ಭಾನುವಾರ, ಏಪ್ರಿಲ್ 27, 2025
HomeautomobileBullet Bike Receipt:ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಯ್ತು 37 ವರ್ಷಗಳ ಹಿಂದಿನ ಬುಲೆಟ್‌ ಬೈಕ್‌ ರಶೀದಿ!...

Bullet Bike Receipt:ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಯ್ತು 37 ವರ್ಷಗಳ ಹಿಂದಿನ ಬುಲೆಟ್‌ ಬೈಕ್‌ ರಶೀದಿ! ಬೆಲೆ ಎಷ್ಟಿತ್ತು?

- Advertisement -

ನವದೆಹಲಿ:(Bullet Bike Receipt) ಕೆಲವರಲ್ಲಿ ಬೈಕ್‌ ಖರೀದಿಸುವ ಹುಚ್ಚು ಇರುತ್ತದೆ. ಮಾರ್ಕೆಟ್‌ ನಲ್ಲಿ ಬರುವ ಹೊಸ ಹೊಸ ಬೈಕ್‌ ಗಳನ್ನು ಖರೀದಿ ಮಾಡುತ್ತಾರೆ. ಇನ್ನು ಕೆಲವರಿಗೆ ಬೈಕ್‌ ಖರೀದಿ ಮಾಡುವುದು ಕನಸಿನ ಮಾತು. ಬೈಕ್‌ ನ್ನು ಖರೀದಿ ಮಾಡಲು ಲಕ್ಷ, ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕು . ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ 37 ವರ್ಷಗಳ ಹಿಂದಿನ ಬುಲೆಟ್‌ ಬೈಕ್‌ ಖರೀದಿಯ ರಶೀದಿ ಫೋಟೋ ವೈರಲ್‌ ಆಗುತ್ತಿದೆ.

(Bullet Bike Receipt)ರಾಯಲ್‌ ಎನ್ ಫೀಲ್ಡ್‌ ಕಂಪನಿಯ ಬುಲೆಟ್‌ ಎಂದರೆ ಇಷ್ಟ ಪಡದ ಜನರು ಎಲ್ಲೂ ಇಲ್ಲ, ಆ ಬೈಕ್‌ ನ ಗಟ್ಟಿತನ ಮತ್ತು ಅದನ್ನು ಓಡಿಸುವಾಗ ಬರುವಂತಹ ಶಬ್ಧವನ್ನು ಇಷ್ಟಪಡುತ್ತಾರೆ. 90 ರ ದಶಕದಿಂದಲೂ ಕೂಡ ಈ ಬೈಕ್‌ ಗೆ ಹೆಚ್ಚು ಬೇಡಿಕೆ ಇದೆ. ಆಗಿನ ಕಾಲದಲ್ಲಿ ಒಂದು ರೂಪಾಯಿಗೂ ಕೂಡ ಜನರು ಅಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು, ಅದರಲ್ಲೂ ಈ ಬುಲೆಟ್‌ ಬೈಕ್‌ ಕೊಳ್ಳುವುದು ಕಷ್ಟಕರ . ಒಂದುವೇಳೆ ಯಾರಾದರೂ ಬುಲೆಟ್‌ ಬೈಕ್‌ ಖರೀದಿ ಮಾಡಿದರೆ ಅವನೇ ಶ್ರೀಮಂತ ಎಂದು ಎಲ್ಲರೂ ಕೂಡ ಗೌರವ ಕೊಡುತ್ತಿದ್ದರು. ಈಗ ಲಕ್ಷ ಲಕ್ಷ ಕೊಟ್ಟು ಖರೀದಿ ಮಾಡುವ ಬುಲೆಟ್‌ ಬೈಕ್‌ ಬೆಲೆ 37 ವರ್ಷಗಳ ಹಿಂದೆ ಎಷ್ಟಿತ್ತು ಎಂಬುದರ ಬಗ್ಗೆ ಕುತೂಹಲ ಮೂಡುವುದು ಸಹಜ.

ಇತ್ತೀಚಿನ ದಿನಗಳಲ್ಲಿ ಬುಲೆಟ್‌ ಬೈಕ್‌ ಖರೀದಿ ಮಾಡುತ್ತೇವೆ ಎಂದರೆ ಒಂದು ಅಥವಾ ಮೂರು ಲಕ್ಷ ದಷ್ಟು ಹಣವನ್ನು ಖರ್ಚು ಮಾಡಬೇಕು. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ 1986 ರ ಬುಲೆಟ್‌ ಬೈಕ್‌ ನ ಬಿಲ್‌ ಫೋಟೋದಲ್ಲಿ 18,700 ರೂ ಬೆಲೆ ಇದೆ. ಈ ಬಿಲ್‌ ನಲ್ಲಿ ರಾಯಲ್‌ ಎನ್‌ ಫೀಲ್ಡ್‌ ಬುಲೆಟ್‌ 350ಸಿಸಿ ಬೈಕ್‌ ಖರೀದಿ ಮಾಡಿದ್ದಾರೆ ಎಂದು ತಿಳಿಯಬಹದು ಮತ್ತು ಈ ಬೈಕ್‌ ಅನ್ನು ಜಾರ್ಖಂಡ್‌ ನ ಬೊಕಾರೊ ಸ್ಟೀಲ್‌ ಸಿಟಿಯಿಂದ ಖರೀದಿ ಮಾಡಿದ್ದಾರೆ ಎಂದು ಈ ಫೋಟೋದಲ್ಲಿ ಕಾಣಬಹುದು.

ಇದನ್ನೂ ಓದಿ:Top 5 Electric Scooters in India: 2022 ರ ಟಾಪ್‌ 5 ಇಲೆಕ್ಟ್ರಿಕ್‌ ಸ್ಕೂಟರ್‌ಗಳು

ಇದನ್ನೂ ಓದಿ:Honda : ಹುಂಡೈ ಕ್ರೆಟಾಗೆ ಸವಾಲೊಡ್ಡಲು ಮಿಡ್‌–ಸೈಜ್‌ SUV ಗಳನ್ನು ಪ್ರಾರಂಭಿಸಲಿರುವ ಹೋಂಡಾ

ಪುರುಷರು ಅಷ್ಟೇ ಅಲ್ಲದೆ ಈ ಬೈಕ್‌ ಅನ್ನು ಮಹಿಳೆಯರು ಕೂಡ ಓಡಿಸುತ್ತಾರೆ. ಸೋಲೋ ಟ್ರಿಪ್‌ ಹೋಗುವುದಕ್ಕೂ ಈ ಬೈಕ್‌ ಆರಾಮದಾಯಕವಾಗಿರುತ್ತದೆ. ಎಂತಹದೆ ರೋಡ್‌ ಇದ್ದರು ಮುಂದೆ ಸಾಗುತ್ತದೆ. ಹಾಗಾಗಿ ಇಂತಹ ಗಟ್ಟಿ ಇರುವಂತಹ ಬುಲೆಟ್‌ ಬೈಕ್‌ ಗಳು ಭಾರತೀಯ ಸೇನೆಯಲ್ಲೂ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.

Bullet bike receipt 37 years ago went viral on social media! what was the price

RELATED ARTICLES

Most Popular