India Vs Sri Lanka ODI series : ನಾಳೆ ಏಕದಿನ ಪಂದ್ಯ; ಕೊಹ್ಲಿ, ರೋಹಿತ್, ರಾಹುಲ್ ಕಂಬ್ಯಾಕ್, ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI

ಗುವಾಹಟಿ: ಪ್ರವಾಸಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1ರಿಂದ ಕೈವಶ ಮಾಡಿಕೊಂಡಿರುವ ಭಾರತ ತಂಡ, ಮಂಗಳವಾರ (ಜನವರಿ 10) ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ (India Vs Sri Lanka ODI series) ಸಿಂಹಳೀಯರನ್ನು ಎದುರಿಸಲಿದೆ.ಸರಣಿಯ ಮೊದಲ ಪಂದ್ಯ ಮಂಗಳವಾರ ಅಸ್ಸಾಂನ ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ.

ಈ ಸರಣಿಯೊಂದಿಗೆ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಉಪನಾಯಕ ಕೆ.ಎಲ್ ರಾಹುಲ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಈ ಮೂವರೂ ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು.ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಕೂಡ ಲಂಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಭಾರತ ತಂಡಕ್ಕೆ ಮರಳಲಿದ್ದಾರೆ.

ನಾಯಕ ರೋಹಿತ್ ಶರ್ಮಾ (Rohit Sharma) ಜೊತೆ ಎಡಗೈ ಓಪನರ್ ಇಶಾನ್ ಕಿಶನ್ (Ishan Kishan) ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇಶಾನ್ ಕಿಶನ್ ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ವೇಗದ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದರು. ಇಶಾನ್ ಕಿಶನ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳಲಿರುವುದರಿಂದ ಮತ್ತೊಬ್ಬ ಯುವ ಬಲಗೈ ಓಪನರ್ ಶುಭಮನ್ ಗಿಲ್ ಬೆಂಚ್ ಕಾಯಿಸಲಿದ್ದಾರೆ.

3ನೇ ಕ್ರಮಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಆಡಲಿದ್ದು, 4ನೇ ಕ್ರಮಾಂಕದಲ್ಲಿ ಉತ್ತಮ ಫಾರ್ಮ್’ನಲ್ಲಿರುವ ಶ್ರೇಯಯ್ ಅಯ್ಯರ್ (Shreyas Iyer) ಕಾಣಿಸಿಕೊಳ್ಳಲಿದ್ದಾರೆ. ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿದ್ದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ (KL Rahul) 5ನೇ ಕ್ರಮಾಂಕದಲ್ಲಿ ಆಡಲಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. 6ನೇ ಕ್ರಮಾಂಕದಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ (Hardik pandya) ಆಡಲಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ XI (India Playing XI for 1st ODI vs Sri Lanka):
1.ರೋಹಿತ್ ಶರ್ಮಾ (ನಾಯಕ), 2.ಇಶಾನ್ ಕಿಶನ್, 3.ವಿರಾಟ್ ಕೊಹ್ಲಿ, 4.ಶ್ರೇಯಸ್ ಅಯ್ಯರ್, 5.ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), 6.ಹಾರ್ದಿಕ್ ಪಾಂಡ್ಯ, 7.ವಾಷಿಂಗ್ಟನ್ ಸುಂದರ್, 8.ಅಕ್ಷರ್ ಪಟೇಲ್, 9.ಮೊಹಮ್ಮದ್ ಶಮಿ, 10.ಜಸ್ಪ್ರೀತ್ ಬುಮ್ರಾ, 11.ಉಮ್ರಾನ್ ಮಲಿಕ್.

ಇದನ್ನೂ ಓದಿ : Suryakumar Yadav : ಸೂರ್ಯಕುಮಾರ್ ಯಾದವ್ “ತುಳುನಾಡಿನ ಅಳಿಯ”, ತುಂಬಾ ಮಂದಿಗೆ ಗೊತ್ತೇ ಇಲ್ಲದ ಗುಟ್ಟು ಬಿಚ್ಚಿಟ್ಟ ಕೆ.ಎಲ್ ರಾಹುಲ್

ಇದನ್ನೂ ಓದಿ : Rishabh Pant to get 21 CR salary : ಐಪಿಎಲ್ ಆಡದಿದ್ದರೂ ರಿಷಭ್ ಪಂತ್‌ಗೆ ಸಿಗಲಿದೆ 16 ಕೋಟಿ, ಬಿಸಿಸಿಐನಿಂದ + 5 ಕೋಟಿ

ಇದನ್ನೂ ಓದಿ : Dravid Suryakumar Yadav: “ಚಿಕ್ಕವನಿದ್ದಾಗ ಸೂರ್ಯ ನನ್ನ ಆಟ ನೋಡದಿದ್ದದ್ದೇ ಒಳ್ಳೇದಾಯ್ತು” ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಹೀಗಂದಿದ್ಯಾಕೆ ?

ಭಾರತ Vs ಶ್ರೀಲಂಕಾ ಮೊದಲ ಏಕದಿನ ಪಂದ್ಯ ((India Vs Sri Lanka 1st ODI)
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನ, ಬರ್ಸಪರ (ಗುವಾಹಟಿ, ಅಸ್ಲಾಂ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

India Vs Sri Lanka ODI series : ODI tomorrow; Kohli, Rohit, Rahul comeback, this will be the Team India playing XI

Comments are closed.