Act Of God : ಎಲ್ಲ ಅಗ್ನಿ ಅವಘಡಗಳಿಗೆ ದೇವರೇ ಹೊಣೆಯಲ್ಲ: ಸುಪ್ರೀಂಕೋರ್ಟ್

ನವದೆಹಲಿ: ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಭೂಕಂಪ, ನೆರ ಹಾವಳಿ, ಸಿಡಿಲು ಬಡಿತ (Natural Disaster)ಮುಂತಾದವುಗಳಿಂದ ಸಂಭವಿಸಿದ ಅಗ್ನಿ ಆಕಸ್ಮಿಕಗಳನ್ನು (Fire) ಒಂದು ಪಕ್ಷ ದೇವರ ಆಟವೆಂದು (Act Of God) ಹೇಳಬಹುದು. ಆದರೆ, ಇಂಥ ಯಾವುದೇ ಪ್ರಚೋದನೆ ಇಲ್ಲದೆ ಸಂಭವಿಸಿದ ಅಗ್ನಿ ಅವಘಡಗಳನ್ನು ಅನಿರೀಕ್ಷಿತ ಅನಾಹುತವೆಂದೇ ಅಭಿಪ್ರಾಯಪಡಬೇಕು ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ.

ಉತ್ತರ ಪ್ರದೇಶದ ಮದ್ಯ ತಯಾರಿಕಾ ಘಟಕದ ಗೋದಾಮಿನಲ್ಲಿ 2003ರ ಏಪ್ರಿಲ್ 10ರ ಮಧ್ಯರಾತ್ರಿ 12.55ಕ್ಕೆ ಕಾಣಿಸಿಕೊಂಡ ಬೆಂಕಿಯಿಂದ ಅಪಾರ ನಷ್ಟವಾಯಿತು. ಆದರೆ, ರಾಜ್ಯ ಅಬಕಾರಿ ಇಲಾಖೆ 6.39 ಕೋಟಿ ರೂಪಾಯಿ ಅಬಕಾರಿ ತೆರಿಗೆ ಕಟ್ಟಲು ನೋಟಿಸ್ ನೀಡಿತು. ಇದನ್ನು ಪ್ರಶ್ನಿಸಿ ಮೆಕ್ಡೊವಲ್ ಕಂಪನಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತು. ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್, ಘಟನೆಯನ್ನು ದೇವರ ಆಟವೆಂದು ಅಭಿಪ್ರಾಯಪಟ್ಟು; ಅಬಕಾರಿ ಸುಂಕದಿಂದ ವಿನಾಯಿತಿ ನೀಡಿತು. ಇದನ್ನು ಆಕ್ಷೇಪಿಸಿ ಅಬಕಾರಿ ಇಲಾಖೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. ಬೆಂಕಿ ಅನುಹಾತದಿಂದ ನಷ್ಟವಾದ ಕಂಪನಿಯೊಂದರ ಪರವಾಗಿದ್ದ ತೀರ್ಪನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ನೀಡಿದ್ದು, ಎಲ್ಲ ಬೆಂಕಿ ದುರಂತಗಳಿಗೆ ದೇವರ ಆಟವೆಂದು ಷರಾ ಬರೆಯಬಾರದು ಎಂದಿದೆ.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ, ಪ್ರಕೃತಿ ಪ್ರಕೋಪದ ಪ್ರಚೋದನೆ ಇಲ್ಲದೆ ಅವಡ ಉಂಟಾದರೆ ಅದಕ್ಕೆ ದೇವರನ್ನು ಹೊಣೆಗಾರನೆಂದು ಹೇಳಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಮಾನವನ ಪ್ರಮಾದಿಂದಲೂ ಈ ಅವಘಡ ನಡೆದಂತೆ ಕಾಣುವುದಿಲ್ಲ. ಹೀಗಾಗಿ ಇದನ್ನು ಅನಿರೀಕ್ಷಿತ ದುರಂತ ಎನ್ನಬಹುದು ಎಂದು ಹೇಳಿದೆ. ಪ್ರತಿವಾದಿಗಳು ಹೆಚ್ಚಿನ ರೀತಿಯಲ್ಲಿ ಸುರಕ್ಷತಾ ಕ್ರಮ ಮತ್ತು ಅಗ್ನಿ ನಿರೋಧಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದರೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Electric Vehicles : ಬರಲಿದೆ ವಿದ್ಯುತ್ ವಾಹನಗಳು ನಿಂತಿರುವಾಗಲೇ ಅಥವಾ ಚಲಿಸುತ್ತಿರುವಾಗಲೇ ಚಾರ್ಜ್ ಆಗುವಂತಹ ತಂತ್ರಜ್ಞಾನ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Supreme Court says all fire accidents are not an act of God)

Comments are closed.