ಸ್ವದೇಶಿ ವಾಹನ ತಯಾರಿಕ ಕಂಪನಿ ಮಹಿಂದ್ರ ಥಾರ್ 4X2 RWD ಅನ್ನು ಅಧಿಕೃತವಾಗಿ ಭಾರತದಲ್ಲಿ ಸೋಮವಾರ ಬಿಡುಗಡೆ ಮಾಡಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ 9.99 (ಎಕ್ಸ್ ಶೋ ರೂಂ) ಲಕ್ಷಕ್ಕೆ ಇದನ್ನು (Mahindra Thar 4X2 RWD) ಪರಿಚಯಿಸಿದೆ. ಇದರ ಟಾಪ್ ಎಂಡ್ ಮಾದರಿಯ ಬೆಲೆ 13.49 ಲಕ್ಷವಾಗಿದೆ (ಎಕ್ಸ್ ಶೋ ರೂಂ). ಈಗ ಪರಿಚಯಿಸಿರುವ ಬೆಲೆಯು ಮೊದಲ 10,000 ಬುಕಿಂಗ್‌ಗಳಿಗೆ ಮಾತ್ರ ಸೀಮಿತವಾಗಿದೆ .
ಮಹಿಂದ್ರ ಥಾರ್ RWD ಯು 117 BHP ಮತ್ತು 300 Nm ಟಾರ್ಕ್ ಉತ್ಪಾದಿಸುವ D117 CRDe ಎಂಜಿನ್‌ನೊಂದಿಗೆ ಬರಲಿದೆ. ಇದರಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ನೀಡಲಾಗುತ್ತದೆ. 150 BHP ಮತ್ತು 320 Nm ಟಾರ್ಕ್ ಅನ್ನು ಉತ್ಪಾದಿಸುವ mStallion 150 TGDi ಎಂಜಿನ್ ಹೊಂದಿರುವ ಪೆಟ್ರೋಲ್ ಮೋಟರ್ ಸಹ ಇದರಲ್ಲಿದೆ. ಮತ್ತು ಇದನ್ನು ಆಟೊಮೆಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಮಹೀಂದ್ರ ಥಾರ್ RWD ರೂಪಾಂತರಗಳು ಬ್ಲೇಜಿಂಗ್ ಬ್ರೋಂಜ್ ಮತ್ತು ಎವರೆಸ್ಟ್ ವೈಟ್ ಎಂಬ ಎರಡು ಹೊಸ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಮಹಿಂದ್ರ ಥಾರ್ 4X2 RWD ವೈಶಿಷ್ಟ್ಯಗಳು :
ಇದು ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯಿರುವ 7 ಇಂಚಿನ ಟಚ್‌ಸ್ಕ್ರೀನ್ ಇಂನ್ಫೋಟೆನ‌್ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಕ್ರೂಸರ್ ಕಂಟ್ರೋಲ್, ಹೆಲೊಜನ್ ಲೈಟ್, ಇಲೆಕ್ಟ್ರಿಕಲ್ ಕಂಟ್ರೋಲ್ಡ್ ಎಸಿ, ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಹಾರ್ಡ್ ಟಾಪ್ ರೂಫ್ ಪ್ಯಾನೆಲ್ ನೀಡಲಾಗಿದೆ. ಇನ್ನು ಸುರಕ್ಷತೆಯಲ್ಲಿ ಮಹಿಂದ್ರ ಥಾರ್ ಮುಂಭಾಗದಲ್ಲಿ ಡ್ಯಯಲ್ ಏರ್‌ಬ್ಯಾಗ್‌ಗಳನ್ನು, ಆಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ಅಳವಡಿಸಿದೆ.
ಮಹಿಂದ್ರ ಥಾರ್ 4X2 RWD ಯು ಸದ್ಯದಲ್ಲೇ ಬಿಡುಗಡೆಯಾಗಲಿರುವ ಮಾರುತಿ ಜಿಮ್ರಿ 5 ಡೋರ್ ಮತ್ತು ಫೋರ್ಸ್ ಗುರಖಾಗಳಿಗೆ ನೇರ ಪ್ರತಿಸ್ಪರ್ಧೆ ನೀಡಲಿದೆ.
ಇದನ್ನೂ ಓದಿ : SUVs launched in 2022 : ಈ ವರ್ಷವೂ ಬೇಡಿಕೆಯಲ್ಲಿ ಮುಂದುವರಿಯಲಿರುವ SUV ಗಳು
ಇದನ್ನೂ ಓದಿ : Wikipedia QR. Cod<strong>e</strong>: ಪ್ರವಾಸಿ ತಾಣಗಳ ಮಾಹಿತಿಗೆ ಇನ್ಮುಂದೆ ಕ್ಯೂ. ಆರ್.ಕೋಡ್: ಉಡುಪಿ ಡಿಸಿ ಕೂರ್ಮರಾವ್ ಎಂ
(Mahindra Thar 4X2 RWD launched in India. Know the price and specifications)