ಕೇವಲ 5,547ರೂ.ಗೆ ಮನೆಗೆ ಕೊಂಡೊಯ್ಯಬಹುದು ಹೀರೋ ಕರಿಜ್ಮಾ XMR 210

ಬೈಕ್‌ ಪ್ರಿಯರಿಗೆ ಹೊಸ ಕ್ರೇಜ್‌ ಹುಟ್ಟು ಹಾಕಿದ್ದ ಕರಿಜ್ಮಾ ಇದೀಗ ಹೊಸ ವಿನ್ಯಾಸ, ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. ಲುಕ್‌ ಈಗಾಗಲೇ ಬೈಕ್‌ ಪ್ರಿಯರ ಮನಗೆದ್ದಿದೆ. ಹೊಸ ಕರಿಜ್ಮಾ (Hero Karizma XMR 210 ) ಬೈಕ್‌ನ್ನು ಕೇವಲ 5,547ರೂ.ಗೆ ಮನೆಗೆ ಕೊಂಡೊಯ್ಯಬಹುದು. ಈ ಬೈಕ್‌ನ ವಿಶೇಷತೆ ಏನು ? ಬೆಲೆ ಎಷ್ಟು ಅನ್ನುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇಶದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಕಾ ಸಂಸ್ಥೆಯಾಗಿರುವ ಹೀರೋ ಕಾರ್ಪ್‌ (Hero MotoCorp) ಬಹು ಹೀರೋ ಕರಿಜ್ಮಾ (Hero Karizma XMR 210 2023) ಬಿಡುಗಡೆ ಮಾಡಿದೆ.  ಒಂದು ಕಾಲದಲ್ಲಿ ಬೈಕ್‌ ಪ್ರಿಯರಿಗೆ ಹೊಸ ಕ್ರೇಜ್‌ ಹುಟ್ಟು ಹಾಕಿದ್ದ ಕರಿಜ್ಮಾ ಇದೀಗ ಹೊಸ ವಿನ್ಯಾಸ, ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. ಲುಕ್‌ ಈಗಾಗಲೇ ಬೈಕ್‌ ಪ್ರಿಯರ ಮನಗೆದ್ದಿದೆ. ಹೊಸ ಕರಿಜ್ಮಾ ಬೈಕ್‌ನ್ನು ಕೇವಲ 5,547ರೂ.ಗೆ ಮನೆಗೆ ಕೊಂಡೊಯ್ಯಬಹುದು. ಈ ಬೈಕ್‌ನ ವಿಶೇಷತೆ ಏನು ? ಬೆಲೆ ಎಷ್ಟು ಅನ್ನುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Hero Karizma XMR 210 can be taken home for just Rs 5547 Stock Limited
Image Credit Hero Motor corp

ಹೀರೋ ಕರಿಜ್ಮಾ ಎಕ್ಸ್‌ಎಂಆರ್‌ 210 ( Hero Karizma XMR 210 ) ಭಾರತೀಯ ಮಾರುಕಟ್ಟೆಗೆ ಈಗಾಗಲೇ ಬಿಡುಗಡೆಯಾಗಿದೆ. ಅಲ್ಲದೇ ಕಂಪೆನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಬುಕ್ಕಿಂಗ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀರೋ ಕರಿಜ್ಮಾ XMR ಮಾರುಕಟ್ಟೆಯ ಬೆಲೆ 1,72,493ರೂ. ಆದರೆ 1900 ರೂಪಾಯಿ ಡೌನ್‌ಪೇಮೆಂಟ್‌ ಪಾವತಿಸಿ, ಪ್ರತೀ ತಿಂಗಳು 5,547 ರೂಪಾಯಿ ಇಎಂಐನಲ್ಲಿ ಬೈಕ್‌ನ್ನು ಮನೆಗೆ ಕೊಂಡೊಯ್ಯಬಹುದು. ಒಟ್ಟು 36 ತಿಂಗಳ ಇಎಂಐ ಪಾವತಿ ಮಾಡಿದ್ರೆ ಶೇ. 9.7ರ ಬಡ್ಡಿದರವನ್ನು ವಿಧಿಸಲಾಗುತ್ತದೆ. 12 ತಿಂಗಳ ಆರಂಭಿಕ ಇಎಂಐನಿಂದ ಹಿಡಿದು, 60 ತಿಂಗಳ ಇಎಂಐ ಅವಕಾಶ ಪಡೆಯಲು ಅವಕಾಶವಿದೆ. ಒಂದೊಮ್ಮೆ 60 ತಿಂಗಳ ಇಎಂಐ ಆಫ್ಶನ್‌ ಪಡೆದುಕೊಂಡ್ರೆ ತಿಂಗಳಿಗೆ 3643 ರೂಪಾಯಿ ಇಎಂಐ ಪಾವತಿಸಲು ಅವಕಾಶವಿದೆ.

Hero Karizma XMR 210 can be taken home for just Rs 5547 Stock Limited
Image Credit Hero Motor corp

ಹೊಸ ಕರಿಜ್ಮಾ XMR 2023 ವೈಶಿಷ್ಯತೆಗಳೇನು ?

ಹೀರೋ ಕಂಪೆನಿಯ ಬಹು ನಿರೀಕ್ಷಿತ ಹೊಸ ಕರಿಜ್ಮಾ XMR 2023 ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. 210cc, 4V, DOHC, ಲಿಕ್ವಿಡ್-ಕೂಲ್ಡ್ ಎಂಜಿನ್‌ ಸಾಮರ್ಥ್ಯವನ್ನು ಒಳಗೊಂಡಿದೆ. 25.5PS ಮತ್ತು 20.4Nm ನಲ್ಲಿ ಶ್ರೇಣಿಯನ್ನು ನೀಡಲಾಗಿದ್ದು, 6-ಸ್ಪೀಡ್ ಗೇರ್‌ ಸೌಲಭ್ಯವನ್ನು ಒದಗಿಸಲಾಗಿದೆ. ಇದರಿಂದಾಗಿ ಬೈಕ್‌ ರೈಡಿಂಗ್‌ಗೆ ಹೆಚ್ಚು ಖುಷಿಯನ್ನು ನೀಡುತ್ತದೆ. ಇದನ್ನೂ ಓದಿ : Tata Punch ICNG : 7.10 ರೂ ಲಕ್ಷಕ್ಕೆ ಮಾರುಕಟ್ಟೆಗೆ ಬಂತು ಟಾಟಾ ಪಂಚ್ CNG : ಎಲೆಕ್ಟ್ರಿಕ್‌ ಸನ್‌ರೂಫ್‌ ಜೊತೆಯಲ್ಲಿದೆ ಹಲವು ವೈಶಿಷ್ಟ್ಯ

Hero Karizma XMR 210 can be taken home for just Rs 5547 Stock Limited
Image Credit Hero Motor Corp

Hero Karizma XMR 210 2023 ಡೈನಾಮಿಕ್ ಏರೋ ಲೇಯರ್ಡ್ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಮತ್ತು ಸೆಗ್ಮೆಂಟ್-ಜೊತೆಗೆ ಹೊಂದಾಣಿಕೆಯ ವಿಂಡ್ ಶೀಲ್ಡ್ ಅಳವಡಿಸಲಾಗಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಂಪೂರ್ಣ ಡಿಜಿಟಲ್ ಎಲ್ಸಿಡಿ ಹೊಂದಿದ್ದು, ಮೋಟಾರ್‌ಸೈಕಲ್ ಬ್ಲೂಟೂತ್ ಸಂಪರ್ಕವನ್ನು ಸಹ ಹೊಂದಿದೆ. ಅಲ್ಲದೇ ನ್ಯಾವಿಗೇಷನ್ ಸಿಸ್ಟಮ್ ಅಳವಡಿಸಲಾಗಿದ್ದು, ಸವಾರಿಗೆ ಹೆಚ್ಚು ಅನುಕೂಲಕರವಾಗಿದೆ.

Hero Karizma XMR 210 can be taken home for just Rs 5547 Stock Limited
Image Credit Hero Motor Corp

ಕರಿಜ್ಮಾ XMR 2023 ರ ಮತ್ತೊಂದು ವಿಶೇಷವೆಂದರೆ ಹಗುರವಾದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್, ಆರು-ಹಂತದ ಮೊನೊಶಾಕ್ ಮತ್ತು ಡ್ಯುಯಲ್-ಚಾನೆಲ್ ABS ಒಳಗೊಂಡಿದೆ. ಸದ್ಯ ಮೂರು ಬಣ್ಣಗಳಲ್ಲಿ ಹೊಸ ಹೀರೋ ಕರಿಜ್ಮಾ XMR ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಐಕಾನಿಕ್ ಹಳದಿ, ಟರ್ಬೊ ರೆಡ್ ಮತ್ತು ಮ್ಯಾಟ್ ಫ್ಯಾಂಟಮ್ ಬ್ಲಾಕ್‌ ಒಳಗೊಂಡಿದೆ. ಇದನ್ನೂ ಓದಿ : Hyundai: ಕ್ರೆಟಾ ಮತ್ತು ಅಲ್ಕಜಾರ್‌ ಕಾರುಗಳ ಎಡ್ವೆಂಚರ್‌ ಸ್ಪೆಷಲ್‌ ಆವೃತ್ತಿಯನ್ನು ಬಿಡುಗಡೆ ಮಾಡಿದ ಹುಂಡೈ; ಹೊಸ ಎಸ್‌ಯುವಿಗಳ ವೈಶಿಷ್ಟ್ಯ ಹೀಗಿವೆ

 

Comments are closed.