ಚೀನಾದ ಜನಪ್ರಿಯ ಎಲೆಕ್ಟ್ರಾನಿಕ್ ಗ್ಯಾಜೆಟ್ ತಯಾರಕ ಕಂಪನಿ ಶಿಯೋಮಿ (Xiaomi) ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರುಗಳ ವಿಭಾಗಕ್ಕೆ ಪ್ರವೇಶಿಸಲಿದೆ. ಅದು ಶಿಯೋಮಿಯಿಂದ ಬಿಡುಗಡೆಯಾಗುತ್ತಿರುವ ಮೊದಲ ಎಲೆಕ್ಟ್ರಿಕ್ ಕಾರು (Xiaomi Electric Car). ಮಾಹಿತಿಯ ಪ್ರಕಾರ ಶಿಯೋಮಿ, ಇತ್ತಿಚೆಗೆ ಕಾರನ್ನು ಪರೀಕ್ಷಿಸುವ ಸಮಯದಲ್ಲಿ ಪತ್ತೆಯಾಗಿದೆ. ಈ ಕಾರು ಆಟೋ ಎಕ್ಸ್ಪೋ 2023 ಯಲ್ಲಿ BYD ತೋರಿಸಿದ ಸೀಲ್ ಎಲೆಕ್ಟ್ರಿಕ್ ಕಾರನ್ನು ಬಹುವಾಗಿ ಹೋಲುತ್ತಿದೆ. ಈ ಕಾರಿನಲ್ಲಿ ಏನನ್ನು ನಿರೀಕ್ಷಿಸಬಹುದು?
ಫೋಟೋದಲ್ಲೇನಿದೆ?
ಫೋಟೋ ದಿಂದ ಬಹಿರಂಗವಾದ ಮಾಹಿತಿಯ ಪ್ರಕಾರ, ಇದು ಸೆಡಾನ್ ಕಾರಾಗಿದೆ. ಎಲೆಕ್ಟ್ರಿಕ್ ಕಾರು, ಶಿಯೋಮಿಯ ಮುಂಬರುವ ಕಾರು ಎಂದು ಹೇಳಲಾಗುತ್ತಿದೆ. ಇದನ್ನು ಕಂಪನಿಯು ಶೀಘ್ರದಲ್ಲೇ ಪರಿಚಯಿಸುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಕಾರಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಂಡು ಬರುತ್ತಿದೆ.
ಕಾರಿನ ಹೆಸರು ಏನಿರಬಹುದು?
ಮಾಹಿತಿಯ ಪ್ರಕಾರ, ಶಿಯೋಮಿ ಈ ಎಲೆಕ್ಟ್ರಿಕ್ ಕಾರನ್ನು MS 11 ಎಂದು ಹೆಸರಿಸಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಪತ್ತೆಯಾದ ಕಾರಿನ ಮೇಲೆ ಈ ಹೆಸರನ್ನು ಬರೆಯಲಾಗಿದೆ. ಇದರಿಂದಾಗಿ ಕಂಪನಿಯು ಅದೇ ಹೆಸರಿನೊಂದಿಗೆ ಈ ಕಾರನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಕಾರಿನ ಹೊರ ವಿನ್ಯಾಸ
ಶಿಯೋಮಿಯ ಹೊಸ ಎಲೆಕ್ಟ್ರಿಕ್ ಕಾರಿನ ಹೊರ ನೋಟದ ಕುರಿತು ಹೇಳುವುದಾದರೆ ಅದರ ನೋಟವು ಫೋಟೋದಲ್ಲಿ ಸಾಕಷ್ಟು ಅದ್ಭುತವಾಗಿ ಕಾಣುತ್ತದೆ. ಇದು BYD ಯ ಸೀಲ್ ಕಾರಿನಂತೆಯೇ ಕಾಣುತ್ತದೆ. ಇದರಲ್ಲಿ ಎಲ್ ಇಡಿ ಲೈಟ್ ಬಳಸಲಾಗಿರಬಹುದು. ಕಾರಿಗೆ ಡ್ಯುಯಲ್ ಕಲರ್ ಟೋನ್ ನೀಡಲಾಗಿದ್ದು, ಏರೋಡೈನಾಮಿಕ್ ಲುಕ್ ನೀಡಲಾಗಿದೆ. ಈ ಕಾರಿನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು ಮತ್ತು ಅದರ ಡ್ರೈವ್ ಶ್ರೇಣಿಯು ಹೆಚ್ಚು ಉತ್ತಮವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Best Ground Clearance Cars : ಈ ಬಜೆಟ್ ಕಾರುಗಳನ್ನೊಮ್ಮೆ ನೋಡಿ; ಇವು ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಕಾರುಗಳು
ಚೀನಾದಲ್ಲಿ ಲಾಂಚ್ ಮಾಡಬಹುದು
ಮಾಧ್ಯಮ ವರದಿಗಳ ಪ್ರಕಾರ, ಚೀನಾದಲ್ಲಿ ಪರೀಕ್ಷೆಯ ಸಮಯದಲ್ಲಿ ಹಲವು ಬಾರಿ ಕಾಣಿಸಿಕೊಂಡಿರುವ ಈ ಕಾರನ್ನು ಕಂಪನಿಯು ಮೊದಲು ಚೀನಾದಲ್ಲಿ ಪರಿಚಯಿಸಬಹುದು. ನಂತರ ಇದನ್ನು ಪ್ರಪಂಚದ ಇತರ ದೇಶಗಳಲ್ಲಿ ಮಾರಾಟಕ್ಕೆ ಕಳುಹಿಸಬಹುದು.
ಈ ಕಾರಿನ ಪ್ರತಿಸ್ಪರ್ಧಿ
ಈ ಕಾರು BYDಯ ಸೀಲ್ ಅನ್ನು ಹೋಲುತ್ತದೆ, ಆದ್ದರಿಂದ ಇದು BYD ಯೊಂದಿಗೆ ನೇರ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Best Mileage Cars : ಈ ಕಾರುಗಳು ನೋಡ್ಲಿಕ್ಕಷ್ಟೇ ಸೂಪರ್ ಅಲ್ಲ, ಮೈಲೇಜ್‌ನಲ್ಲೂ ಸೂಪರ್; ಯಾವ ಕಾರುಗಳು ಅಂತೀರಾ…
(Xiaomi Electric Car may launch soon. Know some important factors of the upcoming electric car)