ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ : ಸರಕಾರ ಈ ಯೋಜನೆಗೆ, ಸೆಪ್ಟೆಂಬರ್ 26ಕ್ಕೆ ಮೊದಲು ಅರ್ಜಿ ಸಲ್ಲಿಸಿ

ಕರ್ನಾಟಕ ಕಾರ್ಮಿಕ ಇಲಾಖೆಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಲ್ಲಿ 2023-24ನೇ ಸಾಲಿನಲ್ಲಿ ಓದುತ್ತಿರುವ 1ನೇ ಪಿಯುಸಿ (1st PUC ) ಮತ್ತು 2ನೇ ಪಿಯುಸಿ (2nd PUC Students) ವಿದ್ಯಾರ್ಥಿಗಳಿಂದ ಉಚಿತ ಲ್ಯಾಪ್‌ಟಾಪ್‌ಗಾಗಿ (Free Laptop Scheme) ಅರ್ಜಿ ಆಹ್ವಾನ.

ಬೆಂಗಳೂರು : ಗೃಹಲಕ್ಷ್ಮೀ,  (Gruha Lakshmi) ಗೃಹಜ್ಯೋತಿ ಯೋಜನೆಯ (Gruha Jyothi Scheme) ಜಾರಿಯ ಬೆನ್ನಲ್ಲೇ ಕರ್ನಾಟಕ ಸರಕಾರ (Karnataka Government) ಹೊಸ ಯೋಜನೆಯೊಂದನ್ನು (New Scheme) ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಇದೀಗ ಉಚಿತವಾಗಿ ಲ್ಯಾಪ್‌ಟಾಪ್‌ (Free Laptop Scheme) ನೀಡುವುದಾಗಿ ಘೋಷಣೆ ಮಾಡಿದೆ. ಈ ಯೋಜನೆಯ ಲಾಭ ಪಡೆಯ ಬೇಕಾದ್ರೆ ಸಪ್ಟೆಂಬರ್‌ 26ಕ್ಕೆ ಮೊದಲು ಅರ್ಜಿಯನ್ನು ಸಲ್ಲಿಸಬೇಕಾಗಿದೆ.

ಕರ್ನಾಟಕ ಕಾರ್ಮಿಕ ಇಲಾಖೆಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ 2023-24ನೇ ಸಾಲಿನಲ್ಲಿ ಓದುತ್ತಿರುವ 1ನೇ ಪಿಯುಸಿ ಮತ್ತು 2ನೇ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾರ್ಮಿಕ ಅಧಿಕಾರಿ-1, ಉಪ ವಿಭಾಗ ಬೆಂಗಳೂರು ಅಡಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಆಯಾ ವೃತ್ತ ಕಚೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಈ ಸೌಲಭ್ಯವನ್ನು ಪಡೆಯಬಹುದು. ಅಲ್ಲದೇ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸ್ವೀಕರಿಸುವ ಕಚೇರಿಗೆ ಸಲ್ಲಿಸಬಹುದು.

Karnataka Govt New Scheme Free Laptop To Students Apply Before September 26
Image Credit To Original Source

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ : ಸೆಪ್ಟೆಂಬರ್‌ನಲ್ಲಿ 8 ದಿನ ಶಾಲೆಗಳಿಗೆ ರಜೆ ಘೋಷಣೆ

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ, ಉಪ ವಿಭಾಗ-1, ಬೆಂಗಳೂರು. ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಕಟ್ಟಡ, ಮೊದಲ ಮಹಡಿ, ಮಂಜುನಾಥ ನಗರ ಬಾಗಲಗುಂಟೆ ಬೆಂಗಳೂರು-73 ಅಥವಾ ದೂರವಾಣಿ ಸಂಖ್ಯೆ 9845587605, 8105084941, ಉಪ ವಿಭಾಗ-1 ಬೆಂಗಳೂರು ಸಂಪರ್ಕಿಸಬಹುದು ಎಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಲ್ಯಾಪ್‌ಟಾಪ್‌ ಯೋಜನೆ ಅರ್ಜಿಗೆ ಅಗತ್ಯವಾದ ದಾಖಲೆಗಳು:

  • ನಿರ್ಮಾಣ ಕಾರ್ಮಿಕರ ನೋಂದಣಿ ಕಾರ್ಡ್ (ಪ್ರಮಾಣಪತ್ರ)
  • ವಿದ್ಯಾರ್ಥಿ ಅಧ್ಯಯನ ಪ್ರಮಾಣಪತ್ರ
  • ಕಾಲೇಜು ದಾಖಲಾತಿ ರಶೀದಿ

    Karnataka Govt New Scheme Free Laptop To Students Apply Before September 26
    Image Credit to Original Source

10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ :

ಇನ್ನು ಕರ್ನಾಟಕ ಸರಕಾರವು ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೊಸ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಲ್ಲಿನ ಅಪೌಷ್ಠಿಕತೆಯನ್ನು ಹೋಗಲಾಡಿಸುವುದು ಮುಖ್ಯ ಉದ್ದೇಶವಾಗಿದೆ. 2023-24 ರ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದ ಮಾರ್ಗಸೂಚಿಗಳನ್ನು ಬಿಸಿ ಆಹಾರದೊಂದಿಗೆ ಮೊಟ್ಟೆಗಳನ್ನು ತಿನ್ನದ ಮಕ್ಕಳಿಗೆ ಬೇಯಿಸಿದ ಮೊಟ್ಟೆ, ಬಾಳೆಹಣ್ಣು ಅಥವಾ ಚಿಕ್ಕಿಯನ್ನು ನೀಡಲಾಗುತ್ತದೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯ ಮಕ್ಕಳಿಗೆ ಪೋಷಣ-ಮಧ್ಯಾಹ್ನದ ಊಟ ಯೋಜನೆಯಡಿ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿ ಮೊಟ್ಟೆ, ಬಾಳೆಹಣ್ಣು ಅಥವಾ ಚಿಕ್ಕಿಯನ್ನು ವರ್ಷದಲ್ಲಿ ಒಟ್ಟು 80 ದಿನಗಳ ಅವಧಿಗೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನಲ್ಲಿ ಒಟ್ಟು 80 ದಿನಗಳ ಅವಧಿಗೆ ಒದಗಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

ಪ್ರಮಾಣೀಕೃತ ಸ್ಥಳೀಯ ಮಾರುಕಟ್ಟೆ ಅಂಗಡಿ, ವ್ಯಾಪಾರ ಸಂಸ್ಥೆ, ಹತ್ತಿರದ ವ್ಯಾಪಾರ ಕೇಂದ್ರ, ಮೊಟ್ಟೆ/ಬಾಳೆ ರೈತರು, ಕಡಲೆಕಾಯಿ ಚಿಕ್ಕಿ ತಯಾರಿಸಲು ಗೃಹ ಉದ್ಯಮದಂತಹ ಆಹಾರ ಸಂಸ್ಕಾರಕ. ಯೂನಿಟ್‌ಗಳಿಂದ ಪ್ರತಿ ವಾರ ವಿತರಣೆಗಾಗಿ ಮೊಟ್ಟೆಗಳು ಮತ್ತು ಬಾಳೆಹಣ್ಣು ಅಥವಾ ಕಡಲೆಕಾಯಿ ಚಿಕ್ಕಿ ಅಗತ್ಯ ಪ್ರಮಾಣದಲ್ಲಿ, ಮುಕ್ತ ಮಾರುಕಟ್ಟೆಯಲ್ಲಿ ಅರ್ಹ ವ್ಯಾಪಾರಿಗಳಿಂದ ಗುಣಮಟ್ಟದ ಖಚಿತ ಖರೀದಿ.

ಈ ನಿಟ್ಟಿನಲ್ಲಿ ಅಧಿಕೃತ ಬಿಲ್ ಪಡೆಯುವುದು ಮತ್ತು ವೋಚರ್ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ವಿತರಣೆಯ ನಿಗದಿತ ದಿನದಂದು ಹಾಜರಿರುವ ಪ್ರತಿ ವಿದ್ಯಾರ್ಥಿ ಫಲಾನುಭವಿಗಳಿಗೆ ವಿತರಿಸಲಾದ ಮೊಟ್ಟೆ/ಬಾಳೆಹಣ್ಣು ಅಥವಾ ಚಿಕ್ಕಿ ಪೌಷ್ಟಿಕಾಂಶದ ಆಹಾರದ ಸ್ವೀಕೃತಿಗಾಗಿ ಆಯಾ ತರಗತಿಯಲ್ಲಿ ಪ್ರತ್ಯೇಕ ಸ್ವೀಕೃತಿ ಪತ್ರವನ್ನು ಇಟ್ಟುಕೊಳ್ಳುವ ಮತ್ತು ದಾಖಲೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಆಯಾ ಶಾಲೆಯ ವರ್ಗ ಶಿಕ್ಷಕರಿಗೆ ನೀಡಲಾಗಿದೆ.

Karnataka Govt New Scheme Free Laptop for Students Apply Before September 26

Comments are closed.