ಇಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two-Wheeler) ಪ್ರಪಂಚದಲ್ಲಿ ಇಲೆಕ್ಟ್ರಿಕ್ ಸ್ಕೂಟರ್‌ಗಳ ಹವಾ ಜೋರಾಗಿಯೇ ಇದೆ. ಕಡಿಮೆ ವೆಚ್ಚದ ಹಾಗೂ ವೇಗದ ಚಾರ್ಜಿಂಗ್ (Charging) ಹೊಂದಿರುವ ಈ ಸ್ಕೂಟರ್‌ಗಳು ಪೆಟ್ರೋಲ್ ಸ್ಕೂಟರ್‌ಗಿಂತ ಬೆಸ್ಟ್ ಎಂದು ಪ್ರಶಂಸೆಗೆ ಒಳಗಾಗುತ್ತಿವೆ. ಹೊಸ ಮಾದರಿಯ ಸ್ಕೂಟರ್‌ಗಳಲ್ಲಿ ರಿಮೂವೆಬಲ್ ಬ್ಯಾಟರಿಗಳನ್ನು (Removable Battery) ಸಹ ಕಾಣಬಹುದಾಗಿದೆ. ಚಾರ್ಜಿಂಗ್ ಸ್ಟೇಷನ್‌ಗಳಲ್ಲಾದ ಹೆಚ್ಚಳವು ಇವುಗಳನ್ನು ಖರೀದಿಸುವತ್ತ ಯೋಚಿಸುವಂತೆ ಮಾಡಿವೆ. ಮೈಲೇಜ್‌ನಲ್ಲಿಯೂ ಉತ್ತಮವಾಗಿದ್ದು, ಹಗುರವಾಗಿದೆ. ನೀವು ಇಲೆಕ್ಟ್ರಿಕ್ ಸ್ಕೂಟರ್ (Best E-Scooters) ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿ ಹೇಳಿರುವ ಮಾಡೆಲ್‌ಗಳನ್ನೊಮ್ಮೆ ಗಮನಿಸಿ.
ಹೀರೋ ಒಪ್ಟಿಮಾ CX:
ಹೀರೋ ಬಿಡುಗಡೆ ಮಾಡಿರುವ ಒಪ್ಟಿಮಾ CX, 550 ವ್ಯಾಟ್‌ನ BLDC ಮೋಟಾರ್ ಹೊಂದಿದ್ದು, 1.2 bhp ಪವರ್ ಹೊಂದಿದೆ. ಇದು 52.2 v ನ 30Ah ಲೀಥಿಯಂ ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಇದು ಒಂದು ಚಾರ್ಜ್‌ನಲ್ಲಿ 140 ಕಿಮೀ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ ಪ್ರತಿ ಗಂಟೆಗೆ 45 ಕಿಮೀ ಮೈಲೇಜ್ ನೀಡಲಿದೆ. ಈ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 62,190 ರೂ ಗಳಿಂದ 77,490 ರೂ. ಗಳವರೆಗೆ ಇರಲಿದೆ.
ಅಥರ್ 450X :
ಹೊಸ ತಂತ್ರಜ್ಞಾನಗಳನ್ನು ಇಷ್ಟಪಡುವವರು ಮತ್ತು ಕಡಿಮೆ ವೆಚ್ಚದಲ್ಲಿ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಯಸುವವರಿಗೆ, ಇದು ಉತ್ತಮ ಆಯ್ಕೆಯಾಗಿದೆ. ಅಥರ್ 450X 6 kW ಎಲೆಕ್ಟ್ರಿಕ್ ಮೋಟರ್‌ನೊಂದಿಗೆ 3.7 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಪ್ರತಿ ಚಾರ್ಜ್‌ಗೆ 146 ಕಿಮೀ ವ್ಯಾಪ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಎಕ್ಸ್ ಶೋ ರೂಂ ಬೆಲೆ 98,183 ರಿಂದ 1.28 ಲಕ್ಷ ರೂ. ಆಗಿದೆ.
ಬೌನ್ಸ್ ಇನ್ಫಿನಿಟಿ :
ಬೌನ್ಸ್ ಇನ್ಫಿನಿಟಿ ಇಲೆಕ್ಟ್ರಿಕ್ ಸ್ಕೂಟರ್ 2 kWh 48V 39 Ah ಸ್ವಾಪೇಬಲ್ (ಬದಲಾಯಿಸಬಹುದಾದ) ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಅದನ್ನು ಹಬ್ ಮೋಟರ್‌ಗೆ ಜೋಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ವೇಗವು 65 kmph. ಇದು 2.9bhp ಗರಿಷ್ಠ ಶಕ್ತಿ ಮತ್ತು 83Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ಫಿನಿಟಿಯಲ್ಲಿ IP67-ರೇಟೆಡ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಲಾಗಿದೆ. ಇದು ಚಾರ್ಜ್ ಮಾಡಲು ನಾಲ್ಕು ರಿಂದ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು 85 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ರೈಡ್ ಮೋಡ್‌ಗಳು ಇದರಲ್ಲಿದೆ. ಈ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆಯು 64,299 ರೂ. ಗಳಾಗಿದೆ.
ಇದನ್ನೂ ಓದಿ : Flipkart ನಲ್ಲಿ Google Pixel 7a ಬಿಗ್ ಆಫರ್ : ಬೆಲೆ ಮತ್ತು ವೈಶಿಷ್ಟ್ಯಗಾಗಿ ಇಲ್ಲಿ ಪರಿಶೀಲಿಸಿ
ಇದನ್ನೂ ಓದಿ : Higher EPS Pension: ಹೆಚ್ಚಿನ ಪಿಂಚಣಿಗಾಗಿ ಇಪಿಎಫ್‌ಒ ಬಾಕಿ ಲೆಕ್ಕಾಚಾರ ಮಾಡುವುದು ಹೇಗೆ ?
(Best E-Scooters. Electric scooters with a removable battery. Check the details)