tourist car washed away : ನದಿಯಲ್ಲಿ ಕೊಚ್ಚಿಕೊಂಡು ಹೋದ ಕಾರು :9 ಮಂದಿ ದುರ್ಮರಣ

ಉತ್ತರಾಖಂಡ್​ : tourist car washed away : ವರುಣನ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ಜನತೆ ಎಷ್ಟು ಜಾಗರೂಕತೆ ವಹಿಸಿದರೂ ಕಡಿಮೆ ಎಂಬಂತಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೂ ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೂ ಸಂಕಷ್ಟ ತಪ್ಪಿದ್ದಲ್ಲ. ಉತ್ತರಾಖಂಡ್​​ನ ನೈನಿತಾಲ್​ ರಾಮನಗರದಲ್ಲಿ ಪ್ರವಾಸಿಗರಿಂದ ತುಂಬಿದ್ದ ಕಾರೊಂದು ಧೇಲಾ ನದಿಯಲ್ಲಿ ಕೊಚ್ಚಿ ಹೋದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ ಘಟನೆಯು ವರದಿಯಾಗಿದೆ. ಎರ್ಟಿಗಾ ಕಾರಿನಲ್ಲಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಇದರಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.ಪವಾಡ ಸದೃಶ ರೀತಿಯಲ್ಲಿ ಹೆಣ್ಣು ಮಗುವೊಂದು ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದೆ.

ಭಾರೀ ಮಳೆಯಿಂದಾಗಿ ಉತ್ತರಾಖಂಡ್​ನ ಹಲವೆಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ಐದು ಗಂಟೆ ಸುಮಾರಿಗೆ ಅಡ್ಡ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು. ಆದರೆ ಕಾರು ಚಾಲಕ ನೀರು ಹರಿಯುತ್ತಿರುವ ರಸ್ತೆಯ ಮೇಲೆಯೇ ಕಾರು ಚಲಾಯಿಸುವ ಧೈರ್ಯ ಮಾಡಲು ಮುಂದಾಗಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಪ್ರವಾಹದ ತೀವ್ರತೆಗೆ 10 ಮಂದಿಯಿದ್ದ ಎರ್ಟಿಗಾ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.ಕಾರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸ್ವೀಕರಿಸುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ.

ಕಾರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವರ ಪೈಕಿ ಹೆಣ್ಣು ಮಗುವನ್ನು ರಕ್ಷಿಸುವಲ್ಲಿ ಸ್ಥಳೀಯ ನಿವಾಸಿಗಳು ಯಶಸ್ವಿಯಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸ್​ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಎರ್ಟಿಗಾ ಕಾರಿನಿಂದ ಕೊಚ್ಚಿಕೊಂಡು ಹೋದವರ ಪೈಕಿ ಆರು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಾರಿನಲ್ಲಿದ್ದ ಉಳಿದ ಮೂವರ ಮೃತದೇಹಕ್ಕಾಗಿ ಪೊಲೀಸರು ಹಾಗೂ ಜಿಲ್ಲಾಡಳಿತ ಶೋಧ ಕಾರ್ಯ ಮುಂದುವರಿಸಿದೆ.

ಇದನ್ನು ಓದಿ : man arrested for rape : ನಿರಂತರ ಅತ್ಯಾಚಾರವೆಸಗಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 50ರ ಕಾಮುಕ ಅರೆಸ್ಟ್​

ಇದನ್ನೂ ಓದಿ : Heavy Rain Red Alert : ಕರಾವಳಿಯಲ್ಲಿ ಮೇಘಸ್ಪೋಟ : ರೆಡ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ, 5 ದಿನ ಸುರಿಯಲಿದೆ ಭಾರಿ ಮಳೆ

ಇದನ್ನೂ ಓದಿ : Railway Luggage Rules: ಎಚ್ಚರ ! ಲಗೇಜ್‌ ನಿಯಮ ಮರೆತರೆ ಹೊರಬೇಕಾದೀತು ‘ದಂಡದ ಹೊರೆ’!!

tourist car washed away in dhela river of uttarakhand

Comments are closed.