Lunar eclipse 2022 : ಮೊದಲ ಚಂದ್ರಗ್ರಹಣ : ಗೋಚರ ಸಮಯ, ಸ್ಥಳ ಸಂಪೂರ್ಣ ವಿವರ

ಬೆಂಗಳೂರು : ಈ ವರ್ಷದ ಮೊದಲ ಚಂದ್ರಗ್ರಹಣವು (Lunar eclipse 2022 ) ಇಂದು ರಾತ್ರಿ ಮತ್ತು ಮೇ 16 ರಂದು ವಿಶ್ವದ ಹಲವಾರು ಭಾಗಗಳಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ದೇಶದಲ್ಲಿ ಗ್ರಹಣದ ಆಚರಣೆಯನ್ನು ಮಾಡಲಾಗುತ್ತಿದೆ.

ಮೇ 16 ರಂದು ಬೆಳಗ್ಗೆ 7.02 ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 12.30 ಕ್ಕೆ ಮೋಕ್ಷವಾಗಲಿದೆ. ಚಂದ್ರ ಗ್ರಹಣದ ಪ್ರಾರಂಭಿಕ ಹಂವನ್ನು ಬರಿಗಣ್ಣಿನಿಂದ ವೀಕ್ಷಣೆ ಮಾಡಲು ಸಾಧ್ಯವಿಲ್ಲ. ಖಗೋಳಶಾಸ್ತ್ರಜ್ಞರು ಮಾತ್ರ ಈ ಹಂತವನ್ನು ವೀಕ್ಷಣೆ ಮಾಡಲಿದ್ದಾರೆ. ಚಂದ್ರಗ್ರಹಣವು ಅಮೆರಿಕ, ಯುರೋಪ್ ಮತ್ತು ಆಫ್ರಿಕಾ ಸೇರಿದಂತೆ ಪ್ರದೇಶಗಳಲ್ಲಿ ಗೋಚರಿಸುತ್ತದೆ.

ಚಂದ್ರಗ್ರಹಣವನ್ನು ದೂರದರ್ಶಕಗಳು ಮತ್ತು ದುರ್ಬೀನುಗಳನ್ನು ಬಳಸಿ ವೀಕ್ಷಣೆ ಮಾಡುವುದು ಹೆಚ್ಚು ಸೂಕ್ತವಾಗಿದೆ. ಏಪ್ರಿಲ್ 30, 2022 ರಂದು ಸಂಭವಿಸಿದ ಭಾಗಶಃ ಸೂರ್ಯಗ್ರಹಣದ ಎರಡು ವಾರಗಳ ನಂತರ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಎರಡು ಗ್ರಹಣಗಳು ಒಂದೇ ಗ್ರಹಣ ಕಾಲದಲ್ಲಿ ಸಂಭವಿಸುತ್ತವೆ. ಗ್ರಹಣ ಋತುವಿನ ಅವಧಿಯು ಸಾಮಾನ್ಯವಾಗಿ ಸುಮಾರು 35 ದಿನಗಳು ಆಗಿದ್ದು, ಸುಮಾರು 2 ಅಥವಾ 3 ಗ್ರಹಣಗಳು ಸಂಭವಿಸುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ : IIM Calcutta : ಐಐಎಂನ 28 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ : 58 ವಿದ್ಯಾರ್ಥಿಗಳು ಹೋಮ್ ಐಸೋಲೇಶನ್‌

ಇದನ್ನೂ ಓದಿ : ಮುಂದಿನ ಮೂರು ದಿನ ಬಾರೀ ಮಳೆ : ರೆಡ್ ಅಲರ್ಟ್ ಘೋಷಣೆ

Lunar eclipse 2022: Visible Timing, place and other complete details

Comments are closed.