ಸುಳ್ಯ ಕೋರ್ಟ್‌ಗೆ ಡಿ.ಕೆ.ಶಿವಕುಮಾರ್‌ ಹಾಜರ್‌ : ಕಲಾಪದ ವೇಳೆ ಹೊಯ್ತು ಕರೆಂಟ್‌ !

ಮಂಗಳೂರು : ವಿದ್ಯುತ್‌ ಸಮಸ್ಯೆ ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯೋರ್ವ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಕುರಿತು ಅಧಿಕಾರಿ ಗಳು ಪ್ರಕರಣ ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿಂದು ಡಿಕೆಶಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ಬಂದಿಳಿದ ಡಿ.ಕೆ.ಶಿವಕುಮಾರ್‌ ಅವರು ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಯ ವೇಳೆ ಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ನ್ಯಾಯಾಧೀಶರು ಕೂಡ ಸುಳ್ಯದಲ್ಲಿನ ವಿದ್ಯುತ್‌ ಸಮಸ್ಯೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ನಾನು ಇಂಧನ ಸಚಿವನಾಗಿದ್ದ ವೇಳೆಯಲ್ಲಿ ಯಾರೋ ಒಬ್ಬ ತರ್ಲೆ ಕರೆ ಮಾಡಿದ್ದ. ನನ್ನ ಜೊತೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನನಗೆ ಬೈದಿದ್ದ. ನಮ್ಮ ಅಧಿಕಾರಿಗಳು ಅವನ ವಿರುದ್ದ ದೂರು ನೀಡಿದ್ದರು. ಅಧಿಕಾರಿಗಳು ಬಾಯಿಗೆ ಬಂದ ಹಾಗೆ ಬೈದಿದ್ದ. ಸಾಕ್ಷಿಗೆ ಬರಬೇಕು ಎಂದು ನ್ಯಾಯಾಲಯ ಹೇಳಿದೆ. ಆರಂಭದಲ್ಲಿ ನನಗೆ ಗೊತ್ತಾಗಲಿಲ್ಲ, ಕೊನೆಗೆ ಲುಕ್‌ ಔಟ್‌ ನೋಟಿಸ್‌ ಪೇಪರ್‌ನಲ್ಲಿ ಹಾಕ್ತೇವೆ ಅಂತಾ ಆರ್ಡರ್‌ ಮಾಡಿದ್ದಾರೆ ಅಂತಾ ತಿಳಿದಿದೆ. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ನಾನು ಇಂದು ಬಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿಯ 40 ಶಾಸಕರು ಕಾಂಗ್ರೆಸ್‌ ಸೇರ್ಪಡೆ !

ಇದನ್ನೂ ಓದಿ : ಕೋವಿಡ್‌ನಿಂದ ಮೃತಪಟ್ಟ ಅನಾಥರಿಗೆ ಮುಕ್ತಿ ದೊರಕಿಸಿದ ಸಚಿವ ಆರ್.‌ ಅಶೋಕ್‌

(D.K.Shivakumar Attend Sullia Court today )

Comments are closed.