ಸಿಂಗೂರ್ ಭೂವಿವಾದ ಪ್ರಕರಣಕ್ಕೆ (Singur Tata Motors Dispute) ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ (KWBIDC) ವಿರುದ್ದದ ವಿವಾದಲ್ಲಿ ಟಾಟಾ ಮೋಟಾರ್ಸ್ (Tata Motors) ಗೆಲುವು ಕಂಡಿದೆ. ಅಲ್ಲದೇ ಟಾಟಾ ಮೋಟಾರ್ಸ್ ಕಂಪೆನಿಗೆ ಬಂಗಾಲ ಸರಕಾರ ₹ 766 ಕೋಟಿ ಪರಿಹಾರ ನೀಡುವಂತೆ ನ್ಯಾಯಾಲಯ (arbitral tribunal) ಆದೇಶಿಸಿದೆ.

ಟಾಟಾ ಮೋಟಾರ್ಸ್ ಸಿಂಗೂರ್ ಜಮೀನು ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಸೋಮವಾರ ಜಯಿಸಿದೆ. ಕೇವಲ ದಂಡ ವಿಧಿಸಿರುವುದು ಮಾತ್ರವಲ್ಲ ₹766 ಕೋಟಿ ರೂಪಾಯಿ ದಂಡದ ಮೊತ್ತದ ಜೊತೆಗೆ 2016 ರಿಂದ 11% ದರದಲ್ಲಿ ಬಡ್ಡಿಯನ್ನು ಪಾವತಿಸುವಂತೆ ಕೇಳಿದೆ. ಮೂರು-ಸದಸ್ಯ ಆರ್ಬಿಟ್ರಲ್ ಟ್ರಿಬ್ಯೂನಲ್ ಮುಂದೆ ಹೇಳಲಾದ ಬಾಕಿ ಉಳಿದಿರುವ ಆರ್ಬಿಟ್ರಲ್ ಇದೀಗ ಅಂತಿಮವಾಗಿ ಟಾಟಾ ಮೋಟಾರ್ ಪರ ನ್ಯಾಯ ಮಂಡಳಿ ತೀರ್ಪು ನೀಡಿದೆ.
ಇದನ್ನೂ ಓದಿ : ಟಾಟಾ ಕಾರುಗಳಲ್ಲಿ ಇನ್ಮುಂದೆ ಅಲೆಕ್ಸಾ : Tata Nexon, Nexon.Ev, ಹ್ಯಾರಿಯರ್, ಸಫಾರಿ ಕಾರುಗಳಲ್ಲಿ ಹೊಸ ಅನುಭವ
ಪಶ್ಚಿಮ ಬಂಗಾಳ ಸರಕಾರವು ಉತ್ಪಾದನಾ ಘಟಕವನ್ನು ನಿರ್ಮಿಸಲು ಟಾಟಾ ಮೋಟಾರ್ಸ್‌ಗೆ ೧೦೦೦ ಎಕರೆ ಕೃಷಿ ಭೂಮಿಯನ್ನು ನೀಡಿತ್ತು. ಆದರೆ ಇದೇ ಭೂಮಿಗೆ ಸಂಬಂಧಿಸಿದಂತೆ ರೈತರು ಹಾಗೂ ರಾಜಕೀಯ ಮುಖಂಡರು ತೀವ್ರವಾಗಿ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಕಂಪೆನಿಯು ತನ್ನ ಯೋಜನೆಯನ್ನು ರದ್ದುಪಡಿಸಿಲು ನಿರ್ಧರಿಸಿದೆ. ಈ ನಡುವಲ್ಲೇ ಟಾಟಾ ಮೋಟಾರ್ಸ್ ತನ್ನ ಘಟಕವನ್ನು ಗುಜರಾತ್‌ಗೆ ಸ್ಥಳಾಂತರಿಸಿದೆ.
ಹಲವು ಸಮಯಗಳ ಕಾಲ ನಡೆದ ವಾದ ವಿವಾದದ ನಂತದಲ್ಲಿ ನ್ಯಾಯಮಂಡಳಿಯ, ಅಂತಿಮವಾಗಿ ಟಾಟಾ ಮೋಟಾರ್ಸ್ ಲಿಮಿಟೆಡ್ (TML) ಪರವಾಗಿ ತೀರ್ಪು ಪ್ರಕಟಿಸಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ ರೂ.765.78 ಕೋಟಿಗಳ ಪರಿಹಾರ ಧನದ ಜೊತೆಗೆ ಸೆಪ್ಟೆಂಬರ್ 1, 2016 ರಿಂದ ಶೇಕಡಾ 11%ರ ಬಡ್ಡಿದರದಲ್ಲಿ ದಂಡವನ್ನು ಪಾವತಿಸುವಂತೆ ಸೂಚನೆಯನ್ನು ನೀಡಿದೆ.
ಇದನ್ನೂ ಓದಿ : ಮಾರುತಿ ದಸರಾ ಆಫರ್ : ಮಾರುತಿ ಸುಜುಕಿ ಜಿಮ್ನಿ ಕಾರು ಖರೀದಿಸಿದ್ರೆ ಸಿಗುತ್ತೆ 50000 ರೂ.
2006 ರಲ್ಲಿ ಭಾರತದ ಪ್ರಮುಖ ಆಟೋಮೊಬೈಲ್ ಕಂಪೆನಿಯಾಗಿರುವ ಟಾಟಾ ಮೋಟಾರ್ಸ್ ಅಧ್ಯಕ್ಷ ರತನ್ ಟಾಟಾ ಅವರು ಪಶ್ಚಿಮ ಬಂಗಾಲ ರಾಜ್ಯದ ಸಿಂಗೂರಿನಲ್ಲಿ ಟಾಟಾ ನ್ಯಾನೋ ಕಾರುಗಳ ಉತ್ಪಾದನಾ ಘಟಕ ಸ್ಥಾಪನೆಯ ಕುರಿತು ಘೋಷಣೆ ಮಾಡಿದ್ದರು. ಅಲ್ಲದೇ ಪಶ್ವಿಮ ಬಂಗಾಲ ಸರಕಾರ ನ್ಯಾನೋ ಕಾರು ಘಟಕಕ್ಕೆ 1000 ಎಕರೆ ಜಮೀನು ನೀಡುವುದಕ್ಕೆ ಒಪ್ಪಿಕೊಂಡಿದ್ದರು.

ಆದರೆ ರೈತರ ಹೋರಾಟದ ನಂತರ 2008 ರಲ್ಲಿ ನ್ಯಾನೋ ಕಾರು ಘಟಕವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ 2011 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಮಮತಾ ಬ್ಯಾನರ್ಜಿ ಅವರು ಟಾಟಾ ಮೋಟಾರ್ಸ್‌ಗೆ ನೀಡಿದ್ದ ಭೂಮಿಯನ್ನು ರೈತರಿಗೆ ಹಿಂದಿರುಗಿಸುವ ಕುರಿತು ಸುಗ್ರೀವಾಜ್ಞೆ ಹೊರಡಿಸಿದ್ದರು. ರಾಜ್ಯ ಸರಕಾರದ ಕ್ರಮದ ವಿರುದ್ದ ಟಾಟಾ ಮೋಟಾರ್ಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ : TVS Ronin : ಟಿವಿಸ್ ರೋನಿನ್ ಸ್ಪೆಷಲ್ ಎಡಿಷನ್ ಬೈಕ್ ಬಿಡುಗಡೆ : ಬೆಲೆ 1,72,700 ರೂ
ಸುದೀರ್ಘ ವಿಚಾರಣೆಯ ನಂತರದಲ್ಲಿ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಲ ಸರಕಾರ ಹಾಗೂ ಟಾಟಾ ಮೋಟಾರ್ಸ್ ನಡುವಿನ ಒಪ್ಪಂದವನ್ನು ರದ್ದುಗೊಳಿಸಿದೆ. ಆದರೆ ನ್ಯಾನೋ ಕಾರುಗಳ ಸ್ಥಾಪನೆಗೆ ಹೂಡಿಕೆ ಮಾಡಿರುವ ಹಣದ ಪರಿಹಾರಕ್ಕಾಗಿ ಟಾಟಾ ಮೋಟಾರ್ಸ್ ಆರ್ಬಿಟ್ರಲ್ ಟ್ರಿಬ್ಯುನಲ್ ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯ ಮಂಡಳಿ ಇದೀಗ ಮಹತ್ವದ ತೀರ್ಪು ನೀಡಿದೆ.
west bengal Government Will give rs 766 crore Compensation to tata Motors arbitral tribunal Order