ಭಾರತದ ಅತ್ಯಂತ ಜನಪ್ರಿಯ ಕಾರು ಎನಿಸಿಕೊಂಡಿರುವ ಹ್ಯುಂಡೈಐ 20 (Hyundai i20 2023 hatchback car) ಇದೀಗ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದು, ಈಗಾಗಲೇ ಯುರೋಪ್‌ನಲ್ಲಿ (European Market) ಕಾರು (Car )ಬಿಡುಗಡೆಯಾಗಿದ್ದು,ಇದೀಗ ಭಾರತದ ಮಾರುಕಟ್ಟೆಗೆ ಎಂಟ್ರಿಕೊಟ್ಟಿಗೆ ಕಾರು ಕೇವಲ 6.99 ಲಕ್ಷ ರೂ. ಲಭ್ಯವಿದೆ.

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL)ಯ ಅತ್ಯಂತ ಜನಪ್ರಿಯ ಕಾರು ಎನಿಸಿಕೊಂಡಿರುವ ಹ್ಯುಂಡೈ i20 ಕಾರು ಇದೀಗ ಅತ್ಯಂತ ಕಡಿಮೆ ಬೆಲೆಗೆ ಎಂಟ್ತಿ ಕೊಟ್ಟಿದೆ. ಕೆಲವು ತಿಂಗಳ ಹಿಂದೆಯಷ್ಟೇ ಯುರೋಪಿನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಹ್ಯುಂಡೈ ಐ20 ಕಾರು ಕಾರು ಇದೀಗ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದೆ. ಹ್ಯುಂಡೈ i20 ಹ್ಯಾಚ್ ಬ್ಯಾಕ್ ಕಾರು ಇದೀಗ ಕೇವಲ 6.99 ಲಕ್ಷ ರೂ. ಲಭ್ಯವಿದೆ.

ಹೊಸ ಹುಂಡೈ ಐ20 ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಪ್ರಮುಖವಾಗಿ ಪ್ರಯಾಣಿಕರ ಸುರಕ್ಷಿತೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ರಿಮೈಂಡರ್ ಸೇರಿದಂತೆ ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದನ್ನೂ ಓದಿ : Tata Punch ICNG : 7.10 ರೂ ಲಕ್ಷಕ್ಕೆ ಮಾರುಕಟ್ಟೆಗೆ ಬಂತು ಟಾಟಾ ಪಂಚ್ CNG : ಎಲೆಕ್ಟ್ರಿಕ್ ಸನ್‌ರೂಫ್ ಜೊತೆಯಲ್ಲಿದೆ ಹಲವು ವೈಶಿಷ್ಟ್ಯ
ಇನ್ನು ಕಾರಿನ ಮುಂಭಾಗದಲ್ಲಿ ಹೊಸ ಗ್ರಿಲ್ ಅಳವಡಿಸಲಾಗಿದ್ದು, ಹೆಡ್‌ಲ್ಯಾಂಪ್‌ಗಳ ಮಾದರಿಯನ್ನು ಬದಲಾಯಿಸಲಾಗಿದೆ. ಅಲ್ಲದೇ ಎಲ್ ಆಕಾರದಲ್ಲಿ LED DRL ಅಳವಡಿಸಲಾಗಿದೆ. ಹೊಸ 16 ಇಂಚಿನ ಮಿಶ್ರಲೋಹದ ಚಕ್ರಗಳ ಮೇಲೆ ಕಾರು ಕುಳಿತಿರುವಾಗ, ಮುಂಭಾಗ ಮತ್ತು ಹಿಂಭಾಗದಲ್ಲಿರುವ ಬಂಪರ್‌ಗಳನ್ನು ಸಹ ಸಂಪೂರ್ಣವಾಗಿ ಬದಲಾಯಿಸಲಾಗಿದೆ.

ಹ್ಯುಂಡೈ ವೆರ್ನಾದಲ್ಲಿ ಇರುವಂತೆಯೇ ಹ್ಯುಂಡೈ i20 ಕಾರಿನಲ್ಲಿಯೂ ಬ್ಯಾನೆಟ್ ಗ್ರಿಲ್ ಬದಲಿಗೆ ಹೊಸ ಹುಂಡೈ ಲೋಗೋವನ್ನು ಅಳವಡಿಸಲಾಗಿದೆ. ಗ್ರಾಹರು ಗ್ರೇ ಬಣ್ಣ ಸೇರಿದಂತೆ ಹಲವು ಬಣ್ಣದ ಕಾರುಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಹೊಸ ಕಾರಿನ ಕುರಿತು ಹುಂಡೈ ಮೋಟಾರ್ಡ್ ಕಂಪೆನಿಯ ಸಿಇಒ ತರುಣ್ ಗಾರ್ಗ್ ಮಾತನಾಡಿದ್ದಾರೆ.

ಇದನ್ನೂ ಓದಿ : ಕೇವಲ 5,547ರೂ.ಗೆ ಮನೆಗೆ ಕೊಂಡೊಯ್ಯಬಹುದು ಹೀರೋ ಕರಿಜ್ಮಾ XMR 210
i20 ಬ್ರ್ಯಾಂಡ್ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ತಲೆ ಮಾರುಗಳಾದ್ಯಂತ ಸತತವಾಗಿ ಹೊಸ ದಾಖಲೆಯನ್ನು ಬರೆಯುತ್ತಿದೆ. ಈಗಾಗಲೇ 1.3 ಮಿಲಿಯನ್‌ಗಿಂತಲೂ ಅಧಿಕ ಗ್ರಾಹಕರನ್ನು ಹೊಂದಿದೆ. ಹೊಸ ಹುಂಡೈ i20 ಕಾರು ಗ್ರಾಹಕರ ಮನಗೆಲ್ಲಲಿದೆ. ಅದ್ರಲ್ಲೂ ನಗರ ಪ್ರದೇಶದಲ್ಲಿನ ಯುವಕರಿಗೆ ಹೊಸ ಹ್ಯುಂಡೈ i20 ಹೊಸ ಅನುಭವವನ್ನೇ ನೀಡಲಿದೆ ಎಂದಿದ್ದಾರೆ.

ನೀವು ಈ ಹಿಂದೆ ನೋಡಿರುವ ಹ್ಯುಂಡೈ i20 ಕಾರಿಗೆ ಹೋಲಿಕೆ ಮಾಡಿದ್ರೆ ಹೊಸ ಕಾರನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ವಿನ್ಯಾಸ ಅದ್ಬುತವಾಗಿದೆ. ಆದರೆ ಕ್ಯಾಬಿನ್ ವಿನ್ಯಾಸವನ್ನು ಬದಲಾಯಿಸಲಾಗಿಲ್ಲ. ಕ್ಯಾಬಿಲ್ ಬೂದು ಹಾಗೂ ಕಪ್ಪು ಬಣ್ಣಗಳನ್ನು ಒಳಗೊಂಡಿದೆ.ಬೋಸ್ ಸ್ಪೀಕರ್ ಸಿಸ್ಟಮ್, ಆಂಬಿಯೆಂಟ್ ಲೈಟ್‌ಗಳು, ಆಂಬಿಯೆಂಟ್ ಸೌಂಡ್‌ಗಳು, ಸನ್‌ರೂಫ್ ಮತ್ತು ಲೆಥೆರೆಟ್ ಸೀಟ್‌ಗಳು, ಡೋರ್ ಆರ್ಮ್‌ರೆಸ್ಟ್‌ಗಳು ಮತ್ತು ಫ್ಲಾಟ್-ಬಾಟಮ್ ಸ್ಟೀರಿಂಗ್‌ನಂತಹ ಐಶಾರಾಮಿ ಸೌಕರ್ಯಗಳನ್ನು ನೀಡಲಾಗಿದೆ.

ಇನ್ನು ಕಾರಿನ ಒಳಭಾಗದ ಇಂಟಿರಿಯರ್ ಕೂಡ ಸಖತ್ ಇಷ್ಟವಾಗುತ್ತೆ. ಗ್ರಾಹಕರ ಅನುಕೂಲಕ್ಕಾಗಿ ಈ ಹಿಂದಿನ ಹುಂಡೈ ಕಾರುಗಳಲ್ಲಿರುವ ಬೂದು ಹಾಗೂ ಕಪ್ಪುಬಣ್ಣದ ಒಳ ವಿನ್ಯಾಸವನ್ನು ನೀಡಲಾಗಿದ್ದರೂ ಕೂಡ ಏಳು ಸ್ಪೀಕರ್ ಅಳವಡಿಸಲಾಗಿದೆ. ಅರೆ ಲೆಥರ್ ಸೀಟುಗಳು, ಫ್ಲಾಟ್ – ಬಾಟಮ್ ಸ್ಟೀರಿಂಗ್ ವೀಲ್, ಡೋರ್ ಆರ್ಮ್‌ರೆಸ್ಟ್‌ಗಳು ಅಳವಡಿಸಲಾಗಿದೆ.

ಇದನ್ನೂ ಓದಿ : Honda Elevate : ಕೇವಲ ₹18,653ಕ್ಕೆ ಮನೆಗೆ ತನ್ನಿ ಹೊಚ್ಚ ಹೊಸ ಐಷಾರಾಮಿ ಹೋಂಡಾ ಎಲಿವೇಟ್ ಎಸ್‌ಯುವಿ ಕಾರು
ಇನ್ನು ಪ್ರಯಾಣಿಕರ ಸುರಕ್ಷತೆಯ ವಿಚಾರಕ್ಕೆ ಬಂದ್ರೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಪ್ರಮುಖವಾಗಿ ಕಾರಿನಲ್ಲಿ ಆರು ಏರ್‌ಬ್ಯಾಗ್ ಅಳವಡಿಸಲಾಗಿದೆ. EBD, ESC, HAC, VSM ಜೊತೆಗೆ ABS ಒಳಗೊಂಡಿದ್ದು, ಎಲ್ಲಾ ಸೀಟುಗಳಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಇದ್ದಾಗ, ಪ್ರಯಾಣಿಕರನ್ನು ಎಚ್ಚರಿಸುವ ಕಾರ್ಯವನ್ನು ಮಾಡಲಾಗಿದೆ. ಇನ್ನು ಕಾರನ್ನು ರಿವರ್ಸ್ ತೆಗೆಯುವ ಅನುಕೂಲವಾಗಲಿ ಅಂತಾ, ಕಾರಿನಲ್ಲಿ ಹಿಂಭಾಗದ ಪಾರ್ಕಿಂಗ್ ಕ್ಯಾಮರಾ ಜೊತೆಗೆ TPMS, ಹೆಡ್‌ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ಹ್ಯುಂಡೈ i20 ಅನ್ನು ಶಕ್ತಿಯುತಗೊಳಿಸುವುದು ಪರಿಚಿತ 1.2-ಲೀಟರ್ ನಾಲ್ಕು-ಸಿಲಿಂಡರ್ NA ಪೆಟ್ರೋಲ್ ಮೋಟಾರು 5-ಸ್ಪೀಡ್ ಮ್ಯಾನುವಲ್ ಅಥವಾ IVT ಗೆ ಜೋಡಿಸಲಾಗಿದೆ. ಈ ಮೋಟಾರ್ 83bhp ಮತ್ತು 114.7Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಸಂಯೋಜಿತ ಸ್ಟಾರ್ಟರ್ ಜನರೇಟರ್‌ನೊಂದಿಗೆ ಬರುತ್ತದೆ. ಹೊಸ i20 ನೊಂದಿಗೆ ನೀಡಲಾಗುತ್ತಿರುವ ಏಕೈಕ ಎಂಜಿನ್ ಇದಾಗಿದ್ದು, ಹಿಂದಿನಂತೆ ಯಾವುದೇ ಟರ್ಬೊ-ಪೆಟ್ರೋಲ್ ಅನ್ನು ನೀಡಲಾಗಿಲ್ಲ.

ಹುಂಡೈ i20 2023 ಬೆಲೆ (ಎಕ್ಸ್ ಶೋ ರೂಂ)
ಹುಂಡೈ i20 MT ಯುಗ – 6.99 ಲಕ್ಷ ರೂ
ಹುಂಡೈ i20 MT ಮ್ಯಾಗ್ನಾ – 7.69 ಲಕ್ಷ ರೂ
ಹುಂಡೈ ಐ20 ಎಂಟಿ ಸ್ಪೋರ್ಟ್ಜ್ – 8.32 ಲಕ್ಷ ರೂ
ಹುಂಡೈ i20 MT ಅಸ್ತಾ – 9.28 ಲಕ್ಷ ರೂ
ಹ್ಯುಂಡೈ i20 MT Asta(O) – 9.97 ಲಕ್ಷ ರೂ
ಹುಂಡೈ i20 IVT ಸ್ಪೋರ್ಟ್ಸ್ – 9.37 ಲಕ್ಷ ರೂ
ಹ್ಯುಂಡೈ i20 IVT Asta(O) – 11.01 ಲಕ್ಷ ರೂ
ಹುಂಡೈ ಕಂಪೆನಿ ಪರಿಚಯಿಸಿರುವ ಹುಂಡೈ i20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡುವ ಸೂಚನೆ ನೀಡುತ್ತಿದೆ. ಈಗಾಗಲೇ ಕಾರು ಗ್ರಾಹಕರ ಮನಗೆದ್ದಿದೆ. ಮಾರುತಿ ಸುಜುಕಿ ಬಲೆನೋ, ಟಾಟಾ ಆಲ್ಟ್ರೋಜ್, ಟೊಯೊಟಾ ಗ್ಲಾನ್ಜಾ ಕಾರುಗಳಿಗೆ ತೀವ್ರ ಪೈಪೋಟಿಯನ್ನು ಒಡ್ಡಲಿದೆ.
Hyundai i20 2023 hatchback car launched, prices start at just Rs 6.99 lakh. Hyundai Motor India Limited (HMIL) Launched Hundai I20 Hatchback. Indian Market Price Start Just at Rs. 6.99 Lakh Ex Showroom