ಎಷ್ಟೇ ಐಷಾರಾಮಿ ಕಾರುಗಳು ಬಂದರೂ ರಸ್ತೆಯಲ್ಲಿ ಟ್ರಾಫಿಕ್ ಕಿರಿ ಕಿರಿ ತಪ್ಪಿದ್ದಲ್ಲ. ಹೀಗಾಗಿ ಮನುಷ್ಯನಿಗೆ ರಸ್ತೆಗಿಂತ ಹಕ್ಕಿಯಂತೆ ಹಾರುವ ಆಕಾಶದ ಮೇಲೆ ಕಣ್ಣಿದೆ. ಹೀಗಾಗಿ ವಿಶ್ವದ ಅಟೋಮೊಬೈಲ್ ಕ್ಷೇತ್ರ ಹಾರುವ ಕಾರುಗಳ ಉತ್ಪಾದನೆಯ ಚಿಂತನೆ ಆರಂಭಿಸಿದೆ. ಈ ಮಧ್ಯೆ ಭಾರತ ಹಾರುವ ಕಾರುಗಳ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಿದ್ಧವಾಗಿದ್ದು, ಅ.5 ರಂದು ಪ್ರಯೋಗಾತ್ಮಕ ಹಾರಾಟಕ್ಕೂ ವೇದಿಕೆ ಸಿದ್ಧವಾಗಿದೆ.

ಜಗತ್ತಿನ ಎಲ್ಲ ರಾಷ್ಟ್ರಗಳು ಹಾರುವ ಕಾರಿನ ಅಭಿವೃದ್ಧಿಯತ್ತ ಚಿಂತನೆ ನಡೆಸುತ್ತಿರುವಾಗಲೇ ಭಾರತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಚೈನೈನ ವಿನತಾ ಏರೋಮೊಬೈಲಿಟಿ ಎಂಬ ಸಂಸ್ಥೆ ಹಾರುವ ಕಾರೊಂದನ್ನು ಅಭಿವೃದ್ಧಿ ಪಡಿಸಿದೆ. ಅಕ್ಟೋಬರ್ 5 ರಂದು ಕಾರುಗಳ ಪ್ರದರ್ಶನ ಲಂಡನ್ ನಲ್ಲಿ ನಡೆಯಲಿದೆ.

ಲಂಡನ್ ನ ಹೆಲಿಟೆಕ್ ಎಕ್ಸಿಬಿಷನ್ ಕೇಂದ್ರದಲ್ಲಿ ಈ ಮಾದರಿಯ ಕಾರುಗಳ ಪ್ರದರ್ಶನ ನಡೆಯಲಿದ್ದು, ವಿಶ್ವದ ಎಲ್ಲ ರಾಷ್ಟ್ರಗಳ ಗಮನ ಸೆಳೆಯುವ ಸಾಧ್ಯತೆ ಇದೆ. ಹೈಬ್ರಿಡ್ ಕಾರುಗಳು ನಗರ ಪ್ರದೇಶಕ್ಕಾಗಿ ರೂಪುಗೊಂಡಿದ್ದು, ಪ್ರಯಾಣಿಕರ ಸಾಗಣೆ ಹಾಗೂ ಸರಕು ಸಾಗಾಣಿಕೆ ಹೀಗೆ ಎರಡು ಮಾದರಿಯ ಕಾರು ಸಿದ್ಧಪಡಿಸಲಾಗಿದೆ.
ಪ್ರಯಾಣಿಕರ ಕಾರಿನಲ್ಲಿ 2 ಸೀಟುಗಳು ಹಾಗೂ ಕಾರ್ಗೋ ವಿಮಾನದಲ್ಲಿ 200 ಕೆಜಿ ಸಾಮರ್ಥ್ಯದ ಕಾರನ್ನು ಪ್ರದರ್ಶಿಸಲಾಗುತ್ತಿದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ ಈ ಕಾರುಗಳಿಗೆ ಜೈವಿಕ ಇಂಧನವನ್ನು ಬಳಸಲಾಗುತ್ತಿದೆ.
ಸಸ್ಯ ಮತ್ತು ಪ್ರಾಣಿಮೂಲದ ಸೂಕ್ಷ್ಮಾಣುಜೀವಿಯಿಂದ ಉತ್ಪಾದನೆ ಮಾಡಿದ ಶುದ್ಧ ಇಂಧನವನ್ನು ಇದಕ್ಕಾಗಿ ಬಳಸಲಾಗುತ್ತದೆ. ಫ್ಲೈಯಿಂಗ್ ಕಾರುಗಳು 1100 ಕೆಜಿ ತೂಕ ಹೊಂದಿದ್ದು ಟೇಕಾಫ್ ತೆಗೆದುಕೊಳ್ಳುವ ಸಮಯಕ್ಕೆ 1300 ಕೆಜಿ ತೂಕವನ್ನು ಹೊರಬಲ್ಲದು. 100 ಕಿಲೋಮೀಟರ್ ರೇಂಜ್ ಗಂಟೆಗೆ ಗರಿಷ್ಠ 120 ಕಿಲೋಮೀಟರ್ ವೇಗದಲ್ಲಿ 3 ಸಾವಿರ ಅಡಿಗಳ ಎತ್ತರದಲ್ಲಿ ಒಂದು ಗಂಟೆಗಳ ಕಾಲ ಹಾರಾಡುವ ಸಾಮರ್ಥ್ಯ ಹೊಂದಿದೆ.
ಈ ಕಾರುಗಳು ಕಾಕ್ ಪಿಟ್ ಹಾಗೂ ಏರ ಬ್ಯಾಗ್ ಸೌಲಭ್ಯವನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಬೇರೆ ಬೇರೆ ಮೋಟಾರ್ ಪ್ರೊಪೆಲ್ಲರ್ ಗಳನ್ನು ಹೊಂದಿದ್ದು, ಏನಾದ್ರು ತಾಂತ್ರಿಕ ಸಮಸ್ಯೆಯಾದರೇ ಸುರಕ್ಷಿತವಾಗಿ ನೆಲಕ್ಕಿಳಿಸುವ ಸಾಮರ್ಥ್ಯ ಹೊಂದಿವೆ.
(Chennai startup unveils ‘Asia’s first’ concept flying car)