ಭಾನುವಾರ, ಏಪ್ರಿಲ್ 27, 2025
HomeautomobileRailway Luggage Rules: ಎಚ್ಚರ ! ಲಗೇಜ್‌ ನಿಯಮ ಮರೆತರೆ ಹೊರಬೇಕಾದೀತು ‘ದಂಡದ ಹೊರೆ’!!

Railway Luggage Rules: ಎಚ್ಚರ ! ಲಗೇಜ್‌ ನಿಯಮ ಮರೆತರೆ ಹೊರಬೇಕಾದೀತು ‘ದಂಡದ ಹೊರೆ’!!

- Advertisement -

ರೈಲು ಪ್ರಯಾಣಿಕರು(Railway Passengers) ಅತಿ ಹೆಚ್ಚಿನ ಲಗೇಜ್‌ನೊಂದಿಗೆ ಪ್ರಾಯಾಣಿಸುವ ದೃಶ್ಯಗಳು ಸರ್ವೇಸಾಮಾನ್ಯ. ಆದರೆ ವಿಮಾನಗಳಂತೆಯೇ ರೈಲುಗಳು ಸಹ ಲಗೇಜ್‌ (Railway Luggage Rules)ಗಳ ಮೇಲೆ ಮಿತಿಯನ್ನು ಹೊಂದಿದೆ. ಅಂದರೆ ಪ್ರಯಾಣಿಕರು ಉಚಿತವಾಗಿ ಇಷ್ಟೇ ತೂಕದ ಲಗೇಜ್‌ಗಳನ್ನು ಉಚಿತವಾಗಿ ಸಾಗಿಸಬಹುದಾಗಿದೆ. ಅದಕ್ಕೆ IRCTC ನಿಯಮ ಸಹ ಮಾಡಿದೆ. ಅವರು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಲಗೇಜ್‌ನೊಂದಿಗೆ ಪ್ರಯಾಣಿಸುವ ಪ್ರಯಾಣಿಕರು ದಂಡ ತೆರಬೇಕಾಗುತ್ತದೆ.

ಪ್ರಯಾಣಿಕರು ತಮ್ಮ ಕ್ಲಾಸ್‌ ಗಳಲ್ಲಿ ಅನುಮತಿ ನೀಡಿದ ಲಗೇಜ್‌ ಮಿತಿಯಲ್ಲಿಯೇ ಪ್ರಯಾಣಿಸಬೇಕು. ಇಲ್ಲವಾದರೆ ಬ್ರೇಕ್‌ ವ್ಯಾನ್‌ಗಳನ್ನು ಬುಕ್‌ ಮಾಡಬೇಕಾಗುತ್ತದೆ. ಹೀಗೆ ಮಾಡಿದ್ದರೆ ಪ್ರಯಾಣಿಕರು ದಂಡದ ಹೊರೆ ಹೋರಬೇಕಾದೀತು.

ಈಗಿರುವ ಲಗೇಜ್‌ ನಿಯಮಗಳ ಪ್ರಕಾರ ಎಸಿ ಫಸ್ಟ್‌ ಕ್ಲಾಸ್‌ ಟಿಕೆಟ್‌ನೊಂದಿಗೆ ಪ್ರಯಾಣಿಸುವ ಪ್ರಯಾಣಿಕರು 70 ಕೆಜಿ ಲಗೇಜ್‌ ಅನ್ನು ಹೆಚ್ಚುವರಿ ಶುಲ್ಕವಿಲ್ಲದೆ ಸಾಗಿಸಬಹುದಾಗಿದೆ. ಎಸಿ ಸೆಕೆಂಡ್‌ ಕ್ಲಾಸ್‌ ಟಿಕೆಟ್‌ನೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಮಿತಿಯನ್ನು 50 ಕೆಜಿ ನಿಗದಿಪಡಿಸಲಾಗಿದೆ. 40 ಕೆಜಿ ಲಗೇಜ್‌ ಅನ್ನು ಉಚಿತವಾಗಿ ಎಸಿ ತ್ರೀ–ಟೈರ್‌ ಸ್ಲೀಪರ್‌ ಅಥವಾ ಎಸಿ ಚೇರ್‌ಕಾರ್‌ ಕಂಪಾರ್ಟಮೆಂಟ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೊಂಡೊಯ್ಯಬಹುದಾಗಿದೆ.

ಸೆಕೆಂಡ್‌ ಕ್ಲಾಸ್‌ ಸ್ಲೀಪರ್‌ ಕೋಚ್‌ಗಳಲ್ಲಿ ಪ್ರಯಾಣಿಕರು 35 ಕೆಜಿ ಲಗೇಜ್‌ ತೆಗದುಕೊಂಡು ಹೋಗಬಹುದಾಗಿದೆ. ಆದರೆ ಬ್ಯಾಗ್‌ ಮತ್ತು ಪಾರ್ಸಲ್‌ಗಳ ಉದ್ದ, ದಪ್ಪ ಮತ್ತು ಅಗಲ ಹೀಗಿದೆ 100cm X 60 cm X 25 cm ಗಿಂತ ಹೆಚ್ಚಿರಬಾರದು. ಒಂದು ವೇಳೆ ಲಗೇಜ್‌ ಈ ಮಿತಿಯನ್ನು ಮೀರಿದೆ ಎಂದಾದರೆ ಆಗ ಪ್ರಯಾಣಿಕರು ಅದನ್ನು ಸಾಗಿಸಿಸಲು ಬ್ರೆಕ್‌ ವ್ಯಾನ್‌ಗಳಿಗೆ ಬುಕ್‌ ಮಾಡಬೇಕಾಗುವುದು.

ಜೂನ್‌ನಲ್ಲಿ ರೈಲ್ವೆಯ ಲಗೇಜ್‌ ನಿಯಮಗಳು ಬದಲಾಗಿದೆ ಎಂಬ ವದಂತಿಗಳು ಹಬ್ಬಿತ್ತು ಆದರೆ ರೈಲ್ವೆ ಸಚಿವಾಲಯ ಟ್ವೀಟ್‌ ಮಾಡುವುದರ ಮೂಲಕ ಈ ವರದಿಯನ್ನು ನಿರಾಕರಿಸಿದೆ. ಈಗಿರುವ ಲಗೇಜ್‌ ನಿಯಮಗಳು 10 ವರ್ಷಗಳಿಂದ ಜಾರಿಯಲ್ಲಿದೆ.

ಇದನ್ನೂ ಓದಿ : Airtel New Recharge Plan : ಏರ್‌ಟೆಲ್‌ನ ರೇಟ್‌ ಕಟರ್‌ ಪ್ಲಾನ್‌ಗಳು! ಅಗ್ಗದ 4 ಹೊಸ ಪ್ಲಾನ್‌ಗಳು ಯಾವುದು ಗೊತ್ತಾ?

ಇದನ್ನೂ ಓದಿ : Azadi Ka Amrit Mahotsav: ಸ್ವಾತಂತ್ರೋತ್ಸವ ನೆನಪಿಗಾಗಿ ಆಜಾದಿ ಕಾ ಅಮೃತ್ ಮಹೋತ್ಸವ ರೈಲು ಸಂಚಾರ ಪ್ರಾರಂಭ

(Do you know about railway luggage rules)

RELATED ARTICLES

Most Popular