ಟಾಟಾ ಮೋಟಾರ್ಸ್ (Tata Motors) ಭಾರತದಲ್ಲಿ ಫೇಸ್‌ಲಿಫ್ಟೆ ನೆಕ್ಸಾನ್ ಕಾರನ್ನು (Tata Nexon facelift) ಬಿಡುಗಡೆ ಮಾಡಿದೆ. ಯಾರೂ ಊಹಿಸೋದಕ್ಕೆ ಸಾಧ್ಯವಿರದಷ್ಟು ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. 11 ಮಾಡೆಲ್ ಮತ್ತು ಆರು ಬಣ್ಣಗಳಲ್ಲಿ ಎಂಟ್ರಿ ಕೊಟ್ಟಿರುವ ಫೇಸ್ ಲಿಫ್ಟ್ ಕೇವಲ 8.09 ಲಕ್ಷ (ಎಕ್ಸ್ ಶೋ ರೂಂ) ಬೆಲೆಗೆ ಲಭ್ಯವಿದೆ.

ಇಂದು ಟಾಟಾ ನೆಕ್ಸಾನ್ (Tata Nexon) ಹಾಗೂ ನೆಕ್ಸಾನ್ ಇವಿ (Tata Nexon Ev) ಕಾರು ಬಿಡುಗಡೆಯಾಗಿದೆ. ಕಾರಿನ ಮೊದಲ ಲುಕ್ ನೋಡಿರುವ ಗ್ರಾಹಕರು ಸಖತ್ ಎಕ್ಸೈಟ್ ಆಗಿದ್ದಾರೆ. ಆರು ವಿಭಿನ್ನ ಬಣ್ಣಗಳಲ್ಲಿ ಬಿಡುಗಡೆ ಆಗಿರುವ ಕಾರನ್ನು ಕೇವಲ 21,000 ರೂಪಾಯಿ ನೀಡಿ ಬುಕ್ ಮಾಡಬಹುದಾಗಿದೆ.

ಟಾಟಾ ನೆಕ್ಸಾನ್ 2023 ಮಾಡಲ್ ಕಾರು ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಆಗಿದೆ. ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಔಟ್‌ಲುಕ್ ಅದ್ಬುತವಾಗಿದೆ. ಮುಂಭಾಗದಲ್ಲಿ ಹೊಸ ಗ್ರಿಲ್, ಬಂಪರ್, ಎಲ್-ಆಕಾರದ ಎಲ್ಇಡಿ, ಸ್ಪ್ಲಿಟ್ ಹೆಡ್ಲ್ಯಾಂಪ್ ಸೆಟಪ್ ಮತ್ತು ಏರ್ ಡ್ಯಾಮ್ ಅನ್ನು ಒಳಗೊಂಡಿದೆ.

ಕಪ್ಪು-ಹೊರಗಿನ ಬಿ-ಪಿಲ್ಲರ್ ಮತ್ತು ಹೊಸ ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಿದೆ. ಹಿಂದಿನ ಪ್ರೊಫೈಲ್ ನಲ್ಲಿ ಬಂಪರ್ ಲುಕ್ ಬದಲಾಯಿಸಲಾಗಿದೆ. ವೈ- ಆಕಾರದ ಎಲ್ಇಡಿ ಲೈಟ್‌ಗಳು, ಎಲ್ಇಡಿ ಲೈಟ್ ಬಾರ್ ಮತ್ತು ರಿವರ್ಸ್ ಲೈಟ್ ಕಾರಿನ ಅಂದವನ್ನು ಹೆಚ್ಚಿಸಿದೆ.

ಇದನ್ನೂ ಓದಿ : Honda Elevate : ಕೇವಲ ₹18,653ಕ್ಕೆ ಮನೆಗೆ ತನ್ನಿ ಹೊಚ್ಚ ಹೊಸ ಐಷಾರಾಮಿ ಹೋಂಡಾ ಎಲಿವೇಟ್ ಎಸ್‌ಯುವಿ ಕಾರು
ನೆಕ್ಸಾನ್ ಫೇಸ್ ಲಿಫ್ಟ್ ಕಾರಿನ ಒಳಭಾಗವನ್ನು ನೋಡಿದ್ರೆ. ಒಳಭಾಗವು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಎಲೆಕ್ಟ್ರಿಕ್ ಸನ್‌ರೂಫ್, ಹೊಸ ಎಸಿ ಪ್ಯಾನೆಲ್ ಮತ್ತು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಒಳಗೊಂಡಿದೆ.

ಇನ್ನು ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ 118bhp ಮತ್ತು 170Nm ಟಾರ್ಕ್ ಅನ್ನು ಉತ್ಪಾದಿಸುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಇಂಜಿನ್ ಒಳಗೊಂಡಿದೆ. ಮ್ಯಾನುವೆಲ್ ಹಾಗೂ ಆಟೋ ಮ್ಯಾಟಿಕ್ ಗೇರ್ ಮಾದರಿಯಲ್ಲಿ ಒಳಗೊಂಡಿದೆ. ಇನ್ನು 113bhp ಮತ್ತು 260Nm ಟಾರ್ಕ್ ಅನ್ನು ಉತ್ಪಾದಿಸುವ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಕಾರು ಮಾರು ಬ್ರೇಝಾ, ಹುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಮತ್ತು ಮಹೀಂದ್ರಾ ಬೊಲೆರೊ ನಿಯೋಗೆ ಪ್ರಬಲ ಸ್ಪರ್ಧೆಯನ್ನು ತಂದೊಡ್ಡಲಿದೆ.
ಇದನ್ನೂ ಓದಿ : ಕೇವಲ 6.99 ಲಕ್ಷ ರೂ.ಗೆ ಬಿಡುಗಡೆಯಾಯ್ತು ಹ್ಯುಂಡೈ I20 ಕಾರು : ಫೀಚರ್ಸ್ ಮಾತ್ರ ಅತ್ಯದ್ಬುತ
ಹೊಸ ಟಾಟಾ ನೆಕ್ಸಾನ್ ( (Tata Nexon Price) ) ಬೆಲೆಗಳು (ಎಕ್ಸ್-ಶೋರೂಮ್ )

ನೆಕ್ಸಾನ್ ಫೇಸ್‌ಲಿಫ್ಟ್ ಸ್ಮಾರ್ಟ್ ಪೆಟ್ರೋಲ್ ಎಂಟಿ ( Nexon facelift Smart Petrol MT) : ರೂ 8.10 ಲಕ್ಷ
ನೆಕ್ಸಾನ್ ಫೇಸ್‌ಲಿಫ್ಟ್ ಸ್ಮಾರ್ಟ್ ಪೆಟ್ರೋಲ್ ಎಂಟಿ ( Nexon facelift Smart+ Petrol MT) : ರೂ 9.10 ಲಕ್ಷ
ನೆಕ್ಸಾನ್ ಫೇಸ್‌ಲಿಫ್ಟ್ ಪ್ಯೂರ್ ಪೆಟ್ರೋಲ್ ಎಂಟಿ ( Nexon facelift Pure Petrol MT) : ರೂ 9.70 ಲಕ್ಷ
ನೆಕ್ಸಾನ್ ಫೇಸ್‌ಲಿಫ್ಟ್ ಕ್ರಿಯೇಟಿವ್ ಪೆಟ್ರೋಲ್ ಎಂಟಿ (Nexon facelift Creative Petrol MT) : 11 ಲಕ್ಷ ರೂ
ನೆಕ್ಸಾನ್ ಫೇಸ್‌ಲಿಫ್ಟ್ ಕ್ರಿಯೇಟಿವ್+ ಪೆಟ್ರೋಲ್ ಎಂಟಿ (Nexon facelift Creative+ Petrol MT) : ರೂ 11.70 ಲಕ್ಷ

ನೆಕ್ಸಾನ್ ಫೇಸ್‌ಲಿಫ್ಟ್ ಫಿಯರ್‌ಲೆಸ್ ಪೆಟ್ರೋಲ್ ಎಂಟಿ (Nexon facelift Fearless Petrol MT) : 12.50 ಲಕ್ಷ ರೂ
ನೆಕ್ಸಾನ್ ಫೇಸ್‌ಲಿಫ್ಟ್ ಫಿಯರ್‌ಲೆಸ್+ ಪೆಟ್ರೋಲ್ ಎಂಟಿ ( Nexon facelift Fearless+ Petrol MT ) : 13 ಲಕ್ಷ ರೂ
ನೆಕ್ಸಾನ್ ಫೇಸ್‌ಲಿಫ್ಟ್ ಕ್ರಿಯೇಟಿವ್ ಪೆಟ್ರೋಲ್ ಎಎಂಟಿ (Nexon facelift Creative Petrol AMT ) : 11.70 ಲಕ್ಷ ರೂ
ನೆಕ್ಸಾನ್ ಫೇಸ್‌ಲಿಫ್ಟ್ ಕ್ರಿಯೇಟಿವ್ ಪೆಟ್ರೋಲ್ ಡಿಸಿಎ (Nexon facelift Creative Petrol DCA) : 12.20 ಲಕ್ಷ ರೂ
ನೆಕ್ಸಾನ್ ಫೇಸ್‌ಲಿಫ್ಟ್ ಸ್ಮಾರ್ಟ್ ಡೀಸೆಲ್ MT (Nexon facelift Smart Diesel MT) : ರೂ. 11 ಲಕ್ಷ
ನೆಕ್ಸಾನ್ ಫೇಸ್‌ಲಿಫ್ಟ್ ಕ್ರಿಯೇಟಿವ್ ಡೀಸೆಲ್ AMT (Nexon facelift Creative Diesel AMT) : ರೂ. 13 ಲಕ್ಷ
Tata Nexon facelift launched for just 8.10 lakhs