ವಾರದೊಳಗೆ ರಾಜ್ಯದಲ್ಲಿ ಮಹತ್ವದ ಬದಲಾವಣೆ: ಮತ್ತೊಮ್ಮೆ ಬಾಂಬ್ ಸಿಡಿಸಿದ ಯತ್ನಾಳ

ಬೆಳಗಾವಿ: ಸದಾಕಾಲ ಬಿಜೆಪಿ ವಿರುದ್ಧವೇ ಮಾತನಾಡುವ ಕಮಲ ಪಾಳಯದ ಹಿರಿಯ ಶಾಸಕ ಒಂದಿಷ್ಟು ದಿನಗಳ ಕಾಲ ಮೌನವಾಗಿದ್ದರು. ಮುಖ್ಯಮಂತ್ರಿ ಬದಲಾವಣೆಯಾಗಿ ತಿಂಗಳುಗಳು ಕಳೆದ ಬಳಿಕ ಮತ್ತೊಮ್ಮೆ ಮೌನ ಮುರಿದಿರುವ ಯತ್ನಾಳ ಮತ್ತೆ ರಾಜ್ಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ, ಸಿಎಂ ಬಸವರಾಜ್ ಬೊಮ್ಮಾಯಿಯವರು ಯಡಿಯೂರಪ್ಪನವರ ನೆರಳಲ್ಲ. ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇದೆ. ಇನ್ನು ಒಂದೇ ವಾರದಲ್ಲಿ ರಾಜ್ಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ.

ರಾಜ್ಯದಲ್ಲಿ ನಡೆಯುವ ಬದಲಾವಣೆ ಸಿಎಂ ಬೊಮ್ಮಾಯಿ ಯಡಿಯೂರಪ್ಪನವರ ನೆರಳಿನಲ್ಲಿ ಇಲ್ಲ. ಅವರೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲಿದೆ ಎಂದು ಒಗಟಾಗಿ ಹೇಳಿದ್ದಾರೆ.

ಅಲ್ಲದೇ  ಸಿಎಂ ಸ್ಥಾನದಿಂದ ಇಳಿದ ಮೇಲೂ ಬಿಎಸ್ವೈ ವಿರುದ್ಧ ಯತ್ನಾಳ ಕೋಪ ಕಡಿಮೆಯಾಗಿಲ್ಲ. ಹೀಗಾಗಿ ಲಿಂಗಾಯತ ಪಂಚಮಶಾಲಿ ಸಮಾಜಕ್ಕೆ ಪ್ರವರ್ಗ 2 ಎ ಮೀಸಲಾತಿ ನೀಡಲು ಯಡಿಯೂರಪ್ಪ ಮನಸ್ಸು ಮಾಡಲಿಲ್ಲ. ಹೀಗಾಗಿ ಅವರಿಗೆ ಆ ಸಮಾಜದ ಶಾಪ ತಟ್ಟಿ ಹುದ್ದೆ ಕಳೆದುಕೊಂಡರು ಎಂದು ಟೀಕಿಸಿದ್ದಾರೆ.

ಆದರೆ ಯತ್ನಾಳ ಹೇಳಿದ ಮಹತ್ತರ ಬದಲಾವಣೆ ಯಾವುದು ಎಂಬ ಕುತೂಹಲ ಮೂಡಿದ್ದು, ಬಹುತೇಕ ಲಿಂಗಾಯತ ಪಂಚಮಶಾಲಿ ಸಮಾಜಕ್ಕೆ  ಪ್ರವರ್ಗ2ಎ ಮೀಸಲಾತಿ ಘೋಷಿಸಬಹುದು ಎಂದು ನೀರಿಕ್ಷಿಸಲಾಗುತ್ತಿದೆ.

(bjp mla basangwodapatil comment on bsy)

Comments are closed.