ಮಂಗಳವಾರ, ಏಪ್ರಿಲ್ 29, 2025
HomeautomobileRapid Matte Edition ಭಾರತದಲ್ಲಿ ಬಿಡುಗಡೆ ಮಾಡಿದ Skoda India

Rapid Matte Edition ಭಾರತದಲ್ಲಿ ಬಿಡುಗಡೆ ಮಾಡಿದ Skoda India

- Advertisement -

ಜನಪ್ರಿಯ ಸೆಡಾನ್ ಕಾರು ಮಾದರಿಯಾದ ರ‍್ಯಾಪಿಡ್ ಮಾದರಿಯಲ್ಲಿ ರ‍್ಯಾಪಿಡ್ ಮ್ಯಾಟೆ ಎಡಿಷನ್(Rapid Matte Edition) ಕಾರನ್ನು ಸ್ಕೋಡಾ ಇಂಡಿಯಾ(Skoda India) ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದೆ. ರ‍್ಯಾಪಿಡ್ ಮ್ಯಾಟೆ ಎಡಿಷನ್ ಮಾದರಿಯನ್ನು ಮೊದಲ ಬಾರಿಗೆ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಸ್ಕೋಡಾ ಇಂಡಿಯಾ ಕಂಪನಿಯು ಇದೀಗ ಹೊಸ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರದೆ ಎನ್ನಲಾಗಿದೆ.

ಸ್ಕೋಡಾ ಕಂಪನಿಯು ರ‍್ಯಾಪಿಡ್ ಮ್ಯಾಟೆ ಎಡಿಷನ್ ಕಾರಿನಲ್ಲಿ ಕೇವಲ 400 ಯನಿಟ್ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು 400 ಯುನಿಟ್ ಮಾರಾಟದ ನಂತರ ಸ್ಥಗಿತಗೊಳ್ಳಲಿದೆ. ಹೊಸ ರ‍್ಯಾಪಿಡ್ ಮ್ಯಾಟೆ ಎಡಿಷನ್ ಸ್ಥಗಿತದ ನಂತರ ಸ್ಟ್ಯಾಂಡರ್ಡ್ ರ‍್ಯಾಪಿಡ್ ಮಾದರಿಯ ಮಾರಾಟವು ಮುಂದುವರಿಯಲಿದ್ದು, ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್‌ಗಳನ್ನು ಹೊಂದಿರುವ ಹೊಸ ಮ್ಯಾಟೆ ಎಡಿಷನ್‌ನಲ್ಲಿ ಹೆಚ್ಚುವರಿಯಾಗಿ ಕಾರ್ಬನ್ ಸ್ಟೀಲ್ ಮ್ಯಾಟೆ ಶೇಡ್ ಬಣ್ಣದ ಆಯ್ಕೆ ನೀಡಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ಬರಲಿದೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು

ಕಾರಿನ ಹೊರಮೈ ಜೊತೆಗೆ ಫ್ರಂಟ್ ಗ್ರಿಲ್, ಲಿಪ್ ಸ್ಪಾಯ್ಲರ್, ಬಾಡಿ ಮೊಲ್ಡಿಂಗ್, ರಿಯರ್ ಡಿಫ್ಯೂಸರ್, ಟೈಲ್‌ಗೇಟ್ ಸ್ಪಾಯ್ಲರ್, ಟ್ರಕ್ ಲಿಪ್ ಗಾರ್ನಿಶ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ನೀಡಲಾಗಿದೆ. ಹೊಸ ರ‍್ಯಾಪಿಡ್ ಮ್ಯಾಟೆ ಎಡಿಷನ್ ಮಾದರಿಯಲ್ಲಿ ಸ್ಕೋಡಾ ಕಂಪನಿಯು ಟೆಲ್ಲರ್ ಗ್ರೇ ಮತ್ತು ಬ್ಲ್ಯಾಕ್ ಬಣ್ಣದ ಡ್ಯುಯಲ್ ಟೋನ್ ಇಂಟಿರಿಯಲ್ ಬಣ್ಣದ ಆಯ್ಕೆ ನೀಡಿದ್ದು, ಲೆದರ್ ಆಸನಗಳಲ್ಲಿ ಆಕ್ಲಾಂಟರ್ ಇನ್ಸರ್ಟರ್ ನೀಡಲಾಗಿದೆ.

ರ‍್ಯಾಪಿಡ್ ಮ್ಯಾಟೆ ಎಡಿಷನ್ ಮಾದರಿಯು ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 13.49 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು 1.0-ಲೀಟರ್(999 ಸಿಸಿ) ಟಿಎಸ್‌ಐ ಟರ್ಬೋ ಪೆಟ್ರೋಲ್ ಆಯ್ಕೆ ಹೊಂದಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು ಗರಿಷ್ಠ 18.97ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು 16.24 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇದನ್ನೂ ಓದಿ: Hybrid Flying Car: ರಸ್ತೆಗುಂಡಿ, ಟ್ರಾಫಿಕ್ ಕಿರಿ ಕಿರಿಯೇ ಇಲ್ಲ: ಸದ್ಯದಲ್ಲೇ ಬರಲಿದೆ ಹಾರುವ ಕಾರು

(Skoda India, released in India by Rapid Matte Edition)

RELATED ARTICLES

Most Popular