Ranji Karnataka : V3 ಸ್ಟಾರ್ಸ್ ದಾಳಿಗೆ ಛತ್ತೀಸ್‌ಗಢ ಚಿತ್, ಕ್ಯಾಪ್ಟನ್ ಮಯಾಂಕ್ ಶತಕದ ಅಬ್ಬರ

ಬೆಂಗಳೂರು: ಕರ್ನಾಟಕ ತಂಡದ V3 ಸ್ಟಾರ್’ಗಳ ಭರ್ಜರಿ ಬೌಲಿಂಗ್’ಗೆ ಛತ್ತೀಸ್’ಗಢ ತಂಡ ಮಕಾಡೆ (Ranji Karnataka) ಮಲಗಿದೆ.ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ’ಸಿ’ ಗುಂಪಿನ ರಣಜಿ ಪಂದ್ಯದಲ್ಲಿ (Ranji Trophy 2022-23) ಕರ್ನಾಟಕ ವಿರುದ್ಧ ಛತ್ತೀಸ್’ಗಢ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 311 ರನ್’ಗಳಿಗೆ ಆಲೌಟಾಗಿದೆ.

ಪ್ರಥಮ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದ ಛತ್ತೀಸ್’ಗಢ 2ನೇ ದಿನ ಕೇವಲ 44 ರನ್’ಗಳ ಅಂತರದಲ್ಲಿ ಕೊನೆಯ 5 ವಿಕೆಟ್’ಗಳನ್ನು ಕಳೆದುಕೊಂಡಿತು. ಕರ್ನಾಟಕದ V3 ಸ್ಟಾರ್’ಗಳ ಭರ್ಜರಿ ಬೌಲಿಂಗ್ ಮೂಲಕ ಛತ್ತೀಸ್’ಗಢ ತಂಡವನ್ನು ಕಟ್ಟಿ ಹಾಕಿದರು. V3 ಸ್ಟಾರ್ಸ್ ಅಂದ್ರೆ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ ಕುಮಾರ್ ಮತ್ತು ವಾಸುಕಿ ಕೌಶಿಕ್. ಈ ತ್ರಿವಳಿ ಮಧ್ಯಮ ವೇಗಿಗಳ ದಾಳಿಗೆ ಛತ್ತೀಸ್’ಗಢ ಅಕ್ಷರಶಃ ನಲುಗಿತು.

ವೃತ್ತಿಜೀವನದ 6ನೇ ರಣಜಿ ಪಂದ್ಯವಾಡುತ್ತಿರುವ ಕೊಡಗಿನ ಹುಡುಗ ವಿದ್ವತ್ ಕಾವೇರಪ್ಪ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿ 67 ರನ್ನಿಗೆ 5 ವಿಕೆಟ್ ಉರುಳಿಸಿದರು. ಇದು ರಣಜಿ ಟ್ರೋಫಿಯಲ್ಲಿ ವಿದ್ವತ್ ಕಾವೇರಪ್ಪ ಅವರ ಚೊಚ್ಚಲ 5 ವಿಕೆಟ್ ಸಾಧನೆ. ಕಾವೇರಪ್ಪಗೆ ಸಮರ್ಥವಾಗಿ ಸಾಥ್ ಕೊಟ್ಟ ಮತ್ತೊಬ್ಬ ಬಲಗೈ ಮಧ್ಯಮ ವೇಗಿ ವಾಸುಕಿ ಕೌಶಿಕ್ 43 ರನ್ನಿಗೆ 4 ವಿಕೆಟ್ ಪಡೆದರೆ, ಮತ್ತೊಂದು ವಿಕೆಟ್ ವೈಶಾಖ್ ವಿಜಯ್ ಕುಮಾರ್ ಪಾಲಾಯಿತು.

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಆರಂಭಿಕರಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಉಪನಾಯಕ ಆರ್.ಸಮರ್ಥ್ ಮೊದಲ ವಿಕೆಟ್’ಗೆ 163 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಸತತ 4ನೇ ರಣಜಿ ಶತಕದತ್ತ ಹೆಜ್ಜೆ ಹಾಕಿದ್ದ ಸಮರ್ಥ್ 127 ಎಸೆತಗಳಲ್ಲಿ 81 ರನ್ ಗಳಿಸಿ ಔಟಾಗಿ ಶತಕ ವಂಚಿತರಾದರು.

ಇದನ್ನೂ ಓದಿ : Abhimanyu Eswaran century : ಅಪ್ಪ ಕಟ್ಟಿಸಿದ ತನ್ನದೇ ಹೆಸರಿನ ಕ್ರೀಡಾಂಗಣದಲ್ಲಿ ರಣಜಿ ಶತಕ ಬಾರಿಸಿದ ಮಗ

ಇದನ್ನೂ ಓದಿ : Exclusive Rishabh Pant accident secret: ರಿಷಭ್ ಪಂತ್ ಆ್ಯಕ್ಸಿಡೆಂಟ್ ಗುಟ್ಟು ರಟ್ಟು.. ಪಂತ್ ಆ್ಯಕ್ಸಿಡೆಂಟ್‌ಗೆ ಕಾರಣ ಗರ್ಲ್ ಫ್ರೆಂಡ್!

ಇದನ್ನೂ ಓದಿ : Mysuru Chamundeswari Temple : ಮದುವೆಗೂ ಮುನ್ನ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕ್ರಿಕೆಟಿಗ ರಾಹುಲ್

ಬಲಗೈ ಓಪನರ್ ಸಮರ್ಥ್ ಕಳೆದ ಮೂರೂ ಪಂದ್ಯಗಳಲ್ಲಿ ಶತಕ ( 119* Vs ಸರ್ವಿಸಸ್, 137 Vs ಪುದುಚೇರಿ, 140 Vs ಗೋವಾ) ಬಾರಿಸಿದ್ದರು.ಮತ್ತೊಂದೆಡೆ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಬಾರಿಸಿದ್ದು ಅಜೇಯ 102 ರನ್’ಗಳೊಂದಿಗ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 2ನೇ ದಿನದಂತ್ಯಕ್ಕೆ ಕರ್ನಾಟಕ ತಂಡ 1 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.

Ranji Karnataka: Chhattisgarh Chit, Captain Mayank blast century for V3 Stars attack

Comments are closed.