ಭಾನುವಾರ, ಏಪ್ರಿಲ್ 27, 2025
HomeautomobileDrones Delivery : ಬೆಂಗಳೂರಿನಲ್ಲೂ ಡ್ರೋನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ಆರ್ಡರ್ ಮಾಡಿದ...

Drones Delivery : ಬೆಂಗಳೂರಿನಲ್ಲೂ ಡ್ರೋನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ಆರ್ಡರ್ ಮಾಡಿದ ಆಹಾರ, ದೈನಂದಿನ ವಸ್ತು!

- Advertisement -

ಝಿಪ್ ( zipp) ಎಲೆಕ್ಟ್ರಿಕ್ ಇತ್ತೀಚೆಗೆ ಡ್ರೋನ್ ಲಾಜಿಸ್ಟಿಕ್ಸ್ (Drone Logistics) ವಿಭಾಗಕ್ಕೆ ಪ್ರವೇಶಿಸುತ್ತಿರುವುದಾಗಿ ಘೋಷಿಸಿದೆ. ಮತ್ತು ಅದಕ್ಕಾಗಿ ಟಿಎಸ್‌ಈಡಬ್ಲ್ಯೂ (TSAW) ಡ್ರೋನ್‌ಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ. ಮೊದಲ ಹಂತದಲ್ಲಿ ನಾಲ್ಕು ನಗರಗಳಲ್ಲಿ 200 ಡ್ರೋನ್‌ಗಳನ್ನು ನಿಯೋಜಿಸಲು ಯೋಜಿಸಲಾಗಿದೆ ಎಂದು ಕಂಪನಿ ಸದ್ಯ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈಸುದ್ದಿ ಕರ್ನಾಟಕದ (Karnataka) ಪಾಲಿಗೆ ಚೂರು ವಿಶೇಷವೇ ಆಗಿದೆ, ಕಾರಣ ಇಷ್ಟೇ, ಈ ಕಂಪನಿಯು ಬೆಂಗಳೂರಿನಲ್ಲಿಯೂ ಡ್ರೋನ್‌ (Drones Delivery) ಮೂಲಕ ಆಹಾರ ಉತ್ಪನ್ನ ಸೇರಿದಂತೆ ಎಲ್ಲ ಥರದ ಸೇವೆಗಳನ್ನು ಮನೆ ಬಾಗಿಲಿಗೆ ಹೊತ್ತು ತರುವ ಯೋಜನೆ ಹಮ್ಮಿಕೊಂಡಿದೆ.

ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಂತಹ ಜಿಪ್ ಎಲೆಕ್ಟ್ರಿಕ್ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನಗರಗಳಲ್ಲಿ ಈ ಸೇವೆಗಳನ್ನು ಯೋಜಿಸಲಾಗಿದೆ. ಕಂಪನಿಯ ಪ್ರಕಾರ, ನಿಯೋಜಿಸಲಾದ ಎಲ್ಲಾ ಡ್ರೋನ್‌ಗಳು ಸ್ಮಾರ್ಟ್ ಲಾಕರ್‌ಗಳನ್ನು ಹೊಂದಿದ್ದು, ಗ್ರಾಹಕರಿಗೆ ಒದಗಿಸಲಾದ ಓಟಿಪಿ ಮೂಲಕ ಮಾತ್ರ ತೆರೆಯಬಹುದಾಗಿದೆ, ಇದು ವಿತರಣೆಯ ಸಮಯದಲ್ಲಿ ವಸ್ತುಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಈ ಡ್ರೋಣನ್‌ಗಳನ್ನು ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಮೂಹಕ್ಕೆ ಎಕ್ಸ್ಟೆಂಡ್ ಆಗಿ ಸೇರಿಸಲಾಗುವುದು, ವೈದ್ಯಕೀಯ, ಆಹಾರ, ದಿನಸಿ ವಸ್ತುಗಳನ್ನು ದೂರದ ಪ್ರದೇಶಗಳಿಗೆ ಮತ್ತು ರಸ್ತೆಗಳ ಮೂಲಕ ಡೆಲಿವರಿ ಕಠಿಣವಾಗಿರುವ ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ಸ್ಥಳಗಳಿಗೆ ತಲುಪಿಸಲು ಸಹಾಯಕ ಆಗಲಿವೆ. ಟ್ರಾಫಿಕ್ ದಟ್ಟಣೆ ಮತ್ತು ಮಾನವ ಚಾಲಕರ ಮೇಲೆ ಹೆಚ್ಚಿನ ಅವಲಂಬನೆಯಿಂದಾಗಿ ಅಭಿವೃದ್ಧಿಯು ನಿಧಾನವಾಗಿರಬಹುದು, ಆಟೊಮ್ಯಾಟಿಕ್ ಡೇಲಿವರಿಗೆ ಈ ಡ್ರೋನ್‌ಗಳ ಪರಿಚಯವು ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.

ಝಿಪ್ ಎಲೆಕ್ಟ್ರಿಕ್ ಸಹ-ಸಂಸ್ಥಾಪಕ ಮತ್ತು ಸಿಇಒ ಆಕಾಶ್ ಗುಪ್ತಾ ಅವರು ತಮ್ಮ ಕಂಪನಿಯು ವಿವಿಧ ಸ್ಥಳಗಳಲ್ಲಿ ವಿತರಣೆಗಳನ್ನು ಸುಗಮ ಮತ್ತು ಚುರುಕಾಗಿ ಮಾಡಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು. “ಒಳ್ಳೆಯ ಭಾಗವೆಂದರೆ ಡ್ರೋನ್‌ಗಳು ಇಲೆಕ್ಟ್ರಿಕ್ ವಾಹನಗಳನ್ನು ಸಹ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಮತ್ತು ವೈದ್ಯಕೀಯ, ಆಹಾರ, ದಿನಸಿ ಪಾರ್ಸೆಲ್‌ಗಳನ್ನು ಅಗತ್ಯವಿರುವ ಸಮಯಕ್ಕೆ 1/10 ರಷ್ಟು ದೂರದಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ತಲುಪಿಸಲು ಸಹಾಯ ಮಾಡುತ್ತದೆ ಎಂದರು.

ಕಂಪನಿಯು ಈ ಡ್ರೋಣ್‌ಗಳನ್ನು ತನ್ನ ಈ ವೋಲ್ವ್ ಇನ್ನೋವೇಶನ್ ಕಾರ್ಯಕ್ರಮದ ಭಾಗವಾಗಿ , ಆರಂಭಿಕ ಹಂತದ ಇನ್ಕ್ಯುಬೇಟರ್‌ನೊಂದಿಗೆ ಆಯ್ಕೆ ಮಾಡಿದೆ ಎಂದು ಹೇಳಿದೆ. ಲಾಸ್ಟ್ ಮೈಲ್ ಲಾಜಿಸ್ಟಿಕ್, ಲಾಜಿಸ್ಟಿಕ್ಸ್ ಮತ್ತು ಒಟ್ಟಾರೆಯಾಗಿ ಎಲೆಕ್ಟ್ರಿಕ್ ವೆಹಿಕಲ್ (EV) ವಲಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಸ್ಟಾರ್ಟ್-ಅಪ್‌ಗಳಿಗೆ ಸಹಾಯ ಮಾಡುವುದು ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.

ಇದನ್ನೂ ಓದಿ: What is Ambergris smuggling: ಏನಿದು ಅಂಬರ್‌ಗ್ರೀಸ್ ಎಂಬ ತಿಮಿಂಗಿಲ ವಾಂತಿ? ಇದನ್ನು ಕಳ್ಳಸಾಗಣೆ ಮಾಡುವುದೇಕೆ?

ಇದನ್ನೂ ಓದಿ: Indian Economy: ಭಾರತದ ಆರ್ಥಿಕತೆ 2030ರಲ್ಲಿ ಜಪಾನ್‌ ಆರ್ಥಿಕತೆಯನ್ನು ಮೀರಲಿದೆ: ಐಎಚ್‌ಎಸ್‌ ಮಾರ್ಕಿಟ್‌ ವರದಿ

(Bangalore ready to welcome drones delivery agent)

RELATED ARTICLES

Most Popular