ಭಾನುವಾರ, ಏಪ್ರಿಲ್ 27, 2025
Homeautomobileಭವಿಷ್ಯದಲ್ಲಿಯೂ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಬೀಳಬಹುದು : ಓಲಾ ಎಲೆಕ್ಟ್ರಿಕ್ ಮುಖ್ಯಸ್ಥರು ಹೀಗೆ ಹೇಳಿದ್ಯಾಕೆ ?

ಭವಿಷ್ಯದಲ್ಲಿಯೂ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಬೀಳಬಹುದು : ಓಲಾ ಎಲೆಕ್ಟ್ರಿಕ್ ಮುಖ್ಯಸ್ಥರು ಹೀಗೆ ಹೇಳಿದ್ಯಾಕೆ ?

- Advertisement -

ನವದೆಹಲಿ : ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿಯ (E-scooter fires ) ಘಟನೆಗಳು ಹೆಚ್ಚು ಸಂಭವಿಸಬಹುದು, ಆದರೆ ಅಂತಹ ಘಟನೆಗಳು ಬಹಳ ಅಪರೂಪ ಎಂದು ಭಾರತದ ಓಲಾ ಎಲೆಕ್ಟ್ರಿಕ್‌ನ ಮುಖ್ಯ ಕಾರ್ಯನಿರ್ವಾಹಕ ಭವಿಶ್ ಅಗರ್ವಾಲ್ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರದಲ್ಲಿ ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಕಾಳಜಿಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ.

ಓಲಾದ ಇ-ಸ್ಕೂಟರ್‌ಗೆ ಬೆಂಕಿ ತಗುಲಿರುವ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಬಾರೀ ಕೋಲಾಹಣ ಸೃಷ್ಟಿಸಿತ್ತು. ಅಲ್ಲದೇ ಭಾರತ ಸರಕಾರ ತನಿಖೆಗೆ ಮುಂದಾಗಿದೆ. ಬೆಂಕಿ ಪ್ರಕರಣದ ಹಿನ್ನೆಲೆಯಲ್ಲಿ ಜಪಾನ್‌ನ ಸಾಫ್ಟ್‌ಬ್ಯಾಂಕ್ ಗ್ರೂಪ್ ಬೆಂಬಲಿತ ಕಂಪನಿಯು 1,400 ಕ್ಕೂ ಹೆಚ್ಚು ಇ-ಸ್ಕೂಟರ್‌ಗಳನ್ನು ಹಿಂತೆಗೆದುಕೊಂಡಿದೆ. ಅಲ್ಲದೇ ತನಿಖೆಗಾಗಿ ಬಾಹ್ಯ ತಜ್ಞರನ್ನು ನೇಮಕ ಮಾಡಿದೆ ಎಂದಿದ್ದಾರೆ.

ಓಲಾ ಕಂಪನಿಯು ತನ್ನ ಇ-ಸ್ಕೂಟರ್‌ಗಳಿಗಾಗಿ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಪೂರ್ವವೀಕ್ಷಣೆ ಮಾಡಿದ ಈವೆಂಟ್‌ನ ರೆಕಾರ್ಡಿಂಗ್‌ನಲ್ಲಿ ಅವರು ಬೆಂಕಿಯನ್ನು ‘ಅತ್ಯಂತ ಅಪರೂಪ ಮತ್ತು ಪ್ರತ್ಯೇಕ’ ಎಂದು ವಿವರಿಸಿದರು. ಆಟೋಮೋಟಿವ್ ಉದ್ಯಮದಲ್ಲಿ ಅಗ್ನಿ ಸುರಕ್ಷತೆಯು ಎಲೆಕ್ಟ್ರಿಕ್ ವಾಹನಗಳನ್ನು (ಇವಿಗಳು) ಮೀರಿ ವಿಶಾಲವಾದ ಸಮಸ್ಯೆಯಾಗಿದೆ, ಇವಿ ಉದ್ಯಮಕ್ಕಿಂತ ಪೆಟ್ರೋಲ್ ಇಂಧನ ವಾಹನಗಳಿಗೆ ಗುಣಮಟ್ಟದ ನಿಯಂತ್ರಣ ನಿಯಮಗಳ ಹೆಚ್ಚಿನ ಅಗತ್ಯತೆ ಇದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು ಗ್ಯಾಸೋಲಿನ್ ಆಧಾರಿತ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ. ಸಮಸ್ಯೆಯು ಒಟ್ಟಾರೆಯಾಗಿ ದ್ವಿಚಕ್ರ ವಾಹನ ಉದ್ಯಮಕ್ಕೆ ಸಂಬಂಧಿಸಿದೆ ಎಂದು ಓಲಾ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಭಾರತೀಯ ಸ್ಟಾರ್ಟ್-ಅಪ್‌ಗಳಾದ ಓಕಿನಾವಾ ಮತ್ತು ಪ್ಯೂರ್‌ಇವಿಯಿಂದ ಇ-ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾದ ಘಟನೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸ್ಕೂಟರ್‌ಗೆ ಅಳವಡಿಸಲಾಗಿರುವ ಸೆಲ್‌ನಲ್ಲಿ ಸಣ್ಣಪುಟ್ಟ ದೋಷಗಳು ಇರಬಹುದು, ಅಥವಾ ಬೇರೆಯದೇ ಕಾರಣದಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದಿದ್ದಾರೆ.

ಓಲಾ ಈಗಾಗಲೇ 50,000 ಇ-ಸ್ಕೂಟರ್‌ಗಳನ್ನು ರಸ್ತೆ ಇಳಿಸಿದ್ದು, ಈ ಪೈಕಿ ಬೆಂಕಿ ಅವಘಡದ ಒಂದು ಪ್ರಕರಣ ಕಂಡು ಬಂದಿದೆ. ಓಲಾ ತನ್ನ ಸೆಲ್‌ಗಳನ್ನು ದಕ್ಷಿಣ ಕೊರಿಯಾದ LG ಎನರ್ಜಿ ಸೊಲ್ಯೂಷನ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಎಲ್ಲಾ ಕಂಪನಿಗಳು ಘಟಕಗಳನ್ನು ಜವಾಬ್ದಾರಿಯುತವಾಗಿ ಪಡೆಯಬೇಕು ಮತ್ತು ಉದಾಹರಣೆಗೆ ‘ಅನರ್ಹ ಚೀನೀ ಪೂರೈಕೆದಾರರಿಂದ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಹೆಚ್ಚುವರಿ 1000 ಇವಿ ಚಾರ್ಜಿಂಗ್ ಘಟಕ : ಸಚಿವ ಸುನಿಲ್‌ ಕುಮಾರ್‌

ಇದನ್ನೂ ಓದಿ : ಭಾರತದಲ್ಲಿ 2022ರಲ್ಲಿ ರಸ್ತೆಗೆ ಇಳಿಯಲಿರುವ ಟಾಪ್ ಎಲೆಕ್ಟ್ರಿಕಲ್‌ ಕಾರ್‌ಗಳು

E-scooter fires can happen in future says Ola Electric Chief

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular