗಂಗಾ ವಿಲಾಸ್‌ ನೌಕಾಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ: ಏನಿದರ ವೈಶಿಷ್ಟ್ಯ?

ನವದೆಹಲಿ: (Ganga vilas in varanasi) ಜಗತ್ತಿನ ಅತಿ ಉದ್ದನೆಯ ಹಾಗೂ ಐಷಾರಾಮಿ ನೌಕಾಯಾನಕ್ಕೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು. ಈ ಐಶಾರಾಮಿ ಹಡಗು ವಾರಣಾಸಿಯ ಗಂಗಾ ನದಿಯಲ್ಲಿ ಪ್ರಯಾಣ ಆರಂಭಿಸಿ ಬಾಂಗ್ಲಾದೇಶ ಮಾರ್ಗವಾಗಿ ಅಸ್ಸಾಂ ನಲ್ಲಿ ಪ್ರಯಾಣ ಮುಗಿಸಲಿದೆ.

ಮೋದಿ ಅವರಿಂದ ಉದ್ಘಾಟನೆಗೊಂದ ಈ ಐಷಾರಾಮಿ ಹಡಗು ಪ್ರಯಾಣ (Ganga vilas in varanasi) ಜ.13 ರಂದು ಪ್ರಾರಂಭಗೊಂಡು ಮಾ.1 ಕ್ಕೆ ಮುಗಿಯಲಿದೆ. ಒಟ್ಟು 3200 ಕಿ.ಮೀ. ದೂರ ಸಾಗಲಿರುವ ಗಂಗಾ ವಿಲಾಸ್‌ ಹಡಗು 51 ದಿನಗಳ ಕಾಲ ಗಂಗೆ, ಬ್ರಹ್ಮಪುತ್ರ ಸೇರಿದಂತೆ 27 ನದಿಗಳಲ್ಲಿ ಸಾಗಲಿದ್ದು, ನದಿ ಅಕ್ಕಪಕ್ಕದ ೫೦ ಪ್ರವಾಸಿ ತಾಣಗಳಲ್ಲಿ ನಿಲ್ಲಲಿದೆ. ಹಾಗೇಬ ಪ್ರತಿ ಬಂದರಿನಲ್ಲಿ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಾಗುವುದು ಎಂದು ಉದ್ಘಾಟನೆ ವೇಳೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ತಿಳಿಸಿದ್ದಾರೆ.

ಏನಿದರ ವಿಶೇಷಗಳು?

ಈ ಐಶಾರಾಮಿ ಹಡಗು ಮೂರು ಡೆಕ್‌ ಗಳನ್ನು ಹೊಂದಿದ್ದು, 36 ಪ್ರವಾಸಿಗರನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ 28 ಸೂಟ್‌ ಗಳನ್ನು ನಿರ್ಮಿಸಲಾಗಿದೆ. ಇದು ಹೊಂದಿದೆ. ಅಲ್ಲದೇ 40 ಮಂದಿ ಸಿಬ್ಬಂದಿಗಳು ಈ ಹಡಗಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಐಶಾರಾಮಿ ಗಂಗಾ ವಿಲಾಸ್‌ ಹಡಗಿನ ಟಿಕೆಟ್‌ ಗಳು ಅಂಟಾರಾ ರಿವರ್‌ ಕ್ರೂಸಸ್‌ ನ ವೆಬ್‌ ಸೈಟ್‌ ನಲ್ಲಿ ಲಭ್ಯವಿದ್ದು, ಪ್ರತಿ ವ್ಯಕ್ತಿಗೆ ಒಂದು ರಾತ್ರಿ ಕಳೆಯುವುದಕ್ಕೆ ಸರಾಸರಿ 25,000 ದರವಿದ್ದು, ವಿಹಾರಕ್ಕೆ ಸುಮಾರು 20 ಲಕ್ಷ ವೆಚ್ಚವಾಗಲಿದೆ.

ಇದನ್ನೂ ಓದಿ : Nashik Bus accident: ಯಾತ್ರಾರ್ಥಿಗಳಿದ್ದ ಬಸ್ಸು ಟ್ರಕ್‌ಗೆ ಢಿಕ್ಕಿ: 10 ಸಾವು, ಹಲವರಿಗೆ ಗಾಯ

ಗಂಗಾ ವಿಲಾಸ್‌ ಹಡಗು 62 ಮೀಟರ್‌ ಉದ್ದ, 12 ಮೀಟರ್‌ ಅಗಲ ಮತ್ತು 1.4 ಮೀಟರ್‌ ಡ್ರಾಫ್ಟ್ನೊಂದಿಗೆ ಸಾಗುತ್ತದೆ. ಪ್ರವಾಸಿಗರಿಗೆ ಸ್ಮರಣೀಯ ಅನುಭವವನ್ನು ಒದಗಿಸಲು ಎಲ್ಲಾ ಸೌಕರ್ಯಗಳನ್ನು ನೀಡಲಾಗಿದ್ದು, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಸ್ಟಾಪ್‌ ಓವರ್ ಗಳೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಾರಣಾಸಿಯ ಗಂಗಾ ವಿಲಾಸ್‌ ನೌಕಾಯಾನ ಸಿದ್ದವಾಗಿದೆ.

Ganga Vilas in Varanasi: Prime Minister Modi launched Ganga Vilas cruise: What is the feature?

Comments are closed.