Cow smuggling case: ಹಸು ಕಳ್ಳಸಾಗಣೆ ಪ್ರಕರಣ: 120 ಮಂದಿ ಅರೆಸ್ಟ್‌

ಬರೇಲಿ: (Cow smuggling case) ಜಿಲ್ಲೆಯ ಎಲ್ಲಾ 29 ಪೊಲೀಸ್ ಠಾಣೆಗಳಲ್ಲಿ ಅಭಿಯಾನ ನಡೆಸುವ ಮೂಲಕ ಬರೇಲಿ ಪೊಲೀಸರು ಗೋಹತ್ಯೆಯಲ್ಲಿ ತೊಡಗಿರುವ ಅಪರಾಧಿಗಳನ್ನು ಬಂಧಿಸಿದ್ದು, 120 ಆರೋಪಿಗಳ ಪೈಕಿ 110 ಮಂದಿಯನ್ನು ಹಸು ಕಳ್ಳಸಾಗಣೆ ತಡೆಗಟ್ಟುವ ಕ್ರಮದಲ್ಲಿ ಮತ್ತು 10 ಆರೋಪಿಗಳನ್ನು ಗೋಹತ್ಯೆ ಪ್ರಕರಣಗಳಲ್ಲಿ ಬಂಧಿಸಲಾಗಿದೆ.

ಜಿಲ್ಲೆಯ ಎಲ್ಲಾ 29 ಪೊಲೀಸ್ ಠಾಣೆಗಳಲ್ಲಿ ಅಭಿಯಾನ ನಡೆಸುವ ಮೂಲಕ ಬರೇಲಿ ಪೊಲೀಸರು ಗೋಹತ್ಯೆಯಲ್ಲಿ ತೊಡಗಿರುವ ಅಪರಾಧಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಹಸು ಕಳ್ಳಸಾಗಣೆ ತಡೆಗಟ್ಟುವ ಕ್ರಮವಾಗಿ 110 ಹಸು ಕಳ್ಳಸಾಗಣಿಕೆ ನಡೆಸುತ್ತಿದ್ದವರು ಮತ್ತು ಗೋಹತ್ಯೆ ಪ್ರಕರಣಗಳಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

ಎಸ್‌ಎಸ್‌ಪಿ ಅಖಿಲೇಶ್ ಚೌರಾಸಿಯಾ ಅವರ ಸೂಚನೆ ಮೇರೆಗೆ ಈ ಅಭಿಯಾನ ನಡೆಸಲಾಗಿದ್ದು, ಆರೋಪಿಗಳಿಂದ ಭಾರೀ ಪ್ರಮಾಣದ ಗೋಮಾಂಸ ಮತ್ತು ಗೋಹತ್ಯೆಗೆ ಬಳಸುವ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋಹತ್ಯೆ ಪ್ರಕರಣಗಳಿಂದ ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿದ್ದು, ಕಳೆದ ಹಲವು ದಿನಗಳಿಂದ ಬರೇಲಿಯಲ್ಲಿ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಹಿಂದೂ ಸಂಘಟನೆಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಲ್ಲದೇ ಹಲವು ಬಾರಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದಾದ ಬಳಿಕ ಎಸ್‌ಎಸ್‌ಪಿ ಅವರು ಎಲ್ಲಾ ಠಾಣೆಯ ಉಸ್ತುವಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Madurai govt bus accident: ಮರಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್: 10ಕ್ಕೂ ಹೆಚ್ಚು ಮಂದಿಗೆ ಗಾಯ

ಮರಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್: 10ಕ್ಕೂ ಹೆಚ್ಚು ಮಂದಿಗೆ ಗಾಯ

ಮಧುರೈ: ಸರ್ಕಾರಿ ಬಸ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧುರೈ ಬಳಿಯಲ್ಲಿ ನಡೆದಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದು, ಬ್ರೇಕ್ ಕೆಲಸ ಮಾಡದ ಕಾರಣ ಪಕ್ಕದಲ್ಲಿದ್ದ ಮರಕ್ಕೆ ಬಸ್‌ ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ : Assam gang rape: ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಅರೆಸ್ಟ್

ಮಧುರೈ ಪೆರಿಯಾರ್ ಬಸ್ ನಿಲ್ದಾಣದಿಂದ ವಾಡಿಪಟ್ಟಿ ಬಳಿಯ ರಾಮರಾಜಪುರಂ ಗ್ರಾಮಕ್ಕೆ ಐಷಾರಾಮಿ ಬಸ್ ಹೊರಟಿತ್ತು. ಮಧುರೈ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ದುವರಿಮಾನ್ ಬಳಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದು, ಬ್ರೇಕ್ ಕೆಲಸ ಮಾಡದ ಕಾರಣ ಪಕ್ಕದಲ್ಲಿದ್ದ ಮರಕ್ಕೆ ಬಸ್‌ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ ನಲ್ಲಿದ್ದ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ : Sexual assault on girl: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಕರಾಟೆ ತರಬೇತುದಾರನಿಗೆ 10 ವರ್ಷ ಜೈಲು ಶಿಕ್ಷೆ

Cow smuggling case: Cow smuggling case: 120 people arrested

Comments are closed.