ಕೇವಲ 8.69 ಲಕ್ಷ ರೂ.ಬೆಲೆಗೆ ಟಾಟಾ ಟಿಯಾಗೊ ಇವಿ : ಎಲೆಕ್ಟ್ರಿಕ್ ಕಾರಿನ ಮಾರಾಟದ ಮೇಲೆ ಭರ್ಜರಿ ಆಫರ್‌

ಟಾಟಾ ಮೋಟಾರ್ಸ್‌ ಜನಸಾಮಾನ್ಯರಿಗಾಗಿ ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಮಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ತುಮಕೂರು ನಗರಗಳಲ್ಲಿ ಗರಿಷ್ಠ ಮಾರಾಟವನ್ನು ದಾಖಲಿಸಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್‌ ಕಾರು (Tata Tiago EV  Cars) ಇದೀಗ ಕರ್ನಾಟಕದಲ್ಲಿ ಅತೀ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಈಗಾಗಲೇ ಅತೀ ಹೆಚ್ಚು ಮಾರಾಟವಾದ ದಾಖಲೆಯನ್ನು ಹೊಂದಿರುವ ಟಾಟಾ ಟಿಯಾಗೋ (Tata Tiago ) ಎಲೆಕ್ಟ್ರಿಕ್‌ ಕಾರು ಮಾರಾಟದ ಮೇಲೆ ಇದೀಗ ಭರ್ಜರಿ ಆಫರ್‌ ಘೋಷಿಸಲಾಗಿದೆ. ಅದ್ರಲ್ಲೂ ಕೇವಲ 8.69 ಲಕ್ಷ ರೂ. ಬೆಲೆ ಟಾಟಾ ಟಿಯಾಗೊ ಇವಿ ಖರೀದಿಸಬಹುದಾಗಿದೆ.

Tata Tiago EV at just Rs 8.69 Lakh Great offer on sale of electric car
Image Credit : tata Motors

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಬೆಲೆ ದುಬಾರಿಯಾಗಿದೆ. ಆದರೆ ಟಾಟಾ ಮೋಟಾರ್ಸ್‌ ಜನಸಾಮಾನ್ಯರಿಗಾಗಿ ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಮಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ತುಮಕೂರು ನಗರಗಳಲ್ಲಿ ಗರಿಷ್ಠ ಮಾರಾಟವನ್ನು ದಾಖಲಿಸಿದೆ.

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. EV ಮಾರುಕಟ್ಟೆ ಬೆಳೆಯುತ್ತಿರುವ ಸಮಯದಲ್ಲಿ ಟಿಯಾಗೋ ಎಲೆಕ್ಟ್ರಿಕ್‌ ಕಾರುಗಳು ಭರ್ಜರಿ ಮಾರಾಟದ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಅದ್ರಲ್ಲೂ EV ಮಾರಾಟದಲ್ಲಿ ಕರ್ನಾಟಕದಲ್ಲೇ 12% ರಷ್ಟಿದೆ.

ಇದನ್ನೂ ಓದಿ : TVS Ronin : ಟಿವಿಸ್‌ ರೋನಿನ್ ಸ್ಪೆಷಲ್‌ ಎಡಿಷನ್‌ ಬೈಕ್‌‌ ಬಿಡುಗಡೆ : ಬೆಲೆ 1,72,700 ರೂ

ಟಾಟಾ ಟಿಯಾಗೋ ಕಾರು ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ. ಭಾರತದಲ್ಲಿ ಪರಿಸರ ಸ್ನೇಹಿ ಕಾರುಗಳು ಎನಿಸಿಕೊಂಡಿರುವ ಎಲೆಕ್ಟ್ರಿಕ್‌ ಕಾರುಗಳು ಅತ್ಯಂತ ಪ್ರಭಾವ ಶಾಲಿಯಾಗಿದ್ದು, ಅತ್ಯಾಧುನಿಕ ವೈಶಿಷ್ಠ್ಯತೆಗಳನ್ನು ಒಳಗೊಂಡಿದೆ. ಅದ್ರಲ್ಲೂ ಮೆಟ್ರೋ ಅಲ್ಲದ ಪ್ರದೇಶಗಳಲ್ಲಿನ ಗ್ರಾಹಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಟಾಟಾ ಟಿಯಾಗೋ ಕಾರು ಖರೀದಿಸಿದ್ದಾರೆ.

ಟಾಟಾ ಟಿಯಾಗೋ ಕಾರುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಇನ್ನೊಂದು ಇಂಟರಸ್ಟಿಂಗ್‌ ವಿಚಾರ ಎಂದ್ರೆ ಟಿಯಾಗೋ ಮಹಿಳೆಯ ಫೇವರೇಟ್‌ ಕಾರು ಎನಿಸಿಕೊಂಡಿದೆ. ಅದ್ರಲ್ಲೂ ಶೇ. 24% ಮಹಿಳೆಯರು ಟಾಟಾ ಟಿಯಾಗೋ ಕಾರು ಖರೀದಿ ಮಾಡಿದ್ದಾರೆ. ಅಷ್ಟಕ್ಕೂ ಟಾಟಾ ಟಿಯಾಗೋ ಕಾರುಗಳಿಗೆ ಬೇಡಿಕೆ ಬರಲು ಪ್ರಮುಖ ಕಾರಣ ಕಾರುಗಳಲ್ಲಿನ ಫೀಚರ್ಸ್.

Tata Tiago EV at just Rs 8.69 Lakh Great offer on sale of electric car
Image Credit : tata Motors

ಇದನ್ನೂ ಓದಿ : ಟಾಟಾ ಸಫಾರಿ, ಟಾಟಾ ಹ್ಯಾರಿಯರ್ 2023 ಭಾರತದ ಅತ್ಯಂತ ಸುರಕ್ಷಿತ ಕಾರು : ಪ್ರಯಾಣಿಕರ ಸುರಕ್ಷತೆಯಲ್ಲಿ ಮತ್ತೆ ಟಾಟಾ ನಂ.1

ಟಾಟಾ ಟಿಯಾಗೋ ಇವಿ ಆವೃತ್ತಿಯ ಕಾರು ಒಂದು ಬಾರಿ ಚಾರ್ಜ್‌ ಮಾಡಿದ್ರೆ 315 ಕಿ.ಮೀ. ಮೈಲೇಜ್‌ ನೀಡುತ್ತದೆ. ಅಲ್ಲದೇ ಟಾಟಾ ಟಿಯಾಗೊ EV 10,000 MIDC ಶ್ರೇಣಿಯೊಂದಿಗೆ, ಮೆಟ್ರೋ ಹೊರತುಪಡಿಸಿದ ಪ್ರದೇಶದಲ್ಲಿನ ಜನರ ನೆಚ್ಚಿನ ಕಾರು ಎನಿಸಿಕೊಳ್ಳುತ್ತಿದೆ.  Tiago EV ಕಾರು ಪರಿಸರ ಸ್ನೇಹಿಯಾಗಿದೆ.

ಎಲೆಕ್ಟ್ರಿಕ್‌ ಕಾರುಗಳು ಕಡಿಮೆ ಪ್ರಮಾಣದಲ್ಲಿ ಇಂಗಾಲವನ್ನು ಹೊರ ಸೂಸುತ್ತಿದ್ದು, ಶುದ್ದ ಸಾರಿಗೆ ಎನಿಸಿಕೊಂಡಿದೆ. ಅಲ್ಲದೇ ಟಿಯಾಗೋ ಕಾರುಗಳನ್ನು ಚಲಾಯಿಸುವುದು ಅತ್ಯಂತ ಸುಲಭ. ಕಾರಿನಲ್ಲಿ ಎರಡು ಡ್ರೈವಿಂಗ್‌ ಮೋಡ ಆಪ್ಶನ್‌ ನೀಡಲಾಗಿದೆ. ಸಿಟಿ ಮತ್ತು ಸ್ಪೋರ್ಟ್‌ ಆವೃತ್ತಿಯಲ್ಲಿ ಪ್ರತೀ ಡ್ರೈವ್‌ ಅಪ್‌ ಮೋಡನಲ್ಲಿ ನಾಲ್ಕು ಗಂತದ ರಿಜೇನ್‌ ಸೆಟ್ಟಿಂಗ್‌ ಒಳಗೊಂಡಿದೆ.

ಇದನ್ನೂ ಓದಿ : ಟಾಟಾ ಮೋಟಾರ್ಸ್‌ ವಿರುದ್ದ ದೀದಿಗೆ ಮುಖಭಂಗ : ಸಿಂಗೂರು ಭೂ ವಿವಾದ, ಪಶ್ಚಿಮ ಬಂಗಾಲ ಸರಕಾರಕ್ಕೆ 766 ಕೋಟಿ ದಂಡ

ಅಲ್ಲದೇ ಅತ್ಯಂತ ಕೈಗೆಟುಕುವ ದರದಲ್ಲಿ ಈ ಕಾರು ಗ್ರಾಹಕರಿಗೆ ಲಭ್ಯವಿದೆ. ಕಾರು ಮೈಲೇಜ್‌, ಸುಲಭ ಡ್ರೈವಿಂಗ್‌ ಮಾತ್ರವಲ್ಲ ರಿಚಾರ್ಜ್‌ ಮಾಡಲು ಕೂಡ ಅತ್ಯಂತ ಸುಲಭ ಎನಿಸುತ್ತದೆ. ಸದ್ಯ ಕರ್ನಾಟಕ ಪ್ರತೀ ಜಿಲ್ಲೆಯ ಹೆದ್ದಾರಿ ಭಾಗಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಅಳವಡಿಸಲಾಗಿದೆ. ಇದರಿಂದಾಗಿ ಬಹು ಬೇಗನೆ, ಸುಲಭವಾಗಿ ಚಾರ್ಜಿಂಗ್‌ ಮಾಡಬಹುದಾಗಿದೆ.

Tata Tiago EV at just Rs 8.69 Lakh Great offer on sale of electric car
Image Credit : tata Motors

ಟಾಟಾ ಟಿಯಾಗೊ ಇವಿ (ಎಕ್ಸ್‌ ಶೋರೂಂ) ಬೆಲೆ
ಸದ್ಯ ಭಾರತದ ಇವಿ ಕಾರುಗಳ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೋ ಅತ್ಯಂತ ಬೇಡಿಕೆಯನ್ನು ಪಡೆದುಕೊಂಡಿದೆ. ಬೆಂಗಳೂರಲ್ಲಿ Tata Tiago EV ಆರಂಭಿಕ ಬೆಲೆ ರೂ. 8.69 ಲಕ್ಷ. ಕಡಿಮೆ ಬೆಲೆಯ ಮಾದರಿಯು Tata Tiago EV XE ಬೇಸ್ ಆಗಿದೆ ಮತ್ತು ಟಾಟಾ Tiago EV XZ ಪ್ಲಸ್ ಟೆಕ್ LUX ಫಾಸ್ಟ್ ಚಾರ್ಜ್‌ನ ಅತ್ಯಂತ ಬೆಲೆಯ ಮಾದರಿಯು ರೂ. 12.04 ಲಕ್ಷ.

Tata Tiago EV at just Rs 8.69 Lakh Great offer on sale of electric car

Comments are closed.