Breakfast Recipe : ಬೆಳಗ್ಗಿನ ಉಪಾಹಾರಕ್ಕೆ ಡಿಫರೆಂಟ್‌ ಆಗಿ ಪೌಷ್ಠಿಕವಾದ ಸೋರೆಕಾಯಿ ಚಿಲ್ಲಾ ಪ್ರಯತ್ನಿಸಿ

ಸೋರೆಕಾಯಿ (Bottle Gourd) ತುಂಬಾ ಪೌಷ್ಟಿಕ ತರಕಾರಿ. ಬಾಟಲ್‌ ಗಾರ್ಡ್‌, ಲೋಕಿ ಎಂದೆಲ್ಲಾ ಕರೆಯುವ ಸೋರೆಕಾಯಿಯಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಪಲ್ಯ, ಸಾಂಬಾರ, ಪರೋಟಾ, ಹಲ್ವಾ ಮುಂತಾದವುಗಳು ಬಹಳ ರುಚಿಯಾಗಿರುತ್ತದೆ. ಸೋರೆಕಾಯಿಯನ್ನು ಡಿಫೆರೆಂಟ್‌ ಆಗಿ ಬೆಳಗಿನ ತಿಂಡಿಗೂ (Breakfast Recipe) ಉಪಯೋಗಿಸಿಬಹುದು. ಚಿಲ್ಲಾ ಎಂದು ಕರೆಯುವ ವಿಶೇಷ ತಿಂಡಿ ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಹೆಚ್ಚು ಕಡಿಮೆ ಇದು ದೋಸೆಯಂತಹದೇ ತಿಂಡಿ. ಬೆಳಗಿನ ಉಪಾಹಾರಕ್ಕೆ ಇದು ಉತ್ತಮ ಆಯ್ಕೆಯೂ ಹೌದು. ಇದು ರುಚಿಯಾಗಿದ್ದು, ಸುಲಭವಾಗಿ ತಯಾರಿಸಬಹುದು. ಫೈಬರ್ ಅಧಿಕವಾಗಿರುವ ಸೋರೆಕಾಯಿ ಚಿಲ್ಲಾವೂ ಜೀರ್ಣಕ್ರಿಯೆಗೆ ಒಳ್ಳೆಯದು. ಹಾಗಾದರೆ ಸೋರೆಕಾಯಿ ಚಿಲ್ಲಾ ತಯಾರಿಸುವುದು ಹೇಗೆ ಇಲ್ಲಿದೆ ಓದಿ.

ಸೋರೆಕಾಯಿ ಚಿಲ್ಲಾ ತಯಾರಿಸಲು ಬೇಕಾದ ಪದಾರ್ಥಗಳು:

ತುರಿದ ಸೋರೆಕಾಯಿ 1 ಬಟ್ಟಲು
ಕಡಲೆ ಹಿಟ್ಟು 4 ಚಮಚ
ಮೊಸರು 2 ಚಮಚ
ರವಾ 2 ಚಮಚ
2 ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ
ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು
ಚಾಟ್ ಮಸಾಲ ಒಂದು ಟೇಬಲ್ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಎಣ್ಣೆ

  • ಸೋರೆಕಾಯಿ ಚಿಲ್ಲಾ ಹೀಗೆ ತಯಾರಿಸಿ:
  • ತುರಿದ ಸೋರೆಕಾಯಿಯನ್ನು ಕೈಗಳಿಂದ ಒತ್ತಿ ನೀರನ್ನು ಹೊರ ತೆಗೆಯಿರಿ.
  • ನಂತರ ಒಂದು ಪಾತ್ರೆಗೆ ರವಾ ಮತ್ತು ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಈಗ ಅದಕ್ಕೆ ತುರಿದ ಸೋರೆಕಾಯಿ ಹಾಕಿ ಮಿಕ್ಸ್ ಮಾಡಿ.
  • ಆ ಮಿಶ್ರಣಕ್ಕೆ ಮೊಸರು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಮತ್ತು ರುಚಿಗೆ ತಕ್ಕಂತೆ ಚಾಟ್ ಮಸಾಲಾ ಸೇರಿಸಿ ಮಿಕ್ಸ್‌ ಮಾಡಿ.
  • ಈಗ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಮತ್ತು ಆ ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ.
  • ಹಿಟ್ಟನ್ನು ತಯಾರಿಸಿದ ನಂತರ, ಅದನ್ನು ಸ್ವಲ್ಪ ಸಮಯದವರೆಗೆ ಮುಚ್ಚಿಡಿ.
  • ಈಗ ನಾನ್ ಸ್ಟಿಕ್ ಪ್ಯಾನ್‌ ತೆಗೆದುಕೊಂಡು ಬಿಸಿ ಮಾಡಿ. ಅದರ ಮೇಲೆ ಚೀಲಾ ಹಿಟ್ಟನ್ನು ನಿಧಾನವಾಗಿ ದೋಸೆಯ ರೀತಿಯಲ್ಲಿಯೇ ಹಾಕಿ.
  • ಈಗ ಚೀಲಾದ ಅಂಚಿಗೆ ಸ್ವಲ್ಪ ಎಣ್ಣೆ ಹಾಕಿ, ಸ್ವಲ್ಪ ಸಮಯದ ನಂತರ ತಿರುಗಿಸಿ.
  • ಎರಡೂ ಬದಿಯನ್ನು ಗೋಲ್ಡನ್‌ ಬ್ರೌನ್‌ ಆಗುವವರೆಗೆ ಚೆನ್ನಾಗಿ ಬೇಯಿಸಿ.
  • ಇದನ್ನು ಗ್ರೀನ್‌ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆಗೆ ಸವಿಯಿರಿ.

ಇದನ್ನೂ ಓದಿ : Fruits On Empty Stomach : ಖಾಲಿ ಹೊಟ್ಟೆಯಲ್ಲಿ ತಪ್ಪಾಗಿಯೂ ಈ ಹಣ್ಣುಗಳನ್ನು ತಿನ್ನಲೇಬೇಡಿ

ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆ 2023 : ನಾಳೆ ಮತ ಎಣಿಕೆಗೆ ಸಕಲ ಸಿದ್ದತೆ

(Breakfast Recipe. Try this nutritious and tasty food. Lauki chilla recipe)

Comments are closed.