ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇವಿ ಕಾರುಗಳದ್ದೇ ಕಾರುಬಾರು. ಮಾರುತಿ, ಟಾಟಾ, ಹುಂಡೈ ಕಂಪೆನಿಗಳು ಇವಿ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ಸದ್ಯದ ಸ್ಥಿತಿಯಲ್ಲಿ ಬಡ ಹಾಗೂ ಮಧ್ಯಮದ ವರ್ಗದವರು ಇವಿ ಕಾರುಗಳನ್ನು ಕೊಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಲಕ್ಷಾಂತರ ರೂಪಾಯಿ ವ್ಯಯಿಸಿ ಕಾರು ಖರೀದಿಸೋದು ಸದ್ಯ ಕನಸಿನ ಮಾತು. ಆದ್ರೀಗ ಬಡವರು, ಮಧ್ಯಮ ವರ್ಗದವರಿಗಾಗಿಯೇ ಭಾರತೀಯ ಮಾರುಕಟ್ಟೆ ಅತ್ಯಂತ ಕಡಿಮೆ ಬೆಲೆಯ ಕಾರುಗಳು ಪ್ರವೇಶಿಸಲು ಸಜ್ಜಾಗಿವೆ.
ಮಾರುತಿ ಕಂಪೆನಿ ಮಾರುತಿ ಸರ್ವೋ (Maruti Cervo) , ವಾಕ್ಸ್‌ವೊಗನ್ ಕಂಪೆನಿ ವೋಕ್ಸ್‌ವ್ಯಾಗನ್ ಅಪ್ (Volkswagen Up), ದಟ್ಸನ್ ಕಂಪೆನಿ ದಟ್ಸನ್ ಕ್ರಾಸ್ (Datsun Cross) ಹಾಗೂ ಟಾಟಾ ಕಂಪೆನಿ ಟಾಟಾ ಕೈಟ್ 5 (Tata Kite 5) ಮುಂದಿನ ಕೆಲವೇ ತಿಂಗಳುಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಕ್ಸುರಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿವೆ. ಅದ್ರಲ್ಲೂ ಮಾರುತಿ ಸರ್ವೋ ಕಾರು ಸದ್ಯ ಮಾರುಕಟ್ಟೆ ಪ್ರವೇಶಿಸಲಿರುವ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆ ಪಾತ್ರವಾಗಿದೆ.
ಸದ್ಯ ಕಂಪೆನಿ ಘೋಷಣೆ ಮಾಡಿರುವಂತೆ ಈ ಕಾರು ಕೇವಲ 3 ಲಕ್ಷ ರೂಪಾಯಿಗೆ ಗ್ರಾಹಕರ ಕೈ ಸೇರಲಿದೆ. ಹಾಗಾದ್ರೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಅತ್ಯಂತ ಕಡಿಮೆ ಬೆಲೆಯ ಕಾರುಗಳು ಯಾವುವು. ಯಾವ ಕಾರನ್ನು ಖರೀದಿ ಮಾಡಿದ್ರೆ ಉತ್ತಮ. ಕಾರಿನ ಫೀಚರ್ಸ್ ಏನು ? ಬೆಲೆ ಎಷ್ಟು ? ಈ ಕುರಿತ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಮಾರುತಿ ಸರ್ವೋ (Maruti Cervo)
ಸದ್ಯ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಮಾರುತಿ ಸುಜುಕಿ ಕಂಪೆನಿಯ ಮಾರುತಿ ಸರ್ವೋ ಕಾರು ಅತ್ಯಂತ ಕಡಿಮೆ ಬೆಲೆ ಕಾರು ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಸದ್ಯ ಎಕ್ಸ್ ಶೋರೂಂ ಬೆಲೆ 3 ಲಕ್ಷ ರೂಪಾಯಿ ಎಂದು ನಿಗದಿ ಪಡಿಸಲಾಗಿದೆ. ನೋಡಲು ಸಾಕಷ್ಟು ಆಕರ್ಷಕವಾಗಿರುವ ಕಾರು 28 ಕಿ.ಮೀ./ ಲೀ ಮೈಲೇಜ್ ನೀಡುತ್ತದೆ.
ಮಾರುತಿ ಕಂಪೆನಿ ಈಗಾಗಲೇ ಕಾರಿನ ಲುಕ್, ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಆದರೆ ಯಾವಾಗ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಅನ್ನೋದು ಖಚಿತವಾಗಿಲ್ಲ. ಮಾರುತಿ ಸುಜುಕಿ ಕಂಪನೆ ಈಗಾಗಲೇ ಆಲ್ಟೋ, ಆಲ್ಟೋ ಕೆ10 ಕಾರುಗಳನ್ನ ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡಿತ್ತು.
ಇದನ್ನೂ ಓದಿ : Tata Nexon Facelift : ಕೇವಲ 8.10 ಲಕ್ಷಕ್ಕೆ ಬಿಡುಗಡೆ ಆಯ್ತು ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್
ಆಲ್ಟೋ, ಮಾರುತಿ 800 ಸೇರಿದಂತೆ ಇತರ ಕಾರುಗಳಿಗೆ ಹೋಲಿಕೆ ಮಾಡಿದ್ರೆ ಮಾರುತಿ ಸರ್ವೋ ಲುಕ್‌ಗೆ ಗ್ರಾಹಕರು ಬೋಲ್ಡ್ ಆಗುವುದಂತೂ ಗ್ಯಾರಂಟಿ. ಸುಮಾರು 4ರಿಂದ 6 ಬಣ್ಣಗಳಲ್ಲಿ ಕಾರು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. 2023 ರಲ್ಲಿಯೇ ಕಾರನ್ನು ನಿರೀಕ್ಷೆ ಮಾಡಲಾಗುತ್ತಿದೆ.

ವೋಕ್ಸ್‌ವ್ಯಾಗನ್ ಅಪ್ (Volkswagen Up)
ಮಾರುತಿ ಕಂಪೆನಿ ಮಾತ್ರವಲ್ಲದೇ ವೋಕ್ಸ್‌ವ್ಯಾಗನ್ ಕಂಪೆನಿ ಅತ್ಯಂತ ಕಡಿಮೆ ಬೆಲೆಯ ಕಾರನ್ನು ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ. ವೋಕ್ಸ್‌ವ್ಯಾಗನ್ ಅಪ್ ಕಾರು ಕೇವಲ 4 ಲಕ್ಷ ರೂಪಾಯಿ (ಎಕ್ಸ್‌ಶೋ ರೂಂ ಬೆಲೆ)ಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ವೋಕ್ಸ್‌ವ್ಯಾಗನ್ ಅಪ್ ಕಾರು ನೋಡಲು ವೋಕ್ಸ್‌ವ್ಯಾಗನ್ ಪೋಲೋ ಕಾರನ್ನೇ ಹೋಲುವಂತಿದೆ.
ಇನ್ನು ಅತ್ಯಂತ ಕಡಿಮೆ ಬೆಲೆಯ ಅಪ್ ಕಾರು ಪೆಟ್ರೋಲ್ ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, 21ಕಿ.ಮೀ/ ಲೀಟರ್ ಮೈಲೇಜ್ ನೀಡಲಿದೆ ಎನ್ನಲಾಗುತ್ತಿದೆ. ಆದರೆ ಎಷ್ಟು ಬಣ್ಣಗಳಲ್ಲಿ ಕಾರು ಮಾರುಕಟ್ಟೆ ಪ್ರವೇಶಿಸಲಿದೆ ಅನ್ನೋ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಇನ್ನು ವೋಕ್ಸ್‌ವ್ಯಾಗನ್ ಅಪ್ ಕಾರು ಯಾವಾಗ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ ಅನ್ನೋದು ಖಚಿತವಾಗಿಲ್ಲ. ಆದರೆ ಕಾರಿನ ಫಸ್ಟ್ ಲುಕ್ ನೋಡಿರುವ ಗ್ರಾಹಕರು ಸಾಕಷ್ಟು ಫಿಧಾ ಆಗಿದ್ದಾರೆ. ವೋಕ್ಸ್‌ವ್ಯಾಗನ್ ಕಾರು ಖರೀದಿಸಲು ಕನಸು ಕಾಣುತ್ತಿರುವವರಿಗೆ ಇದೊಂದು ಸುವರ್ಣಾವಕಾಶ.

ದಟ್ಸನ್ ಕ್ರಾಸ್ (Datsun Cross)
ಭಾರತೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ದರ್ಜೆಯ ಕಾರುಗಳನ್ನು ಪೂರೈಕೆ ಮಾಡಿರುವ ದಟ್ಸನ್ ಕಂಪೆನಿ ಇದೀಗ ಅತ್ಯಂತ ಕಡಿಮೆ ಬೆಲೆಯ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈಗಾಗಲೇ ದಟ್ಸನ್ ಕ್ರಾಸ್ ಕಾರಿನ ಲುಕ್ ಬಿಡುಗಡೆ ಮಾಡಿದೆ. ಕಂಪೆನಿ ಹೇಳಿಕೊಂಡಿರುವ ಪ್ರಕಾರ 4.40 ಲಕ್ಷ ರೂಪಾಯಿಗೆ ಈ ಹೊಸ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಆದರೆ ಸದ್ಯಕ್ಕೆ ಗೋಲ್ಡನ್ ಯೆಲ್ಲೋ ಕಲರ್ ಕಾರಿನ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಎಷ್ಟು ಬಣ್ಣ, ಎಷ್ಟು ಮಾದರಿಯಲ್ಲಿ ಬರಲಿದೆ ಅನ್ನೋ ಗುಟ್ಟನ್ನೂ ಕೂಡ ಕಂಪೆನಿ ಬಿಟ್ಟುಕೊಟ್ಟಿಲ್ಲ. 2023ರ ಅಂತ್ಯದಲ್ಲಿ ಈ ಕಾರು ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಅದ್ರಲ್ಲೂ ಮಾರುತಿ ಕಂಪೆನಿಯ ಆಲ್ಟೋ, ಆಲ್ಟೋ ಕೆ10, ಎಸ್‌ಪ್ರೆಸೋ, ಇಕೋ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡುವುದು ಖಚಿತ.

ಟಾಟಾ ಕೈಟ್ 5 (Tata Kite 5)
ಟಾಟಾ ಕಂಪೆನಿ ಇತ್ತೀಚಿನ ವರ್ಷಗಳಲ್ಲಿ ದುಬಾರಿ ಹಾಗೂ ಅತ್ಯಂತ ಕಡಿಮೆ ಬೆಲೆಯ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡುವ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಕಾರನ್ನು ಮಾರಾಟ ಮಾಡಿದ ಹೆಗ್ಗಳಿಕೆ ಟಾಟಾ ಮೋಟಾರ್ಸ್‌ಗೆ ಸಲ್ಲುತ್ತದೆ.
ಟಾಟಾ ನೆಕ್ಸಾನ್ ಇವಿ ಕಾರನ್ನು ಇತ್ತೀಚಿಗಷ್ಟೇ ಬಿಡುಗಡೆ ಮಾಡಿತ್ತು. ಇದೀಗ ಭಾರತೀಯ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಯ ಮತ್ತೊಂದು ಕಾರನ್ನು ಪರಿಚಯಿಸಲು ಮುಂದಾಗಿದೆ. ಟಾಟಾ ಹೊಸ ಕಾರಿಗೆ ಟಾಟಾ ಕೈಟ್ 5 ಎಂದು ಹೆಸರಿಡಲಾಗಿದೆ. ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ಕಾರುಗಳ ಪೈಕಿ ಕಡಿಮೆ ಬೆಲೆಯ ದುಬಾರಿ ಕಾರು ಇದಾಗಿದೆ.
ಇದನ್ನೂ ಓದಿ : ಕೇವಲ 6.99 ಲಕ್ಷ ರೂ.ಗೆ ಬಿಡುಗಡೆಯಾಯ್ತು ಹ್ಯುಂಡೈ I20 ಕಾರು : ಫೀಚರ್ಸ್ ಮಾತ್ರ ಅತ್ಯದ್ಬುತ
ಟಾಟಾ ಕೈಟ್ 5 ಕಾರಿನ ಬೆಲೆ 4.50 ಲಕ್ಷ ಎಂದು ಕಂಪೆನಿ ಘೋಷಿಸಿದೆ. ಆದರೆ ಕಾರಿನ ಫಸ್ಟ್ ಲುಕ್ ಇನ್ನೂ ರಿಲೀಸ್ ಮಾಡಿಲ್ಲ. ಕಾರು ಸಾಮಾನ್ಯವಾಗಿ 17.1 ಕಿ.ಮೀ/ಲೀಟರ್ ಮೈಲೇಜ್ ನೀಡಲಿದೆ. ಇತರ ಕಾರುಗಳಿಗೆ ಹೋಲಿಕೆ ಮಾಡಿದ್ರೆ ಮೈಲೆಜ್ ಕೊಂಚ ಕಡಿಮೆಯೇ ಅನಿಸುತ್ತದೆ. ಭಾರತೀಯ ಮಾರುಕಟ್ಟೆಗೆ ಸೇಫ್ಟಿ ಕಾರುಗಳನ್ನು ಪರಿಚಯಿಸಿರುವ ಟಾಟಾ ಇದೀಗ ಟಾಟಾ ಕೈಟ್ 5 ಕಾರಿನಲ್ಲಿಯೂ ಸೇಫ್ಟಿ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎನ್ನಲಾಗುತ್ತಿದೆ. ಟಾಟಾ ಕೈಟ್ ಬಗ್ಗೆ ಗ್ರಾಹಕರು ಸಾಕಷ್ಟು ನಿರೀಕ್ಷೆಯನ್ನು ಇಟ್ಟು ಕೊಂಡಿದ್ದಾರೆ.
upcoming cheepest cars in india 2023 Maruti Cervo Datsun Cross Volkswagen Up Tata Kite 5